ಕೊರೆವ ನೀರು ಕಳಲೆ ಪಲ್ಯ ಮತ್ತು
ಮಿಯಾವ್ ಎಂಬ ಬೆಕ್ಕು, ಹೊರಗೆ ಮಂಜು
ಲಾಟೀನಿನಲ್ಲಿ ಬೆಳಕು, ಕಾವೇರಿಯಿಂದ ಶಬ್ದ.
ಕಣ್ಣಿನಲ್ಲಿ ಪ್ರೀತಿ ಅಥವಾ ನೀನು
ಕಿರುಗುಡುವ ರೇಡಿಯೋ ಪಾಪಿನ್ಸ್ ರ್‍ಯಾಪರು ಮತ್ತು
ಸುಖಕೊಟ್ಟ ಮುತ್ತು. ಅಂಗೈಯಲ್ಲಿ ಅಂಗೈ
ಬೆಟ್ಟದಂತೆ ಮಾತು, ದಾರಿಯಂತೆ ಮೌನ
ಕಣ್ಣಿನಲ್ಲಿ ಪ್ರೀತಿ ಅಥವಾ ನೀನು
ಬರೆದ ಪದಗಳಲ್ಲಿ ಪರಾಗ, ಪದಗಳಲ್ಲಿ ಮಕರಂದ.
ಕತ್ತಲಿನ ನಡುವೆ ನಿರೀಕ್ಷೆ ಹೊತ್ತ ನಿರಾಸೆ.
ದಿನಗಳ ನೆನಪು ಮತ್ತು ಮರದ ನೆರಳು
ಕಣ್ಣಿನಲ್ಲಿ ಪ್ರೀತಿ ಅಥವಾ ನೀನು.
…………………………
೨೨-೫-೮೬
ಬೆಂಗಳೂರು
1 Comment
Pingback: ಸಂಬಂಧ : ನನ್ನ ಬದುಕಿನ ಹೈಪರ್‌ಲಿಂಕ್‌ಗಳ ಮೊದಲ ಕಥೆ ಓದಿ! | Mitra Maadhyama