ಒಮ್ಮೆ ನಾನು ನಿನ್ನ ನೋಡಲಿಕೆ
ಒಮ್ಮೆ ನಾನು ನಿನ್ನ ನೋಡಲಿಕೆ
ನುಗ್ಗಿ ಕೊನೆಗೆ ನೀರಾಗಿ
ನಿನ್ನಂತೆ ನೀಲಿಯಾಗಿ ಬಿಡುತ್ತೇನೆ
ಹಾಗಾದಾಗ ನೀನು ನಾನಾಗಿ
ನನ್ನೊಳಗನ್ನೆಲ್ಲಾ ಗಳಹಿಬಿಡುತ್ತೀಯೆ
ಮತ್ತು
ನನ್ನೆದೆಯ ಬರಿಯುಸಿರ ಕಂಡು,
ಅಚ್ಚರಿಗೊಂಡು, ನಿನ್ನ
ಬಿಟ್ಟೋಡಿ ನೀನು ನೀನೆ ಆದಾಗ
ನಾನು
ನಿನ್ನೊಳಗಾಗದೇ
ನಿನ್ನ ತಂಗಾಳಿ
ನಿನ್ನ ನೀಲಿಯ ದಾಳಿಗಳ
ಮೌನಪಕ್ಷಿಯ ಹಾಗುಂಡು
ದ್ವೇಷಗಳ ಕಟ್ಟಿಕೊಂಡೊದ್ದು
ಒಳಗೊಳಗೇ ಉರಿದು
ಮಂಜಾಗಿ ಕುಳಿತು
ಅಳುತ್ತೇನೆ
ನಾನು ನೀನುಗಳ ಅಂತರವ ಕಂಡು ರೋಸಿ.