ಭೇಟಿ
೨೮-೩೧-೮೫
ದಾವಣಗೆರೆ
ಭೇಟಿ
೨೮-೩೧-೮೫
ದಾವಣಗೆರೆ
ಮುಜುಗರದ ನಡುವೆ ಅಪರಿಚಿತ ಹಾಡಿದ್ದೆ;
ನಾನೊಬ್ಬ ಹಾಡುಗಾರ
ಎದೆಬಟ್ಟಲ ಪ್ರಾಂಗಣದಲ್ಲಿ
ನಡುಗಂಭ…. ಮೌನ; ಗಾಢಾಂಧಕಾರ.
ಒಂದಷ್ಟು ಕಾಲದ ಕೆಳಗೆ
ಇಂಥದೇ ಮನೆಯೊಳಗೆ
ನನ್ನ ಹುಡುಗುತನ ಕಳೆದಿತ್ತೆಂಬ ಅನುಮಾನ
ಹೌದು ಇವರೇ, ನೆನಪಿಸಿದ್ದೀರಿ… ನಿಜ
ಈಗ ಜತೆಗಿದ್ದೀರಲ್ಲ – ಅದೇ ಸಮಾಧಾನ.
ಒಂದೇ ನೆಲದ ಬಿತ್ತಿದೆದೆಗಳು ನಾವು… ಅಲ್ಲವೇ
ಪರಿಚಯವೆಲ್ಲ ಬೇರಿನಲ್ಲಿ?
ಇಲ್ಲಿ ದಿಕ್ಕುಗಳಲ್ಲಿ ಚೆದುರಿಹೋದರು ಕೂಡ
ಹೀಗೆ ಅಚಾನಕ ಭೇಟಿ; ಗುಡಿಯ ಸೂರಿನಲ್ಲಿ.
ನನ್ನ ಸಖಿ, ಇಲ್ಲಿ ಜಾರು ಬಯಲಲ್ಲಿ
ಬಿಂದಿಗೆ ಹಿಡಿದು ನಿಂತಿರುವಾಗ ಅನಿಸಿದ್ದು;
ನಿಮ್ಮ ಜತೆ ಕಥೆ ಕವನ ಜೋಕುಗಳ ಹಂಚುತ್ತ
ನಾನಷ್ಟು ಹಗುರಾಗಬೇಕು.
ಮತ್ತೊಮ್ಮೆ ಬರುವೆ ಕಾಯುವಿರೇನು
ಪರಿಪೂರ್ಣ ಹೊಸ ಹಾಡುಗಳ ಹೊಸೆದು?
ಮತ್ತೊಮ್ಮೆ ನಿಮ್ಮ ಬಿಚ್ಚು ನಗೆಗಾಗಿ ಬರುವೆ
ಒಬ್ಬಂಟಿ ಕಾಲುದಾರಿಯ ಮೇಲೆ ನಡೆದು.
1 Comment
Pingback: ಸಂಬಂಧ : ನನ್ನ ಬದುಕಿನ ಹೈಪರ್‌ಲಿಂಕ್‌ಗಳ ಮೊದಲ ಕಥೆ ಓದಿ! – ಬೇಳೂರುಸುದರ್ಶನ