ಕ್ಷಮೆ
ಕ್ರಿಯಾಶೂನ್ಯತೆಯ
ಕ್ಷೀಣಕೇಂದ್ರದ ಕೆಳಗೆ
ಕೈಕಟ್ಟಿ ಕುಳಿತಂಥ ನನ್ನ
ಏಕಾಂಗಿಯಾಗಿರದೆ ಕೊಳೆತಂಥ ನನ್ನ
ನೀನೊಮ್ಮೆ ಕ್ಷಮಿಸಲಿಕ್ಕಿಲ್ಲ, ಗೆಳೆಯಾ ?
ಒಳಹುಳುಕುಗಳ
ಕೃತಕ ಕಳವಳದ
ಸುಡುಗಾಡು ಸಾವ ಸುರಿಮಳೆಯ ಕಂಡು
ಹೇಸಲಿಕ್ಕಿಲ್ಲ, ಗೆಳೆಯಾ ?
ಚಿಕ್ಕೆ ಚೂರಾಗಿ ಚಂದ್ರನಿಗೆ ಬೇಕಾದ
ಬೆಳಕಿನುಂಡೆಗಳಲೊಂದು ನಾನಾಗಲಿಲ್ಲದ್ದ ನೋಡಿ
ಕಣ್ಣನ್ನು ಮುಚ್ಚಲಿಕ್ಕಿಲ್ಲ, ಗೆಳೆಯಾ ?
ಹೃದಯ ರಂಗದಲ್ಲೊಂದೆಳೆಯ ನೋವಿಲ್ಲ
ಮಿತ್ರಸಂಗದಲ್ಲೊಂದೆಳೆಯ, ಬೆಳೆಯ ಕಾವಿಲ್ಲ,
ಗೆಳೆಯಾ…..
ಇಳೆಯ ಹಸಿರಿಲ್ಲ