ನರಸಿಂಹನ ಇತಿಹಾಸಕ್ಕೆ ೫೦ ಸಾವಿರ ವರ್ಷ ಆಗಿರಬಹುದೆ?
ಈ `ಕಲಿ – ಯುಗ'ದ ಮೊದಲ ಕಂತನ್ನು ಶಿಲಾಯುಗಕ್ಕಿಂತ ಹಿಂದಿನ ಯುಗದಿಂದ ಆರಂಭಿಸುವೆ. ಯಾಕೆಂದರೆ ಇದರಲ್ಲಿ ಮನುಕುಲದ ಭಾವೋತ್ಕರ್ಷದ ಸನ್ನಿವೇಶಗಳಿಗೆ ವೈeನಿಕ ಪುರಾವೆ ಸಿಕ್ಕಿದೆ. ಮನುಷ್ಯ ಹೇಗೆ ಆಧ್ಯಾತ್ಮವನ್ನು ರೂಢಿಸಿಕೊಂಡ ಎಂಬುದಕ್ಕೆ ಇಲ್ಲಿ ಪಕ್ಕಾ ಸಾಕ್ಷಿ ಇದೆ. ನಗರದ ಎರ್ರಾಬಿರ್ರಿ ಬೆಳವಣಿಗೆಯಲ್ಲಿ ಕಳೆದೇ ಹೋಗಿರುವ ನಾವು ಒಂದು ಕ್ಷಣವಾದರೂ ನಿಂತು ಯೋಚಿಸಬೇಕಾದ ಕಾರಣವಿದೆ.
———————
ನೀವು ನರಸಿಂಹಾವತಾರವನ್ನು ಕೇಳಿದ್ದೀರಿ. ಯಾಕೆ ಪುರಾಣದಲ್ಲಿ ಇಂಥ ನರ ಮತ್ತು ಪ್ರಾಣಿಗಳ ಜೋಡಣೆ ಕಂಡುಬರುತ್ತದೆ ಎಂದು ನೀವು ಅಚ್ಚರಿಪಟ್ಟಿರಬಹುದು. ಇಂಥ ಹಲವು ಪಾತ್ರಗಳು ಪುರಾಣಗಳಲ್ಲಿ ಇದ್ದೇ ಇವೆ. ಪಟ್ಟಿ ಮಾಡುವ ಕೆಲಸ ನಿಮ್ಮದು.
ಯಾಕೆಂದರೆ ಈ ರೀತಿಯಾಗಿ ನರ – ಪ್ರಾಣಿ ರಚನೆಗಳನ್ನು ಮನುಷ್ಯ ಬರೆಯುತ್ತಲೇ ಬಂನೆ, ಅದೂ ಐವತ್ತು ಸಾವಿರ ವರ್ಷಗಳಿಂದ.
ಅಷ್ಟೇ ಅಲ್ಲ, `ಕೇವಲ' ಐವತ್ತು ಸಾವಿರ ವರ್ಷಗಳಿಂದ!! ಯಾಕೆಂದರೆ ಆಧುನಿಕ ಮಾನವನು ಈ ರೂಪಕ್ಕೆ ಬರುವುದಕ್ಕೆ ಐದು ಕೋಟಿ ವರ್ಷಗಳು ಹಿಡಿದಿವೆ. ಆದರೆ ೫೦ ಸಾವಿರ ವರ್ಷಗಳ ಹಿಂದಿನವರೆಗೂ ಮನುಷ್ಯನಿಗೆ ಕಲೆ ಎನ್ನುವುದೇ ಗೊತ್ತಿರಲಿಲ್ಲ ; ಧಾರ್ಮಿಕ ಮನೋಭಾವವಂತೂ ಇರಲೇ ಇಲ್ಲ. ಸಾಂಕೇತಿಕತೆಯೂ ಇರಲಿಲ್ಲ. ಸೃಜನಶೀಲ ಮನಸ್ಸಂತೂ ಇರಲೇ ಇಲ್ಲ. ಭಾಷೆಯಂತೂ ದೂರದ ಮಾತೇ.
ಕರಾರುವಾಕ್ಕಾಗಿ ಐವತ್ತು ಸಾವಿರ ವರ್ಷಗಳ ಹಿಂದೆ ಇಡೀ ಜಗತ್ತಿನ ಹಲವು ಪ್ರದೇಶಗಳಲ್ಲಿ ಹಠಾತ್ತನೆ ಈ ಎಲ್ಲ ಸಂಗತಿಗಳೂ ಮನುಷ್ಯನಿಗೆ ಏಕಕಾಲದಲ್ಲಿ ಅನ್ನಿಸಿಬಿಟ್ಟವು! ಯಾವುದೋ ದಿವ್ಯಶಕ್ತಿಯೇ ಆವರಿಸಿದೆ ಎನ್ನುವಂತೆ ಮನುಷ್ಯ ಚಿತ್ರ ಬರೆಯಲಾರಂಭಿಸಿದ. ಅದರಲ್ಲೂ ಕಲಾತ್ಮಕತೆಯಂತೂ ಪರಿಪೂರ್ಣತೆಯನ್ನೇ ಸಾಧಿಸಿತ್ತು. ಆಫ್ರಿಕಾ, ಯೂರೋಪ್ ಇರಲಿ, ಅಮೆರಿಕಾ ಮತ್ತು ಆಸ್ಟ್ರೇಲಿಯಾದ ಗುಹೆಗಳಲ್ಲೂ ಇಂಥದೇ ಚಿತ್ರಗಳು ಕಂಡುಬಂದಿವೆ.
ಇದನ್ನೇ ವಿeನಿಗಳು ಮನುಕುಲ ಇತಿಹಾಸದ ಮಹಾನ್ ಒಗಟ&am
p;#3
265; ಎಂದು ಕರೆದಿದ್ದಾರೆ.
ಇನ್ನೂ ಇದೆ : ಅಮೆಝಾನ್‌ನ ಮಳೆಕಾಡಿನಲ್ಲಿರುವ ಗುಡ್ಡಗಾಡು ಶಮನ್‌ಗಳು (ಇವರನ್ನು ಮಾಂತ್ರಿಕರು ಎಂದು ಕರೆಯುವುದು ಅಷ್ಟೇನೂ ಸರಿಯಾಗಿ ಕಾಣಿಸುತ್ತಿಲ್ಲ) ಅತಿ ಶಕ್ತಿಯುತ ಭ್ರಮಾಪರಿಣಾಮ ಉಂಟುಮಾಡುವ ಅಯಾಹುವಾಸ್ಕಾ ಎಂಬ ದ್ರವವನ್ನು ಕುಡಿದು ಹಲವು ಬಗೆಯ ದೃಶ್ಯಗಳನ್ನು ನೋಡುತ್ತಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ. ಆತ್ಮವು ದೇಹದಿಂದ ಹೊರಗೆ ಹೋಗಿ ಕಾಣುವ ದೃಶ್ಯಗಳಿವು. ಇವುಗಳಲ್ಲೂ ಮನುಷ್ಯರು ಆ ಕಾಲದಲ್ಲಿ ಬರೆದ ನರ-ಪ್ರಾಣಿ ದೇಹರಚನೆಯ ದೃಶ್ಯಗಳಿದ್ದವು.
ಈ ಕಲಾಕೃತಿಗಳನ್ನು ಯೂರೋಪ್ ಮತ್ತು ದಕ್ಷಿಣ ಆಫ್ರಿಕಾದ ಹೆಬ್ಬಂಡೆ ಗುಹೆಗಳಲ್ಲಿ ಕಾಣಬಹುದು. ಹತ್ತಾರು ಸಾವಿರ ವರ್ಷಗಳ ಹಿಂದಿನ ಈ ಕೃತಿಗಳಲ್ಲಿ ವಿಚಿತ್ರ ಪ್ರಾಣಿಗಳ ಚಿತ್ರಗಳಿವೆ. ಅದರಲ್ಲೂ ಮನುಷ್ಯ ಮತ್ತು ಪ್ರಾಣಿಗಳ ದೇಹಗಳನ್ನು ಬೆರೆಸಿದ ಚಿತ್ರಗಳಂತೂ ಹೇರಳವಾಗಿವೆ. ಕಳೇದ ನೂರೈವತ್ತು ವರ್ಷಗಳಿಂದಲೂ ಈ ದಾಖಲೆಗಳು ದೊರೆತಿದ್ದರೂ ಇವುಗಳ ಹಿಂದಿನ ರಹಸ್ಯವನ್ನು ಒಡೆಯುವ ಕೆಲಸ ಆಗಿರಲಿಲ್ಲ.
ಕೊನೆಗೆ ಗ್ರಹಾಮ್ ಹ್ಯಾನ್‌ಕಾಕ್ ಎಂಬ ಪತ್ರಕರ್ತ ಈ ಒಗಟನ್ನು ಬಿಡಿಸಿರುವ ಹಾಗೆ ಕಾಣುತ್ತಿದೆ. ಅವರ `ಸೂಪರ್‌ನ್ಯಾಚುರಲ್ : ಮೀಟಿಂಗ್ ವಿತ್ ದಿ ಏನ್ಸಿಯೆಂಟ್ ಟೀಚರ್ಸ್ ಆಫ್ ಮ್ಯಾನ್‌ಕೈಂಡ್' ಎಂಬ ೭೫೬ ಪುಟಗಳ ಪುಸ್ತಕವನ್ನು ಓದಿದರೆ ನಿಮಗೆ ಹೌದಲ್ಲ ಅನ್ನಿಸುತ್ತದೆ. ಆ ಕಾಲದ ಚಿತ್ರಗಳನ್ನು ಪರಿಶ್ರಮದಿಂದ ಸಂಗ್ರಹಿಸಿದ ಹ್ಯಾನ್‌ಕಾಕ್ ವಿeನಿಗಳು ನಾಚುವ ಹಾಗೆ ತನ್ನ ಮಾಹಿತಿಗಳನ್ನು ಜೋಡಿಸಿದ್ದಾರೆ. ಎಲ್ಲಕ್ಕಿಂತ ವಿಶಿಷ್ಟ ಸಂಗತಿ ಎಂದರೆ ಈ ಅಯಾಹುವಾಸ್ಕಾ ಮತ್ತು ಅಂಥದ್ದೇ ದ್ರವಗಳನ್ನು ಸೇವಿಸಿ ಗುಡ್ಡಗಾಡು ಶಮನ್‌ಗಳಿಗೆ ಆದ ಅನುಭವವನ್ನೇ ಅನುಭವಿಸಿ ದಾಖಲಿಸಿದ್ದಾರೆ. ಈ ಪುಸ್ತಕ ಆರಂಭವಾಗುವುದೇ ಅವರ ಈ ಅನುಭವದ ವಿವರಣೆಯಿಂದ.
ಗುಹಾಚಿತ್ರಕಲೆಯನ್ನು ಶಿಲಾಯುಗದ ಮಾನವರು ಸುಮ್ಮನೆ ಕೆತ್ತಿದ್ದಲ್ಲ; ತಮಗಾದ ಅಲೌಕಿಕ ಅನುಭವವನ್ನು ಅವರು ದಾಖಲಿಸಿದರು. ಅವರಲ್ಲಿ ಆ&am
p;#3
223;ಲೇ ಅಗೋಚರ ಶಕ್ತಿಗಳ ಬಗ್ಗೆ ತಮ್ಮದೇ ಭಾವನೆಗಳು ಮೂಡಿದ್ದವು ಎಂಬುದು ಹ್ಯಾನ್‌ಕಾಕ್ ಮಾತು. ಇಲ್ಲಿ ಹ್ಯಾನ್‌ಕಾಕ್ ಎಲ್ಲೂ ತಮ್ಮ ವಾದವನ್ನು ವಾದವಾಗಿ ಮಂಡಿಸುವುದಿಲ್ಲ. ಮಾಹಿತಿಗಳ ಮೂಲಕ ಮುಂದಿಡುತ್ತಾರೆ ಅಷ್ಟೆ; ಸಾಮಾನ್ಯ ತರ್ಕeನವಿರುವವರು ಅರ್ಥ ಮಾಡಿಕೊಳ್ಳಲು ಇನ್ನೇನು ಬೇಕು?
ಅಯಾಹುವಾಸ್ಕಾವನ್ನು ಕುಡಿದ ಮೇಲೆ ಮೂಡುವ ದೃಶ್ಯಗಳನ್ನು ಅಮರಿಂಗೋ ಎಂಬ ಕಲಾವಿದ ಬರೆದಿದ್ದಾನೆ. ವಿಚಿತ್ರ ಎಂದರೆ ಇದನ್ನು ಕುಡಿದು ಐವತ್ತು ಸಾವಿರ ವರ್ಷಗಳ ಹಿಂದೆ ಮನುಷ್ಯ ಕಂಡ ದೃಶ್ಯಗಳಿಗೂ, ಇತ್ತೀಚೆಗೆ ಇದನ್ನು ಕುಡಿದ ಹ್ಯಾನ್‌ಕಾಕ್ ಕಂಡ ದೃಶ್ಯಗಳಿಗೂ ವ್ಯತ್ಯಾಸವೇ ಇಲ್ಲ! ಯಾವ ಹಂತದಲ್ಲಿ ಯಾವ ದೃಶ್ಯಗಳನ್ನು ನೀವು ಕಾಣುತ್ತೀರಿ ಎಂದು ಈ ಶಮನ್‌ಗಳು ಹೇಳುತ್ತಾರೆ ಕೂಡ!
ಈ ಪುಸ್ತಕವಂತೂ ಇತಿಹಾಸಪ್ರಿಯರಿಗೆ ಮತ್ತು ಹಿಡಿಸುತ್ತದೆ. ಮನುಕುಲದ ವಿಚಿತ್ರಗಳ ಬಗ್ಗೆ ಕುತೂಹಲ ಇದ್ದವರಂತೂ ಖಂಡಿತ ಓದಲೇಬೇಕಾದ ಪುಸ್ತಕವಿದು.
ಮನುಷ್ಯರ ದೇಹರಚನೆಯ ಹಿಂದಿರುವ ಡಿ ಎನ್ ಎ ವಿನ್ಯಾಸವನ್ನು ಹುಡುಕಿದ ಫ್ರಾನ್ಸಿಸ್ ಕ್ರಿಕ್ ಗೊತ್ತಲ್ಲ? ಅವರಿಗೆ ಆಮೇಲೆ ನೊಬೆಲ್ ಪ್ರಶಸ್ತಿ ಕೂಡಾ ಬಂತು. ಆದರೆ ಈ ಡಿ ಎನ್ ಎ ಎ ಡಬಲ್ ಹೆಲಿಕ್ಸ್ ಮಾದರಿಯನ್ನು ತಾನು ಕಂಡುಹಿಡಿದದ್ದು ಎಲ್ ಎಸ್ ಡಿ ಎಂಬ ಮಾದಕದ್ರವ್ಯವನ್ನು ಸೇವಿಸಿದ ಸಂದರ್ಭದಲ್ಲಿ ಎಂದು ಕ್ರಿಕ್ ಹೇಳಿದ್ದು ನಿಮಗೆ ಗೊತ್ತೆ? ಈ ಸಂಗತಿ ಹಾಗೂ ಡಿ ಎನ್ ಎ ಗೆ ಸಂಬಂಧಿಸಿದ ಹತ್ತಾರು ಹೊಸ ಸಂಗತಿಗಳನ್ನು ಹ್ಯಾನ್‌ಕಾಕ್ ದಾಖಲಿಸುತ್ತಾರೆ.
ಹ್ಯಾನ್‌ಕಾಕ್ ಬೇರಾರೂ ಅಲ್ಲ ; ಡಿಸ್ಕವರಿ ಚಾನೆಲ್‌ನಲ್ಲಿ ಇತಿಹಾಸದ ಬಗ್ಗೆ ಹಲವು ಅತ್ಯಪೂರ್ವವಾದ ಕಾರ್ಯಕ್ರಮಗಳನ್ನು ಕೊಟ್ಟ ಪತ್ರಕರ್ತರು. `ದಿ ಸೈನ್ ಎಂಡ್ ದಿ ಸೀಲ್', `ಫಿಂಗರ್‌ಪ್ರಿಂಟ್ಸ್ ಆಫ್ ದಿ ಗಾಡ್', `ಹೆವನ್ಸ್ ಮಿರರ್' ಎಂಬ ವಿಶ್ವಖ್ಯಾತ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವನ ಪುಸ್ತಕಗಳು ೨೭ ಭಾಷೆಗಳಲ್ಲಿ ೫೦ ಲಕ್ಷ ಪ್ರತಿಗಳಾಗಿ ಮಾರಾಟವಾಗಿವೆ. ಸ್ಕಾಟ್ಲೆಂಡ್‌ನ&
;#
3250;್ಲಿ ಹುಟ್ಟಿ ಭಾರತದಲ್ಲಿ ಬೆಳೆದು ೧೯೭೩ರಲ್ಲಿ ಡುರ್‌ಹ್ಯಾಮ್ ವಿವಿಯಲ್ಲಿ ಪದವಿ ಗಳಿಸಿದ ಹಾನ್‌ಕಾಕ್ ಬ್ರಿಟನ್ನಿನ ಖ್ಯಾತ ಪತ್ರಿಕೆಗಳಲ್ಲಿ ದುಡಿದರು.
ಹ್ಯಾನ್‌ಕಾಕ್ ೨೦೦೨ರಲ್ಲಿ ಅಂಡರ್‌ವರ್ಲ್ಡ್ :`ಫ್ಲಡೆಡ್ ಕಿಂಗ್‌ಡಮ್ಸ್ ಆಫ್ ದಿ ಐಸ್ ಏಜ್' ಎಂಬ ಪುಸ್ತಕವನ್ನು ಬರೆದು ಪ್ರಸಿದ್ಧರಾದರು. ಮಹಾಬಲಿಪುರಂ ಬಳಿ ಸಮುದ್ರತಳದಲ್ಲಿ ಇದ್ದ ಲಾಳಿಕೆಯಾಕಾರದ ಕಲ್ಲಿನ ರಚನೆಯ ಬಗ್ಗೆ ವಿಶೇಷ ಮಾಹಿತಿಗಳು ಬೇಕಾದರೆ ಈ ಪುಸ್ತಕ ಓದಿ!
ಇತಿಹಾಸ ಮರುಕಳಿಸುತ್ತದೆ; ಅಯಾಹುವಾಸ್ಕಾವನ್ನು ಸೇವಿಸಿದರೆ!
ಹಂಪಿಯ ಲಕ್ಷ್ಮೀನರಸಿಂಹನನ್ನು ಕಂಡಾಗ ಹ್ಯಾನ್‌ಕಾಕ್‌ನ ಈ ಪುಸ್ತಕದ ಪುಟಗಳುನೆನಪಾದವು. ಮನುಕುಲದ ವಿಶ್ವಪರಂಪರೆ ಎನ್ನುವುದು ಐವತ್ತು ಸಾವಿರ ವರ್ಷಗಳಿಂದಲೂ ಏಕತ್ರವಾಗಿದೆಯೆಂದು ಹೇಳುವ ಹ್ಯಾನ್‌ಕಾಕ್‌ನ `ಸೂಪರ್‌ನ್ಯಾಚುರಲ್' ಪುಸ್ತಕ ನಿಜಕ್ಕೂ ಇಂಟರೆಸ್ಟಿಂಗ್; ಹಾಗೇ ಮಿಸ್ಟಿಕ್!