ನಮ್ಮ sick-ಕ್ಷಣ ವ್ಯವಸ್ಥೆಯ ಬಗ್ಗೆ ಇದು ಎಷ್ಟನೇ ಟೀಕೆ?
ಶಿಕ್ಷಣ ನಮ್ಮ ಮಕ್ಕಳ ಮೂಲಭೂತ ಹಕ್ಕು. ಆದರೆ ಅದನ್ನು ಪಡೆಯಲು ನೀವು ಹಣವನ್ನು ಕಕ್ಕಬೇಕು! ಇದು ಭಾರತ. ನೀವು ಹಳ್ಳಿಯಲ್ಲಿದ್ದರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದೇ ಸರಿ ಮತ್ತು ಅನಿವಾರ್ಯ! ಯಾಕೆಂದರೆ ಅಲ್ಲಿ ಖಾಸಗಿ ಶಾಲೆಗಳೇ ಇರುವುದಿಲ್ಲ. ನಗರಗಳಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆ. ಖಾಸಗಿ ಶಾಲೆಗಳೇ ಗತಿ.
ಈ ಶಾಲೆಗಳಿಗೆ ಅನುಮತಿ ನೀಡುವಾಗಲೇ ಸಾಕಷ್ಟು ಗೋಜಲಾಗುವ ಶಿಕ್ಷಣ ವ್ಯವಸ್ಥೆ ಮಕ್ಕಳ ಪ್ರವೇಶದ ವಿಷಯಕ್ಕೆ ಬಂದಾಗ ಇನ್ನಷ್ಟು ರಗಳೆಯಾಗಿಬಿಡುತ್ತದೆ. ಉದಾಹರಣೆಗೆ ಮಕ್ಕಳ ತರಗತಿ ಪ್ರವೇಶಕ್ಕೆ ಸಂಬಧಿಸಿದಂತೆ ಆಶೋಕ್ ಗಂಗೂಲಿ ಶಿಫಾರಸುಗಳನ್ನು ಕರ್ನಾಟಕದಲ್ಲೂ ಅಳವಡಿಸುವುದಾಗಿ ಈಗಷ್ಟೇ ಸರ್ಕಾರವು ಪ್ರಕಟಿಸಿದೆಯಷ್ಟೆ? ಈ ಶಿಫಾರಸುಗಳಲ್ಲಿ ಪ್ರವೇಶ ಪದ್ಧತಿ ಹೇಗಿರಬೇಕು ಎಂಬ ಸೂತ್ರಗಳಿವೆಯೇ ಹೊರತು ಪ್ರವೇಶ ಶುಲ್ಕವನ್ನು ನಿರ್ಬಂಧಿಸುವ ಬಗೆಗೆ ಯಾವುದೇ ಉಲ್ಲೇಖವೂ ಇಲ್ಲ. ಆದರೆ ಸರ್ಕಾರವು ಪ್ರವೇಶ ಶುಲ್ಕವನ್ನೂ ನಿರ್ಧರಿಸುವುದೆಂದು ಮಾಧ್ಯಮಗಳು ವರದಿ ಮಾಡಿವೆ. ತಿಂಗಳಿಗೆ ನೂರೈವತ್ತು ರೂಪಾಯಿಯಿಂದ ಹಿಡಿದು ಸಾವಿರಗಟ್ಟಳೆ ರೂಪಾಯಿ ಶುಲ್ಕದ ವ್ಯವಸ್ಥೆಯನ್ನು ಬೆಂಗಳೂರು, ಮಂಗಳೂರಿನಂಥ ನಗರಗಳಲ್ಲಿ ಕಾಣಬಹುದು. ಇನ್ನು ಪ್ರವೇಶ ಶುಲ್ಕವಂತೂ ಕೆಲವು ಸಾವಿರದಿಂದ ಹಿಡಿದು ಲಕ್ಷದವರೆಗೂ ಹೋಗಿದೆ. ಇದೆಲ್ಲ ಒಂದನೇ ತರಗತಿಯ ಮಾತು. ಹತ್ತಿರ ಇರುವ ಮಕ್ಕಳಿಗೆ ಆದ್ಯತೆ ನೀಡಬೇಕು ಎನ್ನುವುದು ಆಶೋಕ್ ಗಂಗೂಲಿ ವರದಿಯ ಮುಖ್ಯಾಂಶ. ಈ ಆಂಶಕ್ಕೆ ಗರಿಷ್ಠ ೩೦ ಅಂಕಗಳನ್ನು ನೀಡಲಾಗುವುದು. ಒಟ್ಟಾರೆ ೧೦೦ ಅಂಕಗಳನ್ನು ಈ ಬಗೆಯಲ್ಲಿ ವಿಂಗಡಿಸಲಾಗಿದೆ. ಇನ್ನೊಂದು ಮಗು ಅದೇ ಶಾಲೆಯಲ್ಲಿ ಓದುತ್ತಿದರೆ ೧೫ ಅಂಕಗಳು, ತಂದೆ ತಾಯಂದಿರು ಪದವೀಧರರಾಗಿದ್ದರೆ ತಲಾ ೫, ಇಲ್ಲವಾದರೆ ೩ ಅಂಕಗಳು, ಪಾಲಕರು ಹಳೆ ವಿದ್ಯಾರ್ಥಿಯಾಗಿದ್ದರೆ ೫ ಅಂಕಗಳು, ದೈಹಿಕ ನ್ಯೂನತೆಗೆ ೫, ಹೆಣ್ಣುಮಗುವಾದರೆ ೫, ಸಾಮಾಜಿಕ ಹಿಂದ
&#
3265;ಳಿದಿರುವಿಕೆಗೆ ೫, ಶಾಲೆಯ ಆಡಳಿತ ವ್ಯವಸ್ಥೆಯ ನೀತಿಗಳಿಗೆ ತಕ್ಕಂತೆ ೨೫ ಅಂಕಗಳು, – ಹೀಗೆ ಈ ಅಂಕಗಳನ್ನು ನೀಡಿ ರ್‍ಯಾಂಕಿಂಗ್ ನಿರ್ಧರಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ಒಂದುವೇಳೆ ಹೀಗೆ ಆಯ್ಕೆ ನಡೆಯಿತು ಎಂದುಕೊಳ್ಳೋಣ. ಆಮೇಲೆ 'ಒಳ್ಳೆಯ' ಶಾಲೆಯಲ್ಲಿ ಫೀಸು ಕಕ್ಕುವವರು ಯಾರು? ಇಂಥ ಶಾಲೆಗಳು ಹೇಗೆ ತಮ್ಮ ಉನ್ನತ ಮಟ್ಟವನ್ನು ಕಾಯ್ದುಕೊಳ್ಳುತ್ತವೆ? ಸರ್ಕಾರದ ಶುಲ್ಕ ವ್ಯವಸ್ಥೆಯನ್ನು ಧಿಕ್ಕರಿಸುವುದಿಲ್ಲವೆ? ಮತ್ತೆ ಪ್ರತಿಭಟನೆಯ ಕೂಗೆದ್ದು ಶಾಲೆಗಳೇ ಮುಚ್ಚಿಹೋಗುವುದಿಲ್ಲವೆ? ಮೊದಲೇ ರಾಜ್ಯ ಪಠ್ಯಕ್ರಮವನ್ನು ಒಪ್ಪಿಕೊಂಡು ಆಮೇಲೆ ಇಂಗ್ಲಿಶ್ ಮಾಧ್ಯಮದಲ್ಲಿ ಶಾಲೆ ನಡೆಸುತ್ತಿರುವ ಗಲಾಟೆ ಪಾಲಕರನ್ನು ಸಾಕಷ್ಟು ರೊಚ್ಚಿಗೆಬ್ಬಿಸಿದೆ.
ಇನ್ನೇನು ಅನಧಿಕೃತ ಶಾಲೆಗಳ ಪಟ್ಟಿಯೂ ಪ್ರಕಟಣೆಯಾಗುವ ಹಂತದಲ್ಲಿದೆ. ಅದಿರಲಿ, ಈಗಾಗಲೇ ಡೊನೇಶನ್ ಪಡೆದು ಮಕ್ಕಳನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತಿದೆ. ಚುನಾವಣೆ ನಡೆಸುವ ರಭಸದಲ್ಲಿ ಮತಕ್ಷೇತ್ರಗಳ ಮರುವಿಂಗಡಣೆ, ಮತದಾರರ ಯಾದಿ ಮುಂತಾದ ಪ್ರಜಾತಾಂತ್ರಿಕ ಕರ್ತವ್ಯಗಳಲ್ಲಿ ಮುಳುಗಿಹೋಗಿರುವ ಈ ವ್ಯವಸ್ಥೆಯು ಇಂಥ ಆಮೂಲಾಗ್ರ ಬದಲಾವಣೆಯ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತರಬಹುದೆ? ಗೊತ್ತಿಲ್ಲ.
ನರ್ಸರಿಯ ವಿಷಯವಿರಲಿ, ಹೈಸ್ಕೂಲುಗಳಲ್ಲಿ, ಪಿಯುಸಿಯಲ್ಲಿ, ಪದವಿ ಶಿಕ್ಷಣದಲ್ಲಿ – ಹಣ ಕಕ್ಕಿದರೇ ಒಳ್ಳೆಯ ಶಾಲೆ ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಈ ಒಳ್ಳೆಯ ಶಾಲೆಗಳಲ್ಲಿ ಎಂಥ ಶಿಕ್ಷಕರಿದ್ದಾರೆ, ಅವರೆಂದಾದರೂ ದಡ್ಡ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡಿದ್ದಾರಾ? ಅಥವಾ ಈ ಶಾಲೆಗಳಲ್ಲಿ ಯಾವಾಗಲೂ ಶೇ. ೯೫ ಅಂಕ ಪಡೆದವರನ್ನು ಮಾತ್ರ ಸೇರಿಸಿಕೊಂಡು ಬರೋಬ್ಬರಿ ಶೇ. ೧೦೦ ತೇರ್ಗಡೆಯ ಯಶ ಸಾಧಿಸಲಾಗಿದೆಯಾ?
ಬೆಂಗಳೂರಿನ ಸುಪ್ರಸಿದ್ಧ ಕಾಲೇಜುಗಳು ಪ್ರವೇಶಕ್ಕೆ ಸಂಬಂಧಿಸಿದಂತೆ ದಶಕಗಳಿಂದ ನಿಯಮಗಳನ್ನು ಪಾಲಿಸಿಕೊಂಡು ಬಂದಿವೆ; ಆದರೆ ಆ ಕಾಲೇಜುಗಳಲ್ಲಿ ಪಾಠವೇ ನಡೆಯುವುದಿಲ್ಲ; ಪದವಿಪೂರ್ವ ಶಿಕ್ಷಣಕ&#
3277
;ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪಠ್ಯಕ್ರಮವನ್ನು ಸಂಪೂರ್ಣವಾಗಿ ಮುಗಿಸಿಕೊಡುವ ಕಾಲೇಜುಗಳು ಬೆರಳೆಣಿಕೆಯಲ್ಲಿವೆ; ಅವುಗಳಿಗೆ ಪ್ರಸಿದ್ಧಿಯಿಲ್ಲ. ಫಲಿತಾಂಶಗಳ ಪ್ರತಿಷ್ಠೆ ಕಾಲೇಜುಗಳಿಗೆ ಬಂದಿದ್ದರೆ ಪ್ರತಿಭಾವಂತ ಮಕ್ಕಳು ಓದಿದ್ದರಿಂದಲೇ ಹೊರತು, ಅಲ್ಲಿ ದೊರೆಯುವ ಶಿಕ್ಷಣದಿಂದಲ್ಲ ಎಂಬುದು ಬಯಲು ಸತ್ಯ.
ಶಾಲೆ ಎಂದರೆ ಸರ್ಟಿಫಿಕೇಟಿಗಾಗಿ ದಿನಾಲೂ ಹೋಗಬೇಕಾದ ಜಾಗವಾಗಿದೆ; ಟ್ಯೂಶನ್ ಎಂದರೆ ಪರೀಕ್ಷೆ ಎಂಬ ವಿಚಿತ್ರ ಬಗೆಯ ಮಾನದಂಡದಲ್ಲಿ ಹೆಚ್ಚು ಅಂಕಗಳನ್ನು ಪಡೆದು ಇಂಜಿನಿಯರಿಂಗ್‌ನಲ್ಲಿ ಸೀಟು ಗಿಟ್ಟಿಸುವ ತಂತ್ರವಾಗಿದೆ. ಪರೀಕ್ಷೆಯ ವ್ಯವಸ್ಥೆಯ ವಿರುದ್ಧ ಟೀಕೆಗಳು ಹೆಚ್ಚಾದ ಮೇಲೆ ಗ್ರೇಡಿಂಗ್ ಪದ್ಧತಿ ಅಲ್ಲಲ್ಲಿ ಜಾರಿಗೆ ಬಂತು. ವಾರ್ಷಿಕ ಪರೀಕ್ಷೆಗಳು ಹೊರೆ ಎಂದು ಗೊತ್ತಾದ ಮೇಲೆ ಟ್ರೈಮಿಸ್ಟರ್‌ಗಳು ಬಂದವು. ಅವುಗಳನ್ನು ಶಾಲೆಗಳೇ ವಿರೋಧಿಸಿದ್ದೂ ಇದೆ. ಗ್ರೇಡಿಂಗ್‌ನಿಂದ ಮಕ್ಕಳಿಗೆ ಎಷ್ಟು ಅಂಕಗಳು ಬಂದವೆಂದೇ ಗೊತ್ತಾಗುವುದಿಲ್ಲ ಎಂದು ಪಾಲಕರನ್ನು ಪ್ರತಿಭಟನೆಗೆ ಪ್ರಚೋದಿಸಿದ್ದೂ ನಡೆಯಿತು. ಎಂಟು-ಒಂಬತ್ತನೇ ಕ್ಲಾಸಿನಲ್ಲಿ ಟ್ರೈಮಿಸ್ಟರ್ ಬರೆದ ಮಕ್ಕಳು ಎಸೆಸೆಲ್ಸಿಯಲ್ಲಿ ಹಠಾತ್ತಾಗಿ ವಾರ್ಷಿಕ ಪರೀಕ್ಷೆ ಕೂರಬೇಕಾದ ಹುಚ್ಚು ವ್ಯವಸ್ಥೆ ಈಗ ನಮ್ಮ ರಾಜ್ಯದಲ್ಲಿದೆ. ಪರೀಕ್ಷೆಯೆಂಬ ಮಾಯೆಗಂಜಿ ಪಾಲಕರು ಈ `ಒಳ್ಳೆಯ ಶಾಲೆ' ಹುಡುಕುವ ಮತ್ತು ಒಳ್ಳೆಯ ಟ್ಯೂಶನ್‌ಗಾಗಿ ಸೀಟು ದೊರಕಿಸಿಕೊಳ್ಳುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಕ್ಕಳಿಗೆ ಔಪಚಾರಿಕ ಶಿಕ್ಷಣ ಕೊಡಿಸುವುದೇ ಬೇಡ, ಮನೆಯಲ್ಲೇ ಪಾಠ ಹೇಳಿದರಾಯಿತಲ್ಲವೆ ಎಂಬ ಯೋಚನೆ ಕೆಲವು ತಂದೆ ತಾಯಂದಿರಿಗೆ ಬಂದಿದ್ದೂ ಇದೆ; ಆದರೆ ಹಾಗೆ ನಿರ್ಧರಿಸಿ ಜಾರಿಗೆ ತರುವುದು ಸುಲಭದ ಕೆಲಸವಲ್ಲ. ಇಂದಿನ ವ್ಯವಸ್ಥೆಯ ಅನಿವಾರ್ಯತೆಯನ್ನು ಒಪ್ಪಿಕೊಳ್ಳುತ್ತಲೇ ಮುಂದಿನ ದಿನಗಳಿಗಾಗಿ ಯೋಚಿಸುವ ದಿನಗಳು ಬಂದಿವೆ. ಒಂದು ಬಡಾವಣೆಯ ಹಲವು ಪಾಲಕರು ಮುಂದೆ ಬಂದು ತಮ್ಮದೇ ಶಾಲೆಯನ್ನು ತೆರೆದ ಉದಾಹರಣೆಗಳೂ ನಮ&am
p;#3
277;ಮೆದುರು ಇವೆ. ಈ ಪ್ರಯೋಗಗಳು ಯಶಸ್ವಿಯಾಗಿರುವುದೂ ನಿಜ.
ಈ ಶೈಕ್ಷಣಿಕ ವರ್ಷ ಆರಂಭವಾಗುತ್ತಲೇ ಇವೆಲ್ಲ ಸಮಸ್ಯೆಗಳೂ ಒಂದಾದ ಮೇಲೆ ಒಂದರಂತೆ ಮೇಲೆದ್ದು ಚರ್ಚೆ ನಡೆಯುತ್ತದೆ; ಮಾಧ್ಯಮಗಳಲ್ಲಿ ಸುದ್ದಿಗಳಾಗುತ್ತವೆ. ಶಾಲೆಗಳು ಪ್ರತಿಭಟಿಸುವುದು, ಸರ್ಕಾರವು ಬೆದರಿಸುವುದು – ಎಲ್ಲವೂ ನಡೆಯುತ್ತದೆ. ಅದಿರಲಿ, ಮಕ್ಕಳಿಗೆ ನರ್ಸರಿಗೂ ಅತ್ಯುತ್ತಮ ಶಾಲೆಯೇ ಬೇಕೆಂದು ಹಟ ಹಿಡಿಯುವ ಪಾಲಕರಿಗೆ ಏನೆನ್ನೋಣ? ಮನೆಯೇ ಮೊದಲ ಪಾಠಶಾಲೆ ಎಂಬ ಸತ್ಯವನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ಕೆಲಸ ಮಾಡುವ ಪಾಲಕರು ದಿನಾಲೂ ಮನೆಯಲ್ಲಿ ತಮ್ಮ ಪುಟ್ಟ ಮಕ್ಕಳಿಗೆ ಬದುಕಿನ ಪಾಠವನ್ನು ಕಲಿಸುವ ಕೆಲಸ ನಡೆಯದೇ ಇದ್ದರೆ, ಶಾಲೆಯಲ್ಲಿ ಇನ್ನೇನೋ ಕಲಿಕೆ ಆದೀತು ಎಂದು ನಿರೀಕ್ಷಿಸುವುದು ಮೂರ್ಖತನ. ಕಿಕ್ಕಿರಿದ ತರಗತಿಗಳಲ್ಲಿ ಮಕ್ಕಳಿಗೆ ಶಿಕ್ಷಕರಿಂದ ಪ್ರತ್ಯೇಕ ಗಮನ ದೊರಕೀತು ಎಂದುಕೊಳ್ಳುವುದೆಲ್ಲ ಭ್ರಮೆ. ದಿಲ್ಲಿಯ ಶಾಲೆಗಳಲ್ಲಿ ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆದ ಆಶೋಕ್ ಗಂಗೂಲಿ ವರದಿಗಳನ್ನು ನನ್ನ ಜಾಲತಾಣದಲ್ಲಿ ಹಾಕಿದ್ದೇನೆ. ಆಸಕ್ತಿ ಇರುವವರು beluru.googlepages.com/mitramaadhyama ಇಲ್ಲಿ ಅವುಗಳನ್ನು ಪಡೆಯಬಹುದು.