ಆಸ್ಕರ್ ಪ್ರಶಸ್ತಿ ಮತ್ತು ’ರಿಯಲಿಸ್ಟಿಕ್ ಸಿನೆಮಾ’ದ ಕನಸು
ಈ ಸಲ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಮೂರು ಸಿನೆಮಾಗಳನ್ನು ನೋಡಿದ ಮೇಲೆ ಒಂದು ಅನಿಸಿದೆ: ಬದುಕಿನ ವಾಸ್ತವವೇ ಕಥೆ- ಕಾವ್ಯ – ಸಿನೆಮಾಗಳಲ್ಲಿ ಕಾಣುವ ಕಲ್ಪನೆಗಿಂತ ಭೀಕರವಾಗಿರುತ್ತವೆ ಎಂಬ ನನ್ನ ಹೇಳಿಕೆಯನ್ನು ಈ ಸಿನೆಮಾಗಳು ಭಗ್ನಗೊಳಿಸಿವೆ. ಇದರರ್ಥ ಈ ಸಿನೆಮಾಗಳು ವಾಸ್ತವವನ್ನೂ ಮೀರಿಸಿವೆ ಎಂದಲ್ಲ; ಆದರೆ ಇವು ನಮ್ಮ ಸುತ್ತಲಿನ ಜಗತ್ತಿನಲ್ಲಿ ಏನೆಲ್ಲ ನಡೆಯಬಹುದು ಎಂಬುದರ ಕಟುಚಿತ್ರವನ್ನು ನೀಡುತ್ತವೆ. ಹಾಗಾದರೆ ಆಸ್ಕರ್ ಪ್ರಶಸ್ತಿಗಳು ಇಂಥ ದರಿದ್ರ ವಾಸ್ತವವನ್ನು ಬಿಂಬಿಸುವ ಸಿನೆಮಾಗಳಿಗೇ ಹೋಗತೊಡಗಿವೆಯೆ ಎಂಬ ಪ್ರಶ್ನೆ ಹಲವರನ್ನು ಕಾಡಿದೆ. ಇತ್ತೀಚೆಗೆ ಸಿನೆಮಾಗಳ ಬಗ್ಗೆ ಹೆಚ್ಚು ಬರೆಯದ ಆನಂದ ಪಾರ್ಥಸಾರಥಿಯವರೂ ದಿ ಹಿಂದೂ’ ಪತ್ರಿಕೆಯಲ್ಲಿ ಈ ಬಗ್ಗೆ ಬರೆದಿದ್ದಾರೆ (ಕಳೆದ ಶುಕ್ರವಾರ) ಎಂದರೆ ನಾವು ಕೊಂಚ ಗಂಭೀರವಾಗಿಯೇ ಈ ವಿಷಯವನ್ನು ಚರ್ಚಿಸಬೇಕೇನೋ. ಅವರು ಬರೆಯುವ ಹೊತ್ತಿಗೇ ನಾನು ಈ ಸಿನೆಮಾಗಳ ಉತ್ತಮ ದರ್ಜೆಯ ಫೈಲುಗಳನ್ನು ಹೇಗೋ ಸಂಪಾದಿಸಿ ನೋಡುತ್ತಿದ್ದೆ!
ನಾಲ್ಕು ಪ್ರಶಸ್ತಿಗಳನ್ನು ಗೆದ್ದ ನೋ ಕಂಟ್ರಿ ಫಾರ್ ಓಲ್ಡ್ ಪೀಪಲ್’ ಸಿನೆಮಾವನ್ನು ನೋಡುವುದಕ್ಕೆ ನಮ್ಮ ಗುಂಡಿಗೆ ಗಟ್ಟಿಯಾಗಿರಲೇ ಬೇಕು. ಯಾಕೆಂದರೆ ಈ ಸಿನೆಮಾದ ಖಳನಾಯಕ ಜೇವಿಯರ್ ಬಾರ್ಡೆಮ್‌ನ ನಟನೆ ನಮ್ಮನ್ನು ನಖಶಿಖಾಂತ ನಡುಗಿಸುತ್ತದೆ. ರಾಸುಗಳಿಗೆ ಬಳಸುವ ಸ್ಟೆನ್‌ಗನ್ ಮೂಲಕ ಮನುಷ್ಯರನ್ನು ಎಡಬಿಡದೆ ಕೊಲ್ಲುವ ಪಾತ್ರವನ್ನು ಬಾರ್ಡೆಮ್ ನಿರ್ವಹಿಸಿದ ರೀತಿ ನಮ್ಮನ್ನು ಕಂಗೆಡಿಸುತ್ತದೆ. ಬಾಬ್‌ಕಟ್ ತಲೆಗೂದಲು; ಮುಖದಲ್ಲಿ ಸದಾ ನಗು. ಮಾತೆತ್ತಿದರೆ ತರ್ಕ; ಇನ್ನೇನು ಮಾತುಕತೆ ಸಲೀಸಾಗಿದೆ ಎನ್ನುವಷ್ಟರಲ್ಲಿ ಅವನ ಕ್ರೌರ್ಯದ ವಿರಾಟ್‌ದರ್ಶನವಾಗಿ ನಾವು ಕುರ್ಚಿ ಬಿಗಿಹಿಡಿಯುವ ಸ್ಥಿತಿ ಬರುತ್ತದೆ.
ಸಿನೆಮಾವನ್ನು ಶಾಸ್ತ್ರದ ರೀತಿಯಲ&
#3
277;ಲಿ ನೋಡುವವರಿಗೆ ಮಾತ್ರ ಈ ಸಿನೆಮಾ ಕಾಣುವುದೇ ಇನ್ನೊಂದು ಬಗೆಯಲ್ಲಿ: ಈ ಸಿನೆಮಾದ ಕ್ಯಾಮೆರಾ ಚಲನೆಯನ್ನು ಎಷ್ಟು ತಾಸು ಬೇಕಾದರೂ ಅಧ್ಯಯನ ಮಾಡಬಹುದು; ಒಂದೊಂದು ದೃಶ್ಯದಲ್ಲೂ ಕ್ಯಾಮೆರಾ ಚಲಾಯಿಸಿದ ರೀತಿಯೇ ಮಜಾ ಕೊಡುತ್ತದೆ. ಕ್ಯಾಮೆರಾದ ಚಲನೆಗೆ ತಕ್ಕಂತೆ ಸಾಗುವ ಸಂಗೀತವೂ ಇನ್ನೊಂದು ಅಚ್ಚರಿ. ಯಾಕೆಂದರೆ ಇಲ್ಲಿ ಸಂಗೀತ ಕೇಳುವುದಕ್ಕಿಂತ ಕೇಳದಿರುವುದೇ ಹೆಚ್ಚು! ವಾದ್ಯ ಸಂಗೀತ ಇಲ್ಲದೆಯೇ, ವಾಸ್ತವ ಶಬ್ದಗಳನ್ನೂ ಸೂಕ್ತವಾಗಿ ಬಳಸಿ ಹೇಗೆ ಭಯಾನಕ ವಾತಾವರಣವನ್ನು ಮೂಡಿಸಬಹುದು ಎಂಬುದಕ್ಕೆ ಈ ಸಿನೆಮಾ ಒಂದು ತಾಜಾ ನಿದರ್ಶನ. ಕಾರ್ಮಾಕ್ ಮ್ಯಾಕ್‌ಆರ್ಥಿಯ ಕಾದಂಬರಿಯನ್ನು ಜೋಯೆಲ್ ಮತ್ತು ಈಥಾನ್ ಕೋಯೆಲ್ ಸಿನೆಮಾ ಮಾಡಿದ ರೀತಿಯೇ ಸಿನೆಮಾಗೆ ಅತ್ಯುತ್ತಮ ಸಿನೆಮಾ ಎಂಬ ಪ್ರಶಸ್ತಿಯನ್ನು ಕೊಟ್ಟಿದೆ. ದಿ ನ್ಯೂ ಯಾರ್ಕ್ ಟೈಮ್ಸ್’ ಪತ್ರಿಕೆಯ ವಿಮರ್ಶೆಯ ಪ್ರಕಾರ ಈ ಸಿನೆಮಾ ಭಯ ಹುಟ್ಟಿಸುವುದರ ಜೊತೆಗೆ ನಿರ್ದಾಕ್ಷಿಣ್ಯವಾಗಿ ಭಯಾನಕವಾಗಿದೆ.
ಇಂಥ ಆಸಾಮಿಯನ್ನು ಎದುರಿಸುವ ಧೈರ್ಯ ತೋರುವ ಮಾಜಿ ಸೈನಿಕನ ಪಾತ್ರದಲ್ಲಿ ಜೋಶ್ ಬ್ರಾಲಿನ್ ಮತ್ತು ಈ ಇಬ್ಬರ ಆಟದ ನಡುವೆ ಪೊಲೀಸ್ ಅಧಿಕಾರಿಯಾಗಿ ವಿಫಲವಾಗುವ ಪಾತ್ರದಲ್ಲಿ ಪ್ರಖ್ಯಾತ ನಟ ಟಾಮಿ ಲೀ ಜೋನ್ಸ್ – ಇಬ್ಬರೂ ಸಿನೆಮಾಗೆ ಜೀವ ತುಂಬಿದ್ದಾರೆ. ಇನ್ನೊಂದು ಸಿನೆಮಾ ಇನ್ ದಇ ವ್ಯಾಲೆ ಆಫ್ ಏಲಾ’ ದ ನಟನೆಗಾಗಿ ಟಾಮಿಯೂ ಅತ್ಯುತ್ತಮ ನಟ ಪ್ರಶಸ್ತಿಗಾಗಿ ನಾಮಕರಣಗೊಂಡಿದ್ದರು.
ಇನ್ನೆರಡು ಚಿತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಮೊದಲನೆಯದು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದ ಡೇನಿಯೆಲ್ ಡೇ ಲೆವಿಸ್ ನಟಿಸಿದ ದೇರ್ ವಿಲ್ ಬಿ ಬ್ಲಡ್’ ಸಿನೆಮಾವು ೨೦ನೇ ಶತಮಾನದ ಆರಂಭದಲ್ಲಿ ಅಮೆರಿಕಾದಲ್ಲಿ ನಡೆಯುವ ತೈಲಶೋಧ, ಮತ್ತು ಶೋಷಣೆಯ ಕಥೆ. ೧೯೨೭ರಲ್ಲಿ ಸಿಂಕ್ಲೇರ್ ಬರೆದ ಆಯಿಲ್!” ಕಥೆಯನ್ನು ಆಧರಿಸಿ ತೆಗೆದ ಈ ಚಿತ್ರದಲ್ಲಿ ನೋ ಕಂಟ್ರಿ’॒’ ಸಿನೆಮಾದಲ್ಲಿ ಇರುವ ಭಯಾನಕತೆ ನಿಮ್ಮ ಮೇಲೆ ಹಠಾತ್ತಾಗಿ ಆಕ್ರಮಣ ಮಾಡುವುದಿಲ್ಲ. ಬದಲಿಗೆ ಒ&
#320
2;ದು ಸುದೀರ್ಘ ಕಥಾನಕವಾಗಿ ಕಣ್ಣಿಗೆ ಕಟ್ಟುತ್ತದೆ.
ಇದನ್ನು ನೋಡುವಾಗ ಒಂದು ಕಾದಂಬರಿಯನ್ನು ಓದಿದ ಅನುಭವವೂ ಆಗಬಹುದು. ಯಾಕೆಂದರೆ ಕಥೆಯೇ ಹಾಗಿದೆ. ಚಿತ್ರೀಕರಣವೂ ಅಷ್ಟೆ.
ಶ್ರೇಷ್ಠ ಪೋಷಕನಟಿ ಪ್ರಶಸ್ತಿಯನ್ನು ಪಡೆದ ಸ್ವಿಂಡಾ ಟ್ವಿಲ್‌ಟನ್ ಖಳನಾಯಕಿಯಾಗಿ ನಟಿಸಿದ ಮೈಕೇಲ್ ಕ್ಲೇಟನ್” ಸಿನೆಮಾ ಫ್ಲಾಶ್ ಬ್ಯಾಕ್ ತಂತ್ರವನ್ನು ವಿಶಿಷ್ಟವಾಗಿ ಅಳವಡಿಸಿಕೊಂಡ ಚಿತ್ರ. ವಕೀಲರು, ಕಾರ್ಪೋರೇಟ್ ಸಂಸ್ಥೆ – ನ್ಯಾಯಾಲಯ – ಇವುಗಳ ನಡುವೆ ನಡೆಯುವ ಗಲಾಟೆ ಈ ಸಿನೆಮಾದ ಕಥೆಯ ಮುಖ್ಯ ಹಂದರ. ಜಾರ್ಜ್ ಕ್ಲೂನಿಯೇ ಇಲ್ಲಿ ಹೀರೋ. ಅವರೂ ಈ ಬಾರಿಯ ಅತ್ಯುತ್ತಮ ನಟ ಪ್ರಶಸ್ತಿಯ ಸಾಲಿನಲ್ಲಿ ಇದ್ದರು. ಆದರೆ ಪ್ರಶಸ್ತಿ ಬಂದಿದ್ದು ಮಾತ್ರ ಸ್ವಿಂಡಾಗೆ! ಹಾಗೆ ನೋಡಿದರೆ ಸ್ವಿಂಡಾ ಇರುವ ಫ್ರೇಮ್‌ಗಳೇ ಚಿತ್ರದಲ್ಲಿ ಕಡಿಮೆ. ಇರುವ ಅವಕಾಶದಲ್ಲೇ ಹೇಗೆ ವ್ಯಕ್ತಿತ್ವದ ಚಹರೆಯನ್ನು ಮೂಡಿಸಬಹುದು ಎಂಬುದಕ್ಕೆ ಸ್ವಿಂಡಾ ನಟನೆ ಮಾದರಿಯೇ ಹೌದು.
ಆಸ್ಕರ್ ಪ್ರಶಸ್ತಿ ಪಡೆದ ಶ್ರೇಷ್ಠ ಡಾಕ್ಯುಮೆಂಟರಿಯೂ ಅಮೆರಿಕಾದ ಸೇನಾ ಕ್ರೌರ್ಯವನ್ನು ಬಿಂಬಿಸಿದೆ.
ಸೈಕೋಪಾಥ್‌ಗಳ / ಸೀರಿಯಲ್ ಕಿಲ್ಲರ್‌ಗಳ ಕಥೆ ಭಾರತಕ್ಕೆ, ಕರ್ನಾಟಕಕ್ಕೆ ಹೊಸತೇನಲ್ಲ. ಉಮೇಶರೆಡ್ಡಿಯಿಂದ ಹಿಡಿದು ಇತ್ತೀಚೆಗಿನ ಮಹಿಳಾ ಸೈಕೋಪಾಥ್ ವರೆಗೆ ಹಲವರು ಸಿನೆಮಾ ಮಾಡಲು ಬೇಕಾದ ಕಥೆಗಳನ್ನು ಕೊಟ್ಟಿದ್ದಾರೆ. ಅವುಗಳನ್ನೇ ಸಿನೆಮಾ ಮಾಡಬೇಕು ಎಂದು ನಾನೇನೂ ಹೇಳುತ್ತಿಲ್ಲ. ಆದರೆ ಒಂದು ಸಿನೆಮಾ ಎಂದರೆ ಪ್ರೀತಿ – ಪ್ರೇಮ – ಪ್ರಣಯ ಮಾತ್ರ ಎಂದು ತಿಳಿಯುವ ಬಗೆಯನ್ನು ನಾವು ಒಂದಲ್ಲ ಒಂದು ದಿನ ತೆಗೆದುಹಾಕಲೇಬೇಕು. ಸುನಿಲ್‌ಕುಮಾರ್ ದೇಸಾಯಿಯವರ ಕೆಲವು ಸಿನೆಮಾಗಳು, ಶಾಪ, ಸಯನೈಡ್, ದೇವೀರಿ, – ಇವು ಸಿನೆಮಾ ತಂತ್ರಗಾರಿಕೆಯನ್ನು ಬಳಸಿಕೊಂಡು ಹೊಸತನ್ನು ಹೇಳುವ ಯತ್ನಗಳಾಗಿವೆ. ಯಶಸ್ವೀ ಸಿನೆಮಾ ಮುಖ್ಯ ಎಂಬ ತರ್ಕದ ತಂತಿಯ ಮೇಲೆ ನಡೆಯುವುದಕ್ಕಿಂತ, ವಾಸ್ತವವನ್ನು ಸಿನೆಮಾದ ಅಸೀಮ ಸಾಧ್ಯತೆಗಳ ಬಳಕೆಯ
ಿಂದ ನಿರೂಪಿಸುವ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಮುಖ್ಯ.
ತಾಂತ್ರಿಕ ಸಂಗತಿಗಳೂ ಹೇಗೆ ಭಾವುಕ ಕ್ಷಣಗಳ ಬೆಲೆಯನ್ನು ಹೆಚ್ಚಿಸುತ್ತವೆ ಎನ್ನುವುದಕ್ಕೆ ಮುಂಗಾರು ಮಳೆ’ಯ ಜಲಪಾತದ ಸನ್ನಿವೇಶಗಳನ್ನು ಉದಾಹರಿಸಬಹುದು. ನಮ್ಮ ಸಿನೆಮಾ ನಿರ್ಮಾಣ ರಂಗದಲ್ಲಿ ಅತ್ಯಾಧುನಿಕ ತಾಂತ್ರಿಕತೆಗೆ ಕೊರತೆಯಿಲ್ಲ. ನಟ – ನಟಿಯರಿಗೆ ಕೊರತೆಯಿಲ್ಲ ; ಲೊಕೇಶನ್‌ಗಳಿಗೆ ಎಂದೂ ಕೊರತೆಯಿಲ್ಲ. ಹಣಕ್ಕಂತೂ ಎಂದೂ ಖೋತಾ ಕಂಡುಬಂದಿಲ್ಲ. ಕೊರತೆ ಇರುವುದು ಒಳ್ಳೆಯ, ರೋಚಕ ಮತ್ತು ಎದೆಯೊಳಗೆ ಇಳಿವ ಕಥೆಗಳಿಗೆ; ಅಂಥ ಕಥೆಗಳನ್ನು ರಿಯಲಿಸ್ಟಿಕ್ ಆಗಿ ಸಿನೆಮಾ ಮಾಡುವ ಮನಸ್ಸುಗಳಿಗೆ. ಅಂಥ ಒಂದು ಒಳ್ಳೆಯ ಕಥೆ, ಬಿಗಿಯಾದ ಸಂಗೀತ, ಎಡಿಟಿಂಗ್, ನಾಯಕ – ನಾಯಕಿಯರ ಆರಾಧನೆ ಮುಖ್ಯವಾಗಿರದ ಕ್ಯಾಮೆರಾ ಚಲನೆ, ಡೈಲಾಗುಗಳಿಗಿಂತ ಕಥೆಯೇ ಮುಖ್ಯವಾಗಿರುವ ಸನ್ನಿವೇಶಗಳು, ಕಂಪನಿ ಡ್ರಾಮಾದ ಥರ ಮಧ್ಯೆ ಮಧ್ಯೆ ಬರುವ ಚಿತ್ರವಿಚಿತ್ರ ಕಾಮೆಡಿಗಳು ಇರದ ಕಥಾಹರಿವು, ಹಾಡುಗಳು ಅನಿವಾರ್ಯವಾಗಿರದ ಮೆಲೋಡ್ರಾಮಾ / ಪ್ರೀತಿಯ ದೃಶ್ಯಗಳು – ಇವೆಲ್ಲ ಮಿಳಿತವಾಗಿರುವ ಒಂದು ಸಿನೆಮಾಗಾಗಿ ನನ್ನ ಮನಸ್ಸು ಸದಾ ಹಾತೊರೆಯುತ್ತಿದೆ.