ಅನಾವರಣ
೨೩-೩-೮೮
ಬೆಂಗಳೂರು
ಕಣ್ಣಿನಲ್ಲಿ ಕರಗುತ್ತಿದೆ ಮೋಹಕ ದೃಶ್ಯ
ಮಣ್ಣಿನಲ್ಲಿ ಮರುಗುತ್ತಿದೆ ಬೇರಿನ ವೇಷ
ನೆತ್ತಿಗೇರಿ ಸೂರ್ಯನ ತುದಿಗಾಲಲಿ ಮರಣ
ಸತ್ತು ಸವಕಲಾದ ತತ್ವ ತರವಲ್ಲದ ಕದನ
ಕಿವಿಯಲ್ಲಿ ಕೆಂಡದಂತೆ ಪ್ರೀತಿಯೊಡೆದ ಶಬ್ದ
ಹಣೆಯಲ್ಲಿದೆ ಇಷ್ಟ ಬದುಕು ಬಯಲಲ್ಲಿದೆ ಯುದ್ಧ
ತುಟಿಗಂಟಿದ ಚರ್ಮದ ಪೊರೆ ಚೀರುತ್ತಿದೆ ಪದಗಳ
ಎದೆಗಿಚ್ಚಿನ ಬೆಂಕಿಯಲ್ಲಿ ಸುಡುತ್ತಿರುವೆ ಎದೆಗಳ
ಆಕಾಶದ ಅಂಚಿನಲ್ಲಿ ಅಡಗಿವೆ ಅಂಗಾಂಗ
ಅನಾವರಣವಾಗುತ್ತಿದೆ ಅನುಭವಗಳ ಸಂಗ
ಅಕ್ಷರಗಳ ಅಚ್ಚೊತ್ತಿದೆ ಬೆರಳಿಗೆ ಬೆರಳಾಗಿ
ನಕ್ಷತ್ರದ ಜತೆಯಾಗಿದೆ ಧೂಮಕೇತು ಬಾಗಿ
ಅಗಲಿದ ಕ್ಷಣಗಳ ಹಾಗೇ ಮನಸಿನಲ್ಲಿ ಒಡಕು
ವೇದನೆಗಲ ಸಾಧ್ಯತೆಯಲಿ ಸೊರಗುತ್ತಿದೆ ಬದುಕು