ಅಯಾಹುವಾಸ್ಕಾ: ನಿಮ್ಮ ಭವಿಷ್ಯ ಎಂದೋ ಗೊತ್ತಿತ್ತು!
ಈ ಅಂಕಣದಲ್ಲಿ ಕೆಲವು ತಿಂಗಳುಗಳ ಹಿಂದೆ ಒಂದು ವಿಷಯವನ್ನು ಪ್ರಸ್ತಾಪಿಸಿದ್ದೆ: ಗ್ರಹಾಮ್ ಹ್ಯಾಂಕಾಕ್ ಎಂಬ ಪತ್ರಕರ್ತ ಅಯಾಹುವಾಸ್ಕ ಎಂಬ ಮಾದಕ ಸಸ್ಯದ ರಸವನ್ನು ಕುಡಿದು ಕೆಲವು ಪ್ರಾಗೈತಿಹಾಸಿಕ ವಿಷಯಗಳ ಸಂಶೋಧನೆ ನಡೆಸಿದ್ದ ಎಂದು. ಸಾವಿರಾರು ವರ್ಷಗಳ ಹಿಂದೆ ವಿಶ್ವದಾದ್ಯಂತದ ಗುಹೆಗಳಲ್ಲಿ ಒಂದೇ ಬಗೆಯ ಚಿತ್ರಗಳನ್ನು ನಮ್ಮ ಆದಿಮಾನವರು ಬರೆದಿದ್ದರಲ್ಲಿ ಏನೋ ಸಾಮ್ಯವಿದೆ ಎಂಬ ಹ್ಯಾಂಕಾಕ್‌ನ ಹುಡುಕಾಟ ಅವನ `ಸೂಪರ್‌ನ್ಯಾಚುರಲ್ಸ್' ಪುಸ್ತಕದಲ್ಲಿ ವಿವರವಾಗಿ ದಾಖಲಾಗಿದೆ.
ಈ ಪುಸ್ತಕದ ಗುಂಗಿನಲ್ಲೇ ಮತ್ತಷ್ಟು ಸಂಶೋಧನೆ (ಅಂದರೆ ಇಂಟರ್‌ನೆಟ್ ಹುಡುಕಾಟ) ನಡೆಸಿದಾಗ ಇನ್ನಷ್ಟು ಮಾಹಿತಿಗಳು ದೊರಕಿದವು. ಬಹುಶಃ ನಮ್ಮ ಬದಲಾಗುತ್ತಿರುವ ಬದುಕಿನ ಮಗ್ಗುಲುಗಳನ್ನು ಈ ಮಾಹಿತಿಗಳು ಬಿಚ್ಚಿಡುತ್ತವೆ.
ಅಯಾಹುವಾಸ್ಕಾ ಸಸ್ಯದ ರಸವನ್ನು ಕುಡಿದು ಒಂದು ಬಗೆಯ ಪ್ರಜ್ಞೆಯಲ್ಲಿದ್ದಾಗಲೇ ಇನ್ನೊಂದು ಜಗತ್ತಿನ, ಚಿತ್ರವಿಚಿತ್ರ ಜೀವಿಗಳ ದೃಶ್ಯಗಳನ್ನು ಕಣ್ಣಾರೆ ಅನುಭವಿಸುವ ಬಗ್ಗೆ ಇನ್ನೂ ಹಲವು ಪತ್ರಕರ್ತರು ಗ್ರಹಾಮ್ ಹ್ಯಾಂಕಾಕ್‌ನಿಗಿಂತ ಮುಂಚೆಯೇ ಸ್ವಾನುಭವಕ್ಕೆ ಒಳಗಾಗಿ ಡಾಕ್ಯುಮೆಂಟರಿಗಳನ್ನು ನಿರ್ಮಿಸಿದ್ದಾರೆ. ಅಯಾಹುವಾಸ್ಕಾದ ಬಗ್ಗೆಯೇ ಹಲವರು ಸಂಶೋಧನೆಗಳನ್ನು ಕೈಗೊಂಡು ಪುಸ್ತಕಗಳನ್ನು ಬರೆದಿದ್ದಾರೆ.
ಹಿಂದಿನ ಅಂಕಣ ಓದದವರಿಗೆ ಪುಟ್ಟ ಮಾಹಿತಿ: ಆಯಾಹುವಾಸ್ಕಾ ಎನ್ನುವುದು ಒಂದು ಸಸ್ಯದ ಹೆಸರು. ಈ ಸಸ್ಯದ ರಸವನ್ನು ಕುಡಿದರೆ ನಿಮಗೆ ಕಾಣುವ ದೃಶ್ಯಗಳನ್ನು ನೀವು ಅಲ್ಲಗಳೆಯಲಾಗುವುದಿಲ್ಲ. ವಿಚಿತ್ರ ಎಂದರೆ ಹತ್ತಾರು ಸಾವಿರ ವರ್ಷಗಳಿಂದ ಈ ರಸವನ್ನು ಕುಡಿಯುತ್ತ ಬಂದ ಎಲ್ಲರಿಗೂ ಒಂದೇ ಬಗೆಯ ಚಿತ್ರಗಳು ಕಾಣಿಸುತ್ತವೆ. ಅಂದರೆ ಗೊತ್ತಾಯಿತಲ್ಲ, ಮಾನವನ ನಾಗರಿಕತೆಯ ಬೆಳವಣಿಗೆಗಳೆಲ್ಲ ಮನುಷ್ಯನ ಬುದ್ಧಿ ಬಎ ಳೆದ ಹಾಗೆ ನಡೆದಂಥವು ಎಂಬ ಮಾತನ್ನು ಈ ಅನುಭವಗಳು ಪ್ರಶ್ನಿಸುತ್ತವೆ. ಈ ಜ&a
mp;#32
23;ತ್ತಿನಲ್ಲಿ ಎಲ್ಲರಿಗೂ ಎಲ್ಲಾ ಕಾಲದಲ್ಲೂ ಕಾಣಿಸುವ ಸತ್ಯವು ಒಂದೇ ತೆರನಾಗಿರುತ್ತದೆ ಎಂಬುದಕ್ಕೆ ಅಯಾಹುವಾಸ್ಕಾ ಸಾಕ್ಷಿಗಳನ್ನು ಒದಗಿಸುತ್ತದೆ.
ಅಯಾಹುವಾಸ್ಕಾದಲ್ಲಿ ಇರುವ ಪ್ರಮುಖ ರಾಸಾಯನಿಕದ ಹೆಸರು : ಡೈಮೀಥೈಲ್‌ಟ್ರೈಪ್ಟಾಮೈನ್ (ಡಿಎಂಟಿ). ಆಯಾಹುವಾಸ್ಕಾವನ್ನು ಕಾಪಿ (ಕಾಫಿ ಅಲ್ಲ, ಬ್ಯಾನಿಸ್ಟಿರಿಯೋಪ್ಸಿಸ್ ಕಾಪಿ ಎಂಬ ಸಸ್ಯ) ಗಿಡದ ಜೊತೆಗೆ ಕುದಿಸಿ, ಕೆಲವು ವಿಶಿಷ್ಟ ಆಚರಣೆಗಳೊಂದಿಗೆ ಸೇವಿಸುತ್ತಾರೆ, ಪೆರು ಮತ್ತು ಈಕ್ವೆಡಾರ್‌ನ ಶಮಾನ್‌ಗಳು ಎಂದು ಕರೆಯುವ ಧಾರ್ಮಿಕ ಮುಂದಾಳುಗಳು. ಅವರೇನು, ಈ ಪಂಥವನ್ನು ಅನುಸರಿಸುವ ಎಲ್ಲ ಕುಟುಂಬಗಳ ಎಲ್ಲ ಸದಸ್ಯರೂ ಈ ದ್ರವವನ್ನು ಅತ್ಯಂತ ಭಕ್ತಿಯಿಂದ ಸೇವಿಸಿ ಮನುಕುಲದ ಅನಾದಿಕಾಲದ ದೃಶ್ಯವೈಭವವನ್ನು ಕಾಣುತ್ತಾರೆ. ಅವರ ಪ್ರಕಾರ ಅದುವೇ ಜಗತ್ತಿನ ಭೂತ, ವರ್ತಮಾನ ಮತ್ತು ಭವಿಷ್ಯ. ಅಯಾಹುವಾಸ್ಕಾವನ್ನು ಸೇವಿಸಿದವರು ಕುಟುಂಬಗಳ ನಡುವಣ ಜಗಳಗಳನ್ನು ಪರಿಹರಿಸುತ್ತಾರೆ; ಭವಿಷ್ಯವನ್ನು ಕಾಣುತ್ತಾರೆ; ಶತ್ರುಗಳ ಯೋಜನೆಯನ್ನು ಮುಂಚಿತವಾಗಿಯೇ ಅರಿಯುತ್ತಾರೆ. ಮಾಟವನ್ನು ತೆಗೆಯುತ್ತಾರೆ.
ಆದರೆ ಈ ಅನುಭವವೇ ಇಲ್ಲದ ಕೆಲವು ಮನುಷ್ಯರು ಸರ್ಕಾರ ರಚಿಸಿ ಅದರ ಮದದಲ್ಲಿಯೇ ಇರುವುದು ನಮಗೆ ಗೊತ್ತು! ಅವರು ಆಯಾಹುವಾಸ್ಕಾ ಎನ್ನುವುದು ಒಂದು ಮಾದಕ ಸಸ್ಯ, ಅದರ ರಸಸೇವನೆ ಮಾದಕದ್ರವ್ಯ ಸೇವನೆಗೆ ಸಮ ಎಂದು ಕಾನೂನು ಮಾಡಿದ್ದಾರೆ. ಎಲ್ಲ ದೇಶಗಳಲ್ಲೂ ಈ ದ್ರವ ನಿಷೇಧಿತವಾಗಿದೆ. ಕೆಲವು ದೇಶಗಳಲ್ಲಿ ಈ ಬಗ್ಗೆ ಹೋರಾಟ ನಡೆದು ನಿರ್ಬಂಧ ರದ್ದಾಗಿದೆ.
ರಿಕ್ ಸ್ಟ್ರಾಸ್‌ಮನ್ ಎಂಬಾತ : ಡಿ ಎಂ ಟಿ : ದಿ ಸ್ಪಿರಿಟ್ ಮಾಲಿಕ್ಯೂಲ್ ಎಂಬ ಪುಸ್ತಕವನ್ನು ಬರೆದು ಅದರಲ್ಲಿ ಈ ದ್ರವದ ಬಗ್ಗೆ ತಾನು ನಡೆಸಿದ ಪ್ರಯೋಗಗಳನ್ನು ವಿವರಿಸಿದ್ದಾನೆ. ಟೆರೆನ್ಸ್ ಮೆಕೆನ್ನಾ ಎಂಬಾತ `ದಿ ಫುಡ್ ಆಫ್ ಗಾಡ್ಸ್' ಎಂಬ ಪುಸ್ತಕವನ್ನು ಬರೆದು ಅದರಲ್ಲಿ ಜ್ಞಾನದ ಮುಖ್ಯ ವೃಕ್ಷದ ಸಂಶೋಧನೆ ನಡೆಸಿದ್ದಾನೆ. ಟಾಡ್ ಮ್ಯಾಕ್‌ಆರ್ಮಿಕ್ ಎಂಬಾತ `ಹೌ ಟು ಗ್ರೋ ಮೆಡಿಸಿನಲ್ ಮಾರಿಜು&#
3240
;ಾ' ಎಂಬ ಮಾರ್ಗದರ್ಶಿ ಸೂತ್ರಗಳ ಪುಸ್ತಕವನ್ನೇ ಬರೆದಿದ್ದಾನೆ. ಕೆಲವು ಅಪರೂಪದ ಅನುಭವ ಕೊಡುವ ವಿಶ್ವದ ವಿವಿಧ ಸಸ್ಯಗಳ ಬಗ್ಗೆ ಈತ ಕೊಟ್ಟ ಮಾಹಿತಿ ಅದ್ಭುತ ಎನ್ನಿಸುವಷ್ಟು ವೈವಿಧ್ಯಮಯವಾಗಿದೆ. ಸಾಲ್ವಿಯಾ ಡಿವಿನೋರಮ್ ಎಂಬ ಸಸ್ಯದ ಬಗ್ಗೆ ಡಿ ಎಂ ಟರ್ನರ್ ಎಂಬಾತ ಪುಟ್ಟ ಪುಸ್ತಕವನ್ನು ಬರೆದಿದ್ದಾನೆ. ಮನರಂಜನೆಗೆ ಮತ್ತು ವೈದ್ಯಕೀಯ ನೆರವಿಗಾಗಿ ಮಾರಿಜುನಾವನ್ನು ಹೇಗೆ ಬೆಳೆಯಬೇಕು ಎಂದು ಗ್ರೆಗ್ ಗ್ರೀನ್ ಎಂಬಾತ `ದಿ ಕ್ಯಾನಬೀಸ್ ಗ್ರೋ ಬೈಬಲ್' ಎಂಬ ೪೪೯ ಪುಸ್ತಕವನ್ನು ಬರೆದಿದ್ದಾನೆ. ಆಯಾಹುವಾಸ್ಕಾವನ್ನು ಬಾಲ್ಯದಿಂದಲೂ ಸೇವಿಸುತ್ತ ಬಂದಿರುವ ಪಾಬ್ಲೋ ಅಮರಿಂಗೋನ ದೃಶ್ಯಕಲ್ಪನೆಗಳ ಚಿತ್ರಗಳಿರುವ "ಅಯಾಹುವಾಸ್ಕಾ ವಿಜನ್' ಪುಸ್ತಕವೂ ಇಲ್ಲಿ ಗಮನಾರ್ಹ. ಯಾಕೆಂದರೆ ತಾನು ಕಂಡ ದೃಶ್ಯರೂಪಕ್ಕೆ ತಂದಿರುವ ಪಾಬ್ಲೋ ಅಮರಿಂಗೋ ಒಂದು ಬಗೆಯಲ್ಲಿ ಈ ಸಂಸ್ಕೃತಿಯ ವಕ್ತಾರ.
ಅದಿರಲಿ, ಆಯಾಹುವಾಸ್ಕಾ ಬಳಸುವ ಅಮೆಝಾನ್ ಪ್ರದೇಶದಲ್ಲೇ ತೈಲ ನಿಕ್ಷೇಪಗಳು ಪತ್ತೆಯಾಗಿವೆ. ಈಗ ಅಲ್ಲಿ `ನಾಗರಿಕತೆ' ಮತ್ತು `ಸಂಸ್ಕೃತಿ'ಗಳ ನಡುವೆ ಸಮರ ಶುರುವಾಗಿದೆ. ಅಯಾಹುವಾಸ್ಕಾ ಬಳಸುವವರ ಪ್ರಕಾರ ತೈಲ ಗಣಿಗಳು ಮುಂದೆ ಜಗತ್ತಿಗೇ ಮುಳುವಾಗಲಿವೆ.
ಒಂದು ಗಿಡದ ಬಗ್ಗೆ ಏನೆಲ್ಲ ಸಂಶೋಧನೆ ನಡೆದಿದೆ, ಎಷ್ಟೆಲ್ಲ ಚರ್ಚೆ ನಡೆದಿದೆ…… ಎಂಥ ಪರಿಣಾಮಗಳು ಉಂಟಾಗುತ್ತಿವೆ…….
ಗಿಡಮರಗಳ ಬಗ್ಗೆ ನಮಗಿರುವ ಪ್ರೀತಿ ಕಡಿಮೆಯಾಗುತ್ತ ಹೋದರೆ ಅಯಾಹುವಾಸ್ಕಾ ಕೂಡಾ ನಮ್ಮ ಕೈ ಬಿಡುತ್ತದೆ. ಆಮೇಲೆ ಭವಿಷ್ಯವನ್ನು ಹೇಳಲು ಶಮಾನ್‌ಗಳೂ ಇರುವುದಿಲ್ಲ.
ನಮಗಂತೂ ಏನೂ ಗೊತ್ತಿರುವುದಿಲ್ಲ.
ಅಯಾಹುವಾಸ್ಕಾ ಗಿಡದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಈ ಜಾಲತಾಣವನ್ನು ಸಂಪರ್ಕಿಸಿ: