ಬ್ಲಾಗಿಂಗ್ ಮತ್ತು ಹ್ಯಾಂಗಿಂಗ್
ಫ್ರಾಂಕ್ ಉರ್ಖಾರ್ಟ್ ಎಂಬ ಸ್ಕಾಟ್ಲೆಂಡಿನ ಪತ್ರಕರ್ತ ಬರೆದ ಸುದ್ದಿಕಥೆಯ ಸಾಲುಗಳಿವು:
“ಅದನ್ನು ತಲುಪಲು ನನಗೆ ಎರಡೇ ನಿಮಿಷಗಳು ಸಾಕಾದವು. ಸುಮ್ನೆ ಇಂಟರ್‌ನೆಟ್‌ಗೆ ಹೋದೆ, ಒಂದು ಸರ್ಚ್ ಇಂಜಿನ್‌ನಲ್ಲಿ ಹುಡುಕಿದೆ; ೪೮ ಥರ ಆತ್ಮಹತ್ಯೆ ಮಾಡಿಕೊಳ್ಳೋದು ಹ್ಯಾಗೆ ಎಂದು ತಿಳಿಸೋ ಆ ಜಾಲತಾಣ ನನ್ನೆದುರಿತ್ತು.
“ನನ್ನ ಲಿಂಗ ಮತ್ತು ದೇಹದ ತೂಕವನ್ನು ಅವಲಂಬಿಸಿ ನಾನು ಎಷ್ಟು ಪ್ಯಾರಾಸೆಟಮಾಲ್ ಮಾತ್ರೆಗಳನ್ನು ನುಂಗಬೇಕು ಎಂಬ ಖಚಿತ ಮಾಹಿತಿ ಅಲ್ಲಿತ್ತು. ತೂಕ ಮತ್ತು ಎತ್ತರದ ಕೋಷ್ಟಕವೂ ಅಲ್ಲಿತ್ತು; ಒಬ್ಬ ಮನುಷ್ಯನನ್ನು ನೇಣಿಗೆ ಹಾಕಿ ನೇತಾಡಿಸಿ ಸಾಯಿಸಲು ಬೇಕಾದ ಅನುಪಾತ ಬೇಕಲ್ಲ…. ನೀರಿನಲ್ಲಿ ಮುಳುಗಿ ಸಾಯುವುದು ಹೇಗೆ, ನಮ್ಮನ್ನೇ ನಾವು ಕತ್ತರಿಸಿಕೊಂಡು….. ಹೌದು. ಇವೆಲ್ಲವೂ ಆತ್ಮಹತ್ಯೆಯನ್ನು ಮಾಡಿಕೊಳ್ಳುವವರಿಗೆ ನೀಡಿದ ಹಂತ-ಹಂತದ ಸಲಹೆಗಳ ಜಾಲತಾಣ.
“ಇನ್ನೂ ಹಲವು ಜಾಲತಾಣಗಳಲ್ಲಿ ಸಾಯುವುದಕ್ಕೆ ಅತ್ಯುತ್ತಮ ಮಾರ್ಗ ಯಾವುದು ಎಂದು `ಸ್ನೇಹಿತರು' ಚಾಟ್ (ಹರಟೆ) ರೂಮಿಗೆ ಬಂದು ಉಚಿತವಾಗಿ ಸಲಹೆಗಳನ್ನು ನೀಡುತ್ತಾರೆ. ಇವರನ್ನು `ಟ್ರಾಲ್' ಎಂದು ಕರೆಯುತ್ತಾರೆ. ಆತ್ಮಹತ್ಯೆಗೆ ಎಳೆಸುವ ಹದಿಹರೆಯದವರನ್ನು `ಬಸ್ಸಿಗೆ ಹತ್ತಿಸುವ' ವ್ಯಕ್ತಿಗಳಿವರು.
“ತಂದೆ ತಾಯಂದಿರಿಗೆ ಗೊತ್ತೇ ಇಲ್ಲದ ಇಂಥ ನೂರಾರು ಜಾಲತಾಣಗಳು ಇಂಟರ್‌ನೆಟ್‌ನಲ್ಲಿವೆ. ಮಕ್ಕಳ ಮಲಗುವ ಕೋಣೆಗಳಲ್ಲಿ ಇರುವ ಕಂಪ್ಯೂಟರುಗಳಲ್ಲಿ ಈ ಮಾತುಕತೆಗಳು ಗುಟ್ಟಾಗಿ ನಡೆಯುತ್ತಿದ್ದರೆ ಪಾಲಕರು ಹೊರಗೆ ಯಾವುದೋ ಟಿವಿ ಸಿರಿಯಲ್ ನೋಡುತ್ತಾ ಕೂತಿರುತ್ತಾರೆ.
“ ಮೊರಿಯಾ ವಿವಿಯಾನ್ ಎಂಬ ತಾಯಿ ಆತ್ಮಹತ್ಯೆ ಮಾಡಿಕೊಂಡದ್ದು ಯಾಕೆ ಗೊತ್ತ? ಅವಳ ಮಗಳು ಶೆರಿದಾನ್ ಆರು ತಿಂಗಳುಗಳ ಹಿಂದಷ್ಟೇ ಆಂಟಿ-ಡಿಪ್ರೆಸೆಂಟ್‌ಗಳನ್ನು ತಿಂದು ಸತ್ತಿದ್ದಳು. ತಾನೊಬ್ಬ ವಿಕ್ಷಿಪ್ತ ವ್ಯಕ್ತಿತ್ವದ ಹುಡುಗಿಯೆಂದೂ, ತಿನ್ನುವ ಅವ್ಯವಸ್ಥೆಯ ರೋಗ ತನ್ನಲ್ಲಿದೆ ಎಂದೂ ಅವಳು ಕ್ಸಾಂಗಾ ಎಂಬ &a
mp;#32
28;ಾಲತಾಣದಲ್ಲಿ ಬರೆದುಕೊಂಡಿದ್ದಳು. ಈಗಲೂ ಕ್ಸಾಂಗಾದಲ್ಲಿ ಕ್ಯಾಥಿ ಎಂಬ ಹುಡುಗಿ ಬರೆದಿಟ್ಟ ಚೀಟಿ ಇದೆ: ಆತ್ಮಹತ್ಯೆ ಎಂದರೆ ದೇವರಿಗೆ `ನೋಡು, ನೀನು ನನಗೆ ಮುಕ್ತಿ ಕೊಡಲಾಗೋದಿಲ್ಲ; ಯಾಕಂದ್ರೆ ನಾನೇ ಹೊರಟುಹೋಗಿದ್ದೇನೆ!' ಎಂದು ಹೇಳುವುದು….
“ಇಂಗ್ಲೆಂಡಿನಲ್ಲಿ ೨೦೦೪ರಲ್ಲಿ ಸತ್ತವರಲ್ಲಿ ೬೩೫ ಜನರು ಕೇವಲ ೧೫ರಿಂದ ೨೪ ವರ್ಷ ವಯಸ್ಸಿನ ಹದಿಹರೆದವರು".
ಫ್ರಾಂಕ್ ಈ ಲೇಖನ ಬರೆದದ್ದಕ್ಕೆ ಕಾರಣವಿದೆ: ಜನವರಿಯಲ್ಲಷ್ಟೆ ಇಂಗ್ಲೆಂಡಿನ ಸೈಮನ್ ಕೆಲ್ಲಿ ಎಂಬ ಹದಿನೆಂಟರ ಹುಡುಗ ಇಂಥ ಆತ್ಮಹತ್ಯೆ ಜಾಲತಾಣಕ್ಕೆ ಭೇಟಿ ನೀಡಿದ ಮೇಲೆ ಆತ್ಮಹತ್ಯೆ ಮಾಡಿಕೊಂಡ. `ಹೋಗು, ಇನ್ನೊಂದು ಬದಿಯಲ್ಲಿ ಇರೋ ನಕ್ಷತ್ರಗಳನ್ನು ನೋಡು' ಎಂದು ಯಾರೋ ಇವನಿಗೆ ಸಲಹೆ ಮಾಡಿದರಂತೆ.
ಬ್ರಿಜ್ ಎಂಡ್ ಪ್ರದೇಶದ ೧೭ರ ಹರೆಯದ ನತಾಶಾ ರ್‍ಯಾಂಡೆಲ್ ತನ್ನ ಮನೆಯಲ್ಲೇ ನೇಣು ಹಾಕಿಕೊಂಡು ಸತ್ತಳು. ಪೋರ್ತ್ ಕಾಲ್‌ನ ೧೮ರ ಹರೆಯದ ಡೇಲ್ ಕ್ರೋಲ್‌ನ ಹೆಣ ಎಲ್ಲೋ ಒಂದು ಕಡೆ ಸಿತ್ತಿತು. ೧೯ರ ಹರೆಯದ ಡೇವಿಡ್ ಡಿಲ್ಲಿಂಗ್ ಮನೆಯ ಹತ್ತಿರವೇ ನೇಣು ಹಾಕಿಕೊಂಡಿದ್ದ. ೨೦ರ ಹರೆಯದ ಥಾಮಸ್ ಡೇವೀಸ್ ಕೂಡಾ ನೇಣಿಗೇ ಶರಣಾದ. ಡೇಲ್, ಡೇವಿಡ್ ಮತ್ತು ಡೇವಿಸ್ – ಮೂವರೂ ಪರಸ್ಪರ ಸ್ನೇಹಿತರು. ಆಮೇಲೆ ೧೭ರ ಹರೆಯದ ಝಕಾರಿ ಬಾರ್ನ್ಸ್ ಕೂಡಾ ನೇಣಿಗೆ ಮೊರೆ ಹೋದ. ಲಿಯಾಮ್ ಕ್ಲಾರ್ಕ್ ಉದಯಾನದಲ್ಲಿ ನೇಣು ಹಾಕಿಕೊಂಡಾಗ ಅವನಿಗೆ ಇಪ್ಪತ್ತು ದಾಟಿರಲಿಲ್ಲ. ಅವನ ಗೆಳೆಯ ಗಾರೆಥ್ ಮಾರ್ಗನ್‌ಗೆ ೨೭ ವರ್ಷ. ಅವನೂ ಮನೆಯಲ್ಲೇ… ಮತ್ತೆ ನೇಣಿಗೇ ಶರಣಾದ. ನತಾಶಾ ಕೂಡಾ ಲಿಯಾಮ್‌ನ ಸ್ನೇಹಿತೆ…..
ಓದಲು ಕೊಂಚ ಭಯವಾಗಬಹುದು; ಆದರೆ ಅಂತರಜಾಲದ ಭಯಾನಕತೆಯನ್ನು ತಿಳಿದುಕೊಳ್ಳದೇ ಅದನ್ನೇ ನಾವು ಮಾಹಿತಿಸೋಟಕ್ಕೆ ಬಳಸುತ್ತೇವೆ ಎನ್ನುವುದು ಅಪಾಯಕಾರಿ. ನಮ್ಮ ಮಕ್ಕಳಿಗೆ ಕಂಪ್ಯೂಟರ್ ಗೊತ್ತು; ನಮಗೆ ಗೊತ್ತಿರುವುದಿಲ್ಲ; ಪರವಾಯಿಲ್ಲ ಎಂದು ತಿಳಿದುಕೊಂಡರೆ ಅದು ಅಪರಾಧವೇ. ಇಂಗ್ಲೆಂಡಿನಲ್ಲಿ ನಡೆದಂಥದೇ ಘಟನೆಗಳು ಭಾರತದಲ್ಲೂ ನಡೆಯಲಾರಂಭಿಸಿವೆ. ಶಾಲೆಗಳಲ್ಲಿ ಪಿಸ್ತೂಲಿನ ಸ&am
p;#3
238;್ದು ಕೇಳಿಬಂದಿದೆ. ಶಾಲಾ ಮಕ್ಕಳ ಕಾಮಾಸಕ್ತಿಗೆ ಆಟಿಕೆಗಳಿಗಿಂತ ಅಗ್ಗವಾಗಿರುವ ಮೊಬೈಲ್‌ಗಳು, ಅವುಗಳಲ್ಲಿರುವ ಎಂ ಎಂ ಎಸ್ ಆಯ್ಕೆಗಳು, ಎಸ್ ಎಂ ಎಸ್ ಜೋಕುಗಳು, ಬಾಲಿವುಡ್‌ನ ಫಿಲ್ಮ್‌ಗಳು ಕುಮ್ಮಕ್ಕು ಕೊಡುತ್ತಿವೆ. ಸಿರಿವಂತರ ಮನೆಗಳಲ್ಲಿ ಇಂಥ ಸ್ವೇಚ್ಛೆಯ ಬದುಕು ಸಾಮಾನ್ಯವಾಗಿದೆ ಎಂದು ಸುಮ್ಮನಿರಬೇಡಿ. ಮಧ್ಯಮ ಮತ್ತು ಕೆಳವರ್ಗದ ಯುವ ಸಮುದಾಯದಲ್ಲೂ ಮೊಬೈಲ್ ; ಚಾಟ್ ಜ್ವರ ಜೋರಾಗಿದೆ.
ಫುಟ್‌ಪಾತ್‌ನಲ್ಲಿ ಗುಂಪಾಗಿ ನಿಂತು ಸಿಗರೆಟು ಸೇದುತ್ತ, ಪಾನ್ ಜಗಿಯುವ ಹುಡುಗರ ಸಂಖ್ಯೆ ಗಮನಾರ್ಹವಾಗಿದೆ. ಇಂಥ ಹುಡುಗರು ಯಾವಾಗಲೂ ಗುಂಪಾಗಿ ಬೈಕ್ ಹತ್ತಿ ತಿರುಗುವುದನ್ನು ನೀವು ಬೆಂಗಳೂರಿನಲ್ಲೋ, ಮಂಗಳೂರಿನಲ್ಲೋ ಕಾಣಬಹುದು. ಬೆಂಗಳೂರಿನಲ್ಲಂತೂ ಫುಟ್‌ಪಾತ್ ಎನ್ನುವುದು ಬೈಕ್ ಸವಾರರ ಹೈವೇ ಆಗಿಬಿಟ್ಟಿದೆ.
ಈ ವ್ಯಗ್ರತೆ, ಈ ಮೂರಾಬಟ್ಟೆ ಬದುಕಿಗೆ ಇಂಟರ್‌ನೆಟ್ ಮಾತ್ರ ಕಾರಣವಲ್ಲ; ಹಠಾತ್ತನೆ ಸ್ಫೋಟಗೊಂಡಿರುವ ನಗರೀಕರಣ, ಕ್ಷಣಕ್ಕೊಂದರಂತೆ ಅಪ್ಪಳಿಸುವ ತಂತ್ರeನದ ಆವಿಷ್ಕಾರಗಳು, ದೇಸಿ ಪರಂಪರೆಯಿಂದ ದೂರವಾಗಿರೋ ಕುಟುಂಬಗಳು, ಮೌಲ್ಯವನ್ನು ಕಿಟಕಿಯಾಚೆ ತೂರಿ, ಶಿಕ್ಷಣದ ಘನತೆಯನ್ನು ಎಂದೂ ಅರಿಯದೆ ಸುಮ್ಮನೆ ಪಾಠ ಒಪ್ಪಿಸುವ ಶಿಕ್ಷಕರು, ಭ್ರಷ್ಟವಾಗಿದ್ದರೂ ಚೆನ್ನಾಗಿ ಕೆಲಸ ಮಾಡುವ ಅಕಾರಿಗಳ ಬಗ್ಗೆ ಜನ ಇಟ್ಟಿರುವ ನಂಬಿಕೆಗಳು ( ಅವನು ಕರಪ್ಟ್ ಕಣ್ರೀ, ಆದ್ರೂ ಚೆನ್ನಾಗಿ ಕೆಲಸ ಮಾಡ್ತಾನೆ ಎಂದು ಹಲವರು ಹೇಳಿದ್ದನ್ನು ನೀವು ಕೇಳಿರಬಹುದು) – ಎಲ್ಲರೂ, ಎಲ್ಲವೂ ಕಾರಣ.
ಬೆಂಗಳೂರಿನಲ್ಲಿ ಕಳೆದ ಭಾನುವಾರ ಕನ್ನಡ ಭಾಷೆಯಲ್ಲಿ ಬ್ಲಾಗ್ ಮಾಡುವವರ (ಇಂಟರ್‌ನೆಟ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ದಾಖಲಿಸುವವರ) ಒಂದು ಪುಟ್ಟ ಸಮ್ಮೇಳನ ನಡೆಯಿತು. ಒಂದು ಒಳ್ಳೆಯ ಉದ್ದೇಶಕ್ಕೆ ಬಳಕೆಯಾಗುವ ಸಾಧ್ಯತೆಗಳಿರುವ ಇಂಟರ್‌ನೆಟ್ ಮಾಧ್ಯಮವೂ ಮನುಷ್ಯ ಸಹಜ ವಿಕೃತಿಗಳಿಂದ ಕೂಡಿದೆಯಲ್ಲ ಎಂಬ ಎಚ್ಚರಿಕೆ ಈ ಎಲ್ಲ ಬ್ಲಾಗಿಗಳಿಗೆ ಇದೆ ಎಂದು ನಂಬೋಣ. ಅಷ್ಟಾಗಿಯೂ ಇಂಟರ್‌ನೆಂಟ್ ಹತ್ತ&a
mp;#
3271; ವರ್ಷಗಳಲ್ಲಿ ತಂದಿಟ್ಟ ಅಪಾಯಗಳನ್ನು ಮರೆಯದಿರೋಣ ಎಂಬ ಹಿನ್ನೆಲೆಯಲ್ಲಿ ಇಂಗ್ಲೆಂಡಿನ ಸರಣಿ ಆತ್ಮಹತ್ಯೆಯ ಘಟನೆಯನ್ನು ತಿಳಿಸಿದೆ.
ಮನುಷ್ಯ ಪತ್ರಿಕೆಯನ್ನು ತಂದ; ಈಗ ಮನುಷ್ಯರನ್ನು ಜಿರಳೆಗಳಂತೆ ಸಾಯಿಸುವವರೂ ಪತ್ರಿಕೆಯ ಮೂಲಕವೇ ಪ್ರಚಾರ ಕೈಗೊಂಡಿದ್ದಾರೆ. ಮನುಷ್ಯ ಟಿ ವಿ ಚಾನೆಲನ್ನು ತಂದ ; ಅಲ್ಲೀಗ ನಗರೀಕರಣದ ಸಮವಸ್ತ್ರವನ್ನು ಹೊದಿಸುವ ಕಾಮಗಾರಿ ದಿನದ ೨೪ ತಾಸೂ ನಡೆದಿದೆ. ಮನುಷ್ಯ ರೇಡಿಯೋ ತಂದ. ಅಲ್ಲೀಗ ಯಾವ ದೇಶದ ಯಾವ ತೈಲಕ್ಕಾಗಿ ಎಷ್ಟು ಎಕರೆ ಜಾಗವನ್ನು ಉಧ್ವಂಸಗೊಳಿಸಬೇಕು ಎಂಬ ಲೆಕ್ಕಾಚಾರದ ಸಂದೇಶಗಳು ರವಾನೆಯಾಗುತ್ತಿವೆ. ಮನುಷ್ಯ ಇತ್ತೀಚೆಗೆ ತಂದ ಇಂಟರ್‌ನೆಟ್ ಕೂಡಾ ಅದೇ ಹಾದಿ ಹಿಡಿದಿದೆ. ಬದುಕಲು ಕಲಿತ ಮನುಷ್ಯನೇ ಆತ್ಮಹತ್ಯೆಯನ್ನೂ ಕಲಿಸುವ ಹಾಗೆ, ಮಾಧ್ಯಮಗಳನ್ನು ಕಂಡುಹಿಡಿದ ನಾವು ಅವುಗಳಲ್ಲೇ ನಮ್ಮೆಲ್ಲ ವಿಕಾರಗಳನ್ನೂ ತುಂಬುತ್ತೇವೆ.
ಈ ಧರ್ಮಯುದ್ಧ ಎಲ್ಲ ಮಾಧ್ಯಮಗಳಲ್ಲೂ ನಡೆಯುತ್ತಲೇ ಇರುತ್ತದೆ ಎನ್ನುವಿರಾ? ಮನುಷ್ಯನಲ್ಲಿ ಅಭಿಪ್ರಾಯ ಭೇದ, ಪ್ರವೃತ್ತಿಭೇದ ಇರೋವರೆಗೆ ಇದೆಲ್ಲ ಇದ್ದಿದ್ದೇ ಎಂದು ಉದಾಸೀನದಿಂದ ಮೈ ಮುರಿಯುತ್ತೀರಾ?
ಪರವಾಗಿಲ್ಲ; ಈ ಲೇಖನದ ಉದ್ದೇಶವೂ ನಿಮ್ಮಲ್ಲೊಂದು ಆರ್ಗೂಮೆಂಟ್ ಹುಟ್ಟಿಸೋದೇ. ಅದು ಹುಟ್ಟಿದಮೇಲೆ ಮತ್ತೇನಾಗೋದಿದೆ ಹೇಳಿ…