ಕನ್ನಡ ಡಿಂಡಿಮ ಇಲ್ಲಿ ಕ್ಲಿಕ್ ಆಗೂದಿಲ್ವಲ್ಲ ಮಾರಾಯ್ರೆ!
ಎರಡೇ ಘಟನೆಗಳು ನನ್ನನ್ನು ಕಾಡುತ್ತಿವೆ.
ನಾನು ಅಂತರ್ಜಾಲ ಪತ್ರಿಕಾರಂಗದಲ್ಲಿದ್ದಾಗ ಸಂದರ್ಶನಕ್ಕೆಂದು ಸಾಹಿತಿ ಡಾ|| ಚಂದ್ರಶೇಖರ ಕಂಬಾರರನ್ನು ಕಂಡಿದ್ದೆ. `ಮಾಧ್ಯಮಗಳು ಉಳ್ಳವರಿಗಷ್ಟೇ ಅಲ್ಲ, ಉಳ್ಳದವರಿಗೂ ತಲುಪಬೇಕು. ಅದಕ್ಕೇ ಮುದ್ರಣಕ್ಕಿಂತ ರೇಡಿಯೋ, ಅದಕ್ಕಿಂತ ಟಿವಿ ಪರಿಣಾಮಕಾರಿ. ನಿರಕ್ಷರಿಗಳೂ ಇಲ್ಲಿ ಮಾಹಿತಿ ಪಡೆಯಬಹುದು. ಆದರೆ ನೀನು ಕಂಪ್ಯೂಟರ್, ಫೋನ್, ಇಂಟರ್‌ನೆಟ್ ಸಂಪರ್ಕ ಇರುವ, ಇಂಗ್ಲಿಶ್ ಬಲ್ಲ ಮಾಧ್ಯಮದಲ್ಲಿ ನನ್ನ ಸಂದರ್ಶನ ಹಾಕಿದರೆ ಎಷ್ಟು ಜನರಿಗೆ ತಲುಪುತ್ತೆ? ' ಎಂದು ಅವರು ಹೇಳಿದ್ದರು.
ಹೌದಲ್ಲ ಎನ್ನಿಸಿ ಮುಜುಗರವಾಗಿತ್ತು.
ಮರುವರ್ಷವೇ ಕನ್ನಡದಲ್ಲೂ ಮಾತಾಡಬಲ್ಲ `ಸಿಂಪ್ಯೂಟರ್' ಎಂಬ ಅಗ್ಗದ ಅಂಗೈ ಗಣಕ ರೂಪುಗೊಂಡಿತ್ತು. ಟೊಮ್ಯಾಟೋ ಚಿತ್ರದ ಮೇಲೆ ಪ್ಲಾಸ್ಟಿಕ್ ಕಡ್ಡಿಯಿಂದ ಒತ್ತಿದರೆ `ಟೊಮ್ಯಾಟೋ ಐದು ರೂಪಾಯಿ' ಎಂದು ಅಚ್ಚಗನ್ನಡದಲ್ಲಿ ಹೇಳುತ್ತಿತ್ತು. ಅದು ತಂತ್ರeನ ಕಂದರವನ್ನು ಮುಚ್ಚುವ ಪ್ರಯತ್ನ ಎಂದು ಅದನ್ನು ಸಂಶೋಧಿಸಿದ ಭಾರತೀಯ ವಿeನಿಗಳು ಹೇಳಿದ್ದರು.
ಈ ಸಾಧನವು ನಿರಕ್ಷರಿಗಳನ್ನೂ ಮುಟ್ಟುತ್ತಲ್ಲ ಎಂದು ಖುಷಿಯಾಗಿತ್ತು.
ಈಗ ಸಿಂಪ್ಯೂಟರ್ ವಾಣಿಜ್ಯಿಕವಾಗಿ ಬಂದಿಲ್ಲ.
ಮಾಹಿತಿಯ ಕಂದರ ಹಾಗೇ ಇದೆ. ಅದು ಕನ್ನಡ, ಮತ್ತಿತರ ಭಾರತೀಯ ಭಾಷೆಗಳು ಮತ್ತು ಮಾಹಿತಿ ತಂತ್ರeನದ ನಡುವಣ ಕಂದರವೂ ಆಗಿದೆ.
ಈಗ ಎಫ್ ಎಂ ಬ್ಯಾಂಡಿನ ಬಾನುಲಿ ಕೇಂದ್ರಗಳಲ್ಲಿ ಕೇಳಿಸುವುದೇ ಅಚ್ಚಗನ್ನಡ ಎಂಬಂತಾಗಿರುವುದು ಈ ಕಂದರದ ಇನ್ನೊಂದು ಮುಖ!
ಗಣಕಯಂತ್ರಗಳನ್ನು ಖರೀದಿಸುವ ಸಾಮರ್ಥ್ಯ ಇರುವ ನಮ್ಮ ಕನ್ನಡ ಲೇಖಕರಲ್ಲಿ ಎಷ್ಟು ಜನ ಗಣಕಗಳಲ್ಲೇ ತಮ್ಮ ಲೇಖನವನ್ನು ತಾವೇ ಬರೆಯುತ್ತಾರೆ? ಗಣಕಯಂತ್ರವಿದ್ದೂ ಎಷ್ಟು ಲೇಖಕರು ತಮ್ಮ ಲೇಖನಗಳನ್ನು ಹೇಳಿ ಬರೆಯಿಸುತ್ತಾರೆ? ಬೇರೆ ಗಣಕಗಳಲ್ಲಿ ಬರೆಯಿಸಿ ಕಳುಹಿಸುವ ಲೇಖಕರ ಸಂಖ್ಯೆ ಎಷ್ಟು?
`ಕಂಪ್ಯೂಟರ್ ಮುಂದೆ ಕೂತಾಗ ಭಾವನೆಗಳು ಹುಟ್ಟುವ
&#
3265;ದಿಲ್ಲ. ಪದಗಳು ಅಷ್ಟು ಸರಾಗವಾಗಿ ಹರಿಯುವುದಿಲ್ಲ' ಎಂಬ ಕಾರಣವನ್ನು ಕೊಡುವ ಅನೇಕ ಲೇಖಕರನ್ನು ನಾನು ಕಂಡಿದ್ದೇನೆ. ಮೊದಲು ನಾನೂ ಹೀಗೆಯೇ ಅಂದುಕೊಂಡಿದ್ದೆ. ಈಗ ನನ್ನ ಅಭಿಪ್ರಾಯಗಳು ಬದಲಾಗಿವೆ. ಕನ್ನಡದ ವಾತಾವರಣೆವೇ ಇಲ್ಲದ ಹಲವು ಲೇಖಕರು ಅಮೆರಿಕಾದಲ್ಲೋ, ಇಂಗ್ಲೆಂಡಿನಲ್ಲೋ ಕೂತು ಬಳ್ಳಾರಿಯ ಸೊಗಡನ್ನು `ಬರಹ' ಸಾಫ್ಟ್‌ವೇರ್ ಮೂಲಕ ಕನ್ನಡನಾಡಿಗೆ ತಲುಪಿಸಿದ್ದನ್ನು ನಾನು ನೋಡಿದ್ದೇನೆ. ಅಲ್ಲಿದ್ದವರಿಗೆ ಅದು ಸಾಧ್ಯವಾಗುವುದಾದರೆ ಇಲ್ಲಿಯವರಿಗೆ ಯಾಕಾಗುವುದಿಲ್ಲ?
ಕನ್ನಡದಲ್ಲಿ ಮಾಹಿತಿ ತಂತ್ರeನದ ಬಳಕೆ ಎಂದರೆ ಕೇವಲ ಕನ್ನಡ ತಂತ್ರಾಂಶದ ಬಳಕೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಕನ್ನಡ ತಂತ್ರಾಂಶ ಕನ್ನಡದ ಆಧುನಿಕ ಚಹರೆಯ ಒಂದು ಅಂಶ ಮಾತ್ರ. ಕನ್ನಡವನ್ನು ಮಾಹಿತಿ ತಂತ್ರeನದ ಮೂಲಕ ವಿವಿಧ ರಂಗಗಳಲ್ಲಿ ಹೆಚ್ಚಾಗಿ ಬಳಕೆಗೆ ತರುವ ಕೆಲಸ ಕನ್ನಡಿಗರಿಂದ ಆಗಬೇಕಿದೆ.
ಉದಾಹರಣೆಗೆ ಬಯೋಟೆಕ್ನಾಲಜಿಯನ್ನೇ ತೆಗೆದುಕೊಳ್ಳಿ. ಜೈವಿಕ ತಂತ್ರeನ ಎಂಬ ಹೆಸರು ಬಿಟ್ಟರೆ ನಮಗೆ ಈ ರ ಂಗದಲ್ಲಿ ಬಳಕೆಯಾಗುವ ಪದಗಳಿಗೆ ಸಮಾನ, ಸಮರ್ಥ ಕನ್ನಡದ ಪದಗಳು ಸಿಗುವ ಸಾಧ್ಯತೆ ಕಡಮೆ. ಸಿಕ್ಕಿದರೂ ಅವು ಸಂಸ್ಕೃತದ ನೆರಳಿನಲ್ಲೇ ಹುಟ್ಟಿರುತ್ತವೆ. ಹಲವು ವರ್ಷಗಳ ಹಿಂದೆ ಪ್ರಕಟವಾದ ವಿeನ ಪದಕೋಶವನ್ನು ನೆನಪಿಸಿಕೊಳ್ಳಿ. ಅದರಲ್ಲಿದ್ದ ಬಹುತೇಕ ಪದಗಳು ಸಂಸ್ಕೃತದಿಂದ ನೇರವಾಗಿ ಎತ್ತಿದವು. ವೈeನಿಕ ಪ್ರಗತಿಯನ್ನು ಬಿಂಬಿಸಲು ನೆರವಾಗಿದ್ದು ತಥಾಕಥಿತ `ಮೃತಭಾಷೆ' ಸಂಸ್ಕೃತ! ಸಾವಿರಾರು ವರ್ಷಗಳ ಹಿಂದೆಯೇ ಪ್ರಬುದ್ಧವಾಗಿದ್ದ ಸಂಸ್ಕೃತದಲ್ಲಿ ಹೀಗೆ ಪದಗಳು ಸಿಗಬೇಕಾದರೆ ಅವು ಕನ್ನಡದಲ್ಲಿ ಯಾಕೆ ಸಿಗಲಿಲ್ಲ ಎಂದು ನಮಗೆ ಮಂಡೆಬೆಚ್ಚ ಆಗಬೇಡವೆ?
ಇದು ಇಂಗ್ಲಿಶ್ ಭಾಷಾ ವಸಾಹತುಶಾಹಿ ಕಾಲ. ನಗರಗಳ ಉದ್ಯೋಗವಾಕಾಶದ ಕೇಂದ್ರಗಳಲ್ಲಿ ಆಂಗ್ಲಭಾಷೆಯಿಲ್ಲದೆ ಏನೂ ನಡೆಯುವುದಿಲ್ಲ. ಚಿಮೂ ಕನ್ನಡದ ಬಗ್ಗೆ ಎತ್ತುವ ಆತಂಕಗಳು ಇಲ್ಲಿ ಗಮನಾರ್ಹ. ಶೇ. ೩-೫ರಷ್ಟು ಉದ್ಯೋಗಿಗಳು ಮಾತ್ರ ಸರ್ಕಾರದಲ್ಲಿದ್ದಾರೆ. ಕನ್ನ
ಡವನ್ನು ಆಡಳಿತ ಭಾಷೆ ಮಾಡುವುದರಿಂದ ಯಾವ ಪರಿಣಾಮವೂ ಆಗುವುದಿಲ್ಲ. ಕ್ಷಣಕ್ಷಣಕ್ಕೂ ದುಡ್ಡನ್ನೆಣಿಸುವುದೇ ದೊಡ್ಡ ಕೆಲಸವಾಗಿರುವ ಉದ್ಯಮರಂಗದಲ್ಲಿ ಕನ್ನಡವನ್ನು ಕೇಳುವವರಾರು? ನನ್ನ ಗೆಳೆಯರೊಬ್ಬರು ತಂತ್ರಾಂಶ ಸಂಸ್ಥೆಯ ಮುಖ್ಯಸ್ಥರು. ಅವರು ವಿದೇಶಕ್ಕೆ ಹೋದಾಗಲೂ ತಮ್ಮ ಸಭೆ, ಚರ್ಚೆಗಳ ಟಿಪ್ಪಣಿಗಳನ್ನು ಕನ್ನಡದಲ್ಲೇ ಬರೆದುಕೊಳ್ಳುತ್ತಾರೆ. ಅವರ ಭೇಟಿಚೀಟಿಯಲ್ಲಿ ಕನ್ನಡದ ಅಂಕೆಗಳೂ ಇವೆ. ಸಿಲಿಕಾನ್ ರಾಜಧಾನಿ ಎಂಬ ಹೆಗ್ಗಳಿಕೆ(?)ಗೆ ಪಾತ್ರವಾದ ಬೆಂಗಳೂರಿನಲ್ಲಿ ಇಂಥವರ ಸಂಖ್ಯೆ ಎಷ್ಟು?
ಇನ್ನು ನಮ್ಮ ಮಾಧ್ಯಮಗಳ ಬಗ್ಗೆ ಹೇಳಲೇಬೇಕಾದ ಕೆಲವು ಸಂಗತಿಗಳಿವೆ. ಕನ್ನಡದ ಅಂಕಿಗಳನ್ನು ಬಳಸಿದರೆ ಅದು ಸಾಮಾನ್ಯರಿಗೆ ತಲುಪುವುದಿಲ್ಲ ಎಂಬುದು ಒಂದು ಸಮಜಾಯಿಷಿ. ಕನ್ನಡವೇ ಓದುವ ಭಾಷೆಯಾಗಿರುವಾಗ ಕನ್ನಡದ ಅಂಕಿಗಳು ಯಾಕೆ ಓದುಗರಿಗೆ ಕೆಲದಿನಗಳ ನಂತರವೂ ಅರ್ಥವಾಗದೇ ಹೋದೀತು ಎಂದು ನನಗಂತೂ ಅರ್ಥವಾಗುವುದಿಲ್ಲ. ಪ್ರಯೋಗಾರ್ಥವಾಗಿ, ಓದುಗರಿಗೆ ಮೊದಲ ಹಂತದಲ್ಲಿ ಕನ್ನಡ-ಇಂಗ್ಲಿಶ್ ಅಂಕಿಗಳೆರಡನ್ನೂ ನೀಡುವ ಪ್ರಯೋಗವನ್ನಾದರೂ ಈ ಮಾಧ್ಯಮಗಳು ಕೈಗೊಳ್ಳಬಹುದು. ಕನ್ನಡದ ಮೇಲಿನ ನೈಜ ಪ್ರೀತಿಯೊಂದೇ ಈ ಆಡಳಿತಾತ್ಮಕ ದೃಢತೆಯನ್ನು ತರಬಹುದು. ಮಾಹಿತಿ ತಂತ್ರeನದಲ್ಲಿ ಕನ್ನಡವು ಬಳಕೆಯಾಗುವುದಾದರೆ ಕನ್ನಡದ ಅಂಕಿಗಳೂ ಮುಖ್ಯ.
ವಿಷಯದಲ್ಲೂ, ವಾಸ್ತವದಲ್ಲೂ ಆಳವಾದ ದತ್ತಾಂಶ (ಡಾಟಾಬೇಸ್) ನಿರ್ವಹಣೆಗೆ ಬಂದರೆ ಕನ್ನಡದ ಬಳಕೆ ಆಗುತ್ತಿರುವುದು ನಗಣ್ಯ. ಅಂದರೆ ಗಣಕಗಳು ಹುಡುಕುವ ಮಾಹಿತಿರಾಶಿಯನ್ನೇ ಕನ್ನಡದಲ್ಲಿ ಸಿಗುವಂತೆ ಮಾಡುವ ಕೆಲಸ ತೀರಾ ಆಮೆಗತಿಯಲ್ಲಿ ಸಾಗಿದೆ.ವೆಸೂರು ವಿಶ್ವವಿದ್ಯಾಲಯದ ಡಾ|| ಶಾಲಿನಿ ಅರಸ್ ಯೂನಿಕೋಡ್ ಸಂಕೇತ ಬಳಸಿದ ದೊಡ್ಡ ಮಾಹಿತಿಕೋಶವನ್ನು ( ಡಾಟಾಬೇಸ್) ಇರುವ ಒಂದು ವೆಬ್‌ಸೈಟ್ ಮಾಡಿದ್ದಾರಂತೆ. ಸಂತಸದ ಸಂಗತಿಯೇ. ಸಿಲಿಕಾನ್ ಕಣಿವೆಯ ದೊರೆಗಳು ಬೆಂಗಳೂರಿನ ಸೌಂದರ್ಯ ಹೆಚ್ಚಿಸಲು ತೋರುವ ಕಾಳಜಿಯ ಕಿಂಚಿತ್ತನ್ನಾದರೂ ಇಲ್ಲಿ ತೋರಿಸಿದರೆ ಕನ್ನಡಿ&
#322
3;ರು ಧನ್ಯರು. ಡಾ|| ಶ್ರೀನಿವಾಸ ಹಾವನೂರರು ದಾಸಸಾಹಿತ್ಯದಲ್ಲಿ ಮಾಡಿದ ಡಾಟಾಬೇಸ್ ಕೆಲಸವನ್ನು ಎಲ್ಲರೂ ಹೊಗಳುತ್ತಾರೆಯೇ ವಿನಃ ಅದನ್ನು ಬೆಳೆಸಲು ಯಾರಿಗೂ ಆಸಕ್ತಿಯಿಲ್ಲ. ಕನ್ನಡ ಗಣಕ ಪರಿಷತ್ತು ಈ ಬಗ್ಗೆ ಪ್ರಯೋಗಗಳನ್ನು ಕೈಗೊಂಡಿದೆ.
ನಮ್ಮಲ್ಲಿ ಇರುವ ಇನ್ನೊಂದು ಭ್ರಮೆ ಎಂದರೆ ಮಾಹಿತಿ ತಂತ್ರeನದಲ್ಲಿ ಕನ್ನಡಿಗರು ಭಾರೀ ಸಾಧನೆ ಮಾಡಿದ್ದಾರೆ ಎನ್ನುವುದು. ಮಾಹಿತಿ ತಂತ್ರeನ ರಂಗದಲ್ಲಿ ಕನ್ನಡಿಗರು ತುಟಿ ಪಿಟಕ್ಕೆನ್ನದೆ ದುಡಿಯುತ್ತಿದ್ದಾರೆ ಎನ್ನುವುದೇ ವಾಸ್ತವ ಸಂಗತಿ. ಆದರೆ ಅವರೆಲ್ಲರೂ ವಿದೇಶಿ ತಂತ್ರಾಂಶ ಬೇಡಿಕೆಗಳಿಗಾಗಿ ದುಡಿಯುತ್ತಿದ್ದಾರೆಯೇ ಹೊರತು ಕನ್ನಡದ ಕೆಲಸವನ್ನು ಮಾಡುತ್ತಿಲ್ಲ.`ಇಷ್ಟೆಲ್ಲ ಕನ್ನಡಿಗರು ತಂತ್ರಾಂಶ ರಂಗದಲ್ಲಿ ಇದ್ದಾರೆ. ಅವರೆಲ್ಲ ಯಾಕೆ ಬರೀ ಕಥೆ ಬರೆಯುತ್ತಾರೆ? ಅವರೇ ಕೆಲಸ ಮಾಡುವ ಅತ್ಯಾಧುನಿಕ ತಂತ್ರeನದ ಬಗ್ಗೆ ಕನ್ನಡದಲ್ಲಿ ಬರೆಯಬಹುದಲ್ಲ?' ಎಂದು ಡಾ|| ಯು.ಬಿ.ಪವನಜ ಕೇಳುತ್ತಾರೆ. ಈ ಪ್ರಶ್ನೆಯ ಜೊತೆಗೇ ಅವರೆಲ್ಲ ಕನ್ನಡ ಮತ್ತು ಮಾಹಿತಿ ತಂತ್ರeನ ಕುರಿತು ಮನೆಗೆಲಸ ಮಾಡುತ್ತೇ ಕನ್ನಡಿಗರ ಖುಷಿ ಹೆಚ್ಚಿಸಬಹುದಲ್ಲ ಎಂದೂ ಕೇಳಬಹುದು.
ಮಾಹಿತಿ ತಂತ್ರeನದಲ್ಲಿ ಶ್ರಮ ವಹಿಸಿ ಹಣಗಳಿಸಿದ ಹಲವು ತಮ್ಮ ಪ್ರಾಥಮಿಕ ಶಾಲೆಗಳಿಗೆ ದೇಣಿಗೆ ನೀಡಿದ್ದಾರೆ. ಕಂಪ್ಯೂಟರ್ ಕೊಟ್ಟಿದ್ದಾರೆ. ಊರಿನ ಸುಪ್ರಸಿದ್ಧ ಕಂಟ್ರಾಕ್ಟುದಾರ ಶಾಲೆಯನ್ನು ನಿರ್ಮಿಸಲು ಸಿಮೆಂಟು ಕೊಟ್ಟದ್ದಕ್ಕೂ ಇದಕ್ಕೂ ಅಂಥ ವ್ಯತ್ಯಾಸವೇನಿಲ್ಲ. ಇವರ ಈ ಗುಣವನ್ನು ಹೃತ್ಪೂರ್ವಕವಾಗಿ ಅಭಿನಂದಿಸೋಣ. ಆದರೆ ಮಾಹಿತಿ ತಂತ್ರeನದ ಫಲವಾಗಿ ಒಂದೆರಡು ಶಾಲೆಗಳು ಸುಣ್ಣ ಬಣ್ಣ ಹೊಂದಿದರೆ ಸಾಕೆ? ಇದಂತೂ ಸಮಗ್ರ, ದೂರಗಾಮಿ ಚಿಂತನೆಯ ದೃಷ್ಟಿಕೋನ ಅಲ್ಲ.
ಪ್ರಾಥಮಿಕ ಶಾಲೆಯ ವಿಷಯಕ್ಕೇ ಬಂದರೆ ಕನ್ನಡದಲ್ಲಿ ರೂಪಿಸಿದ ಮಕ್ಕಳಿಗೆ ವಿಶೇಷವಾಗಿ ಆಕರ್ಷಕವಾದ `ಕನ್ನಡ ಲೋಗೋ' ತಯಾರಾಗಿ ತಿಂಗಳುಗಳೇ ಕಳೆದಿವೆ. ಅದು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರeನ ಕ್ರಿಯಾಯೋಜನೆಯ ಭಾಗವೂ ಹೌದು. ಹೀಗಿದ&#
3277
;ದೂ ಈ ವಿಳಂಬ ಯಾಕೆಂದೇ ತಿಳಿಯುತ್ತಿಲ್ಲ. ಪ್ರಾಥಮಿಕ ಗಣಕ ಶಿಕ್ಷಣವನ್ನೇ ಕನ್ನಡದಲ್ಲಿ ನೀಡುವ ಸಾಧನವಿದ್ದೂ ಅದನ್ನು ಬಳಕೆಗೆ ತಂದಿಲ್ಲ ಎಂದರೆ ಸರ್ಕಾರದ ಚಿಂತನೆ ಎಲ್ಲೋ ಎಡವಿದೆ ಎನ್ನಬಹುದಲ್ಲವೆ?
ನಮ್ಮ ಶಾಲೆಗಳಿಗೆ ಭಾರೀ ಕಟ್ಟಡಗಳು ಬೇಕಿಲ್ಲ. ಅದಿಲ್ಲದೆಯೂ ನಮ್ಮ ಶಾಲೆಗಳು ದಶಕಗಳ ಕಾಲ ಬದುಕಿವೆ. ನಾನು ಒಂದನೇ ಕ್ಲಾಸು ಓದಿದ ಶಾಲೆಯ ಕಟ್ಟಡ ಮೂವತ್ತು ವರ್ಷಗಳ ನಂತರವೂ ಹಾಗೆಯೇ ಪ್ರೀತಿ ಹುಟ್ಟಿಸುತ್ತದೆ. ಆದರೆ ಕಾಲಕ್ಕೆ ತಕ್ಕಂತೆ ಅದರಲ್ಲಿ ಕೊಡುವ ಶಿಕ್ಷಣ ಏನು ಎಂಬುದೇ ಮುಖ್ಯ. ಕಂಪ್ಯೂಟರ್ ಇದೆಯೆಂದ ಮಾತ್ರಕ್ಕೆ ಅದು ಹವಾನಿಯಂತ್ರಿತವೋ, ಮೊಸಾಯಿಕ್ ಹಾಸಿನಿಂದಲೋ, ಹುಸಿಛಾವಣಿಯಿಂದಲೋ ಅಲಂಕೃತವಾಗಬೇಕಿಲ್ಲ.
ಮಾಹಿತಿ ತಂತ್ರeನ ಎಂದಕೂಡಲೇ ವಿವಿಧ ಬಗೆಯ ಸಾಧನಗಳು ಕಣ್ಣಿಗೆ ಬೀಳುತ್ತವೆ. ನನಗಂತೂ ಕನ್ನಡದ ಹೆಸರು, ಸ್ಟಿಕರ್ ಹೊಂದಿರುವ ಒಂದಾದರೂ ಮಾಹಿತಿ ತಂತ್ರeನ ಸಾಧನ ಕಣ್ಣಿಗೆ ಬಿದ್ದಿಲ್ಲ. ಗಣಕಗಳ ಮೇಲೆ, ಟಿವಿ ಸಾಧನಗಳ ಮೇಲೆ, ವಾಕ್‌ಮನ್ ಮೇಲೆ ಪೂರ್ವದ ಹಲವು ದೇಶಗಳ ಭಾಷೆಗಳನ್ನು ನೋಡಿದ್ದೇನೆ. ಕನ್ನಡ? ಕೇಳಬೇಡಿ.
ಇಷ್ಟೇ ಅಲ್ಲ, ಸರ್ಕಾರದ ಕ್ರಿಯಾಸೂಚಿಯಲ್ಲಿ ಇನ್ನೂ ಹಲವು ಅಂಶಗಳಿವೆ. ಗಣಕಗಳಲ್ಲಿ ಕನ್ನಡದ ಬಳಕೆ ಹೆಚ್ಚಲು ಇವೆಲ್ಲ ಸಹಾಯಕ ಎಂದು ಖಂಡಿತ ಹೇಳಬಹುದು. ಈ ಹಿನ್ನೆಲೆಯಲ್ಲಿ ಈಗಷ್ಟೆ ಬಿಡುಗಡೆಯಾಗಿರುವ ನುಡಿ ಕನ್ನಡ ಲಿಪಿ ತಂತ್ರಾಂಶವು ಈಗ ಸಾರ್ವತ್ರಿಕವಾದ ಯೂನಿಕೋಡ್ ಸಂಕೇತಗಳನ್ನು ಬಳಸಿದೆ ಎನ್ನುವುದು ಸಮಾಧಾನದ ಸಂಗತಿ. ಆದರೆ ನುಡಿ ತಂತ್ರಾಂಶವು ಈಗಲೂ ಮಾಹಿತಿ ತಂತ್ರeನದ `ಯಜಮಾನ' ಮತ್ತು ವಾಣಿಜ್ಯ ಹಿತಾಸಕ್ತಿಗಳಿರುವ ಮೈಕ್ರೋಸಾಫ್ಟ್ ವಿಂಡೋಸ್ ಮೇಲೆಯೇ ಕೆಲಸ ಮಾಡುತ್ತಿರುವುದು ವಿಷಾದನೀಯ. ಉಚಿತ, ಸಾರ್ವಜನಿಕ ಬಳಕೆಯ ಲಿನಕ್ಸ್ ಆಧಾರದಲ್ಲಿ ನುಡಿ ತಂತ್ರಾಂಶವು ರೂಪುಗೊಳ್ಳಬೇಕಾದ್ದು ಆದ್ಯತೆ ಆಗಬಹುದಿತ್ತು ಎಂದು ನನಗೆ ಅನ್ನಿಸುತ್ತದೆ. ಉಳ್ಳವರಿಗಾಗಿ ತಂತ್ರಾಂಶ ರೂಪಿಸುವ ಕೆಲಸವನ್ನು ಯಾಕೆ ಮಾಡಬೇಕು?
ಇಲ್ಲೊಂದು ಉದಾಹರಣೆ ಗಮನಿಸಿ: ಕನ್ನಡ ಗಣಕ &
amp;
#3242;ರಿಷತ್ತು ವೇತನ ತಂತ್ರಾಂಶವನ್ನು ರೂಪಿಸಿದೆ. ಅದನ್ನು ಸರ್ಕಾರವು ಅಧಿಕೃತವಾಗಿ ಒಪ್ಪಿಕೊಂಡಿದೆ. ಆದರೆ ಶಿಕ್ಷಣ ಇಲಾಖೆಯವರು ಈ ವೇತನ ತಂತ್ರಾಂಶವನ್ನು ರೂಪಿಸಲು ಅಝೀಮ್ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ಬೇಡಿಕೆ ನೀಡಿದ್ದಾರೆ. ಹಾಗಾದರೆ ಸರ್ಕಾರವೇ ಮಾನ್ಯ ಮಾಡಿ ತಿರಸ್ಕರಿಸಿದ ತಂತ್ರಾಂಶಕ್ಕೆ ಸಾರ್ವಜನಿಕರು ಯಾಕೆ ಗೌರವ ಕೊಡಬೇಕು? ಸರ್ಕಾರಕ್ಕೇ ತನ್ನ ಕೆಲಸಗಳ ಬಗ್ಗೆ ಸರಿಯಾದ ಮಾಹಿತಿ, ಕಾಳಜಿ ಇದ್ದಿದ್ದರೆ ಇಂಥ ಗೊಂದಲಗಳು ಇರುತ್ತಿರಲಿಲ್ಲ.
ಬಯೋಟೆಕ್ನಾಲಜಿ ಇರಲಿ, ನಮ್ಮಲ್ಲಿ ಗಣಕವನ್ನು ಬಳಸಿ ಕನ್ನಡ ಭಾಷೆಯಲ್ಲಿ ನಡೆಸಿದ ಸಂಶೋಧನೆಗಳೇ ನಗಣ್ಯ. ಕಂಪ್ಯೂಟರ್ ಬಳಸಿ ಕನ್ನಡದಲ್ಲಿ ಆಟ ಆಡಲು ಬರುವುದಿಲ್ಲ. ವಿಡಿಯೋಗೇಮ್ ಇಲ್ಲ. ಸಿನಿಮಾದಂಥ ಆಧುನಿಕ ತಂತ್ರಜ್ಞಾನವು ಕನ್ನಡದ ಬಳಕೆಗೆ ಪಕ್ಕಾಗಿ ಹೇಗೆ ದೇಸಿಯಾಗಿ ಕಾಣುತ್ತದೆ ಎಂಬುದನ್ನು ಗಮನಿಸಿ. ಅದೇ ರೀತಿಯಲ್ಲಿ ನಮ್ಮ ಗಣಕಗಳು ಕನ್ನಡಕ್ಕೆ ರೂಪಾಂತರಗೊಂಡಿವೆಯೆ? ತಂತ್ರeನ ಕೇವಲ ಸಾಧನ. ಅದನ್ನು ಬಳಸುವಾಗ ನಮ್ಮತನವನ್ನು ಬಿಟ್ಟುಕೊಡಬೇಕಿಲ್ಲ, ಬಿಡುವುದೂ ತಪ್ಪು ಎಂಬ ಭಾವ ನಮಗೆ ಬರುವುದಿಲ್ಲ.
ಈ ದೃಶ್ಯ ಕಲ್ಪಿಸಿಕೊಳ್ಳಿ. ದೇಶದ ಒಂದು ಪ್ರಮುಖ ತಂತ್ರಾಂಶ ಸಂಸ್ಥೆ. ಅದರ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ. ದೇಶ-ವಿದೇಶಗಳ ಯುವಕರು ಇಲ್ಲಿ ಸಿಬ್ಬಂದಿಗಳು. ಅವರೆಲ್ಲರೂ ತಮ್ಮ ತಮ್ಮ ಭಾಷೆಯನ್ನೇ (ಗೊತ್ತಿದ್ದರೆ) ಬಳಸಿದರೂ ವಿದೇಶಕ್ಕೆ ಬೇಕಾದ ಇಂಗ್ಲಿಶ್ ಅಥವಾ ಇನ್ನೊಂದು ಭಾಷೆಯಲ್ಲಿ ತಂತ್ರಾಂಶಗಳನ್ನು ರೂಪಿಸುತ್ತಾರೆ. ಈ ಸಂಸ್ಥೆಯ ನೊಟೀಸು ಬೋರ್ಡಿನಲ್ಲಿ ಇಂಗ್ಲಿಶ್ ಬಿಟ್ಟು ಬೇರೆಲ್ಲ ಭಾರತೀಯ ಭಾಷೆಗಳೂ ರಾರಾಜಿಸುತ್ತವೆ.
ಅಷ್ಟೆ. ಈ ದೃಶ್ಯವನ್ನು ಕಲ್ಪಿಸಿಕೊಳ್ಳಬೇಕು!
ಈ ಮೇಲ್‌ನಂಥ ಸೇವೆಗಳಲ್ಲಿ ಕನ್ನಡದ ಬಳಕೆ ಆಗುತ್ತಿದೆ ಎನ್ನುವುದು `ಅಗತ್ಯವೇ ಆವಿಷ್ಕಾರದ ತಾಯಿ' ಎಂಬಂತೆ. ಇಲ್ಲಿ ಅಗತ್ಯಕ್ಕೆ ತಕ್ಕಂತೆ ಸೇವೆಯನ್ನು ರೂಪಿಸಲಾಗಿದೆ. ಅದನ್ನು ಉಳಿದ ಕನ್ನಡಿಗರಿಗೂ ಸಿಗುವಂತೆ ಮಾಡಿದ್ದಕ್ಕೆ ಆಯಾ ಸಂಬಂಧಿತರಿಗ&
;#32
70;ಲ್ಲ ಧನ್ಯವಾದ ಹೇಳೋಣ!
ಮಾಹಿತಿ ತಂತ್ರeನದಲ್ಲಿ ಕನ್ನಡದ ಕೆಲಸ ಎಂದರೆ ಲಿಪಿ, ಧ್ವನಿಯ ಆಧುನಿಕ ಬಳಕೆಯ ಆವಿಷ್ಕಾರ ಎಂದೂ ಹೇಳಬಹುದು. ಕನ್ನಡದಲ್ಲಿ ಇನ್ನೂ ಕಿವುಡರಿಗಾಗಿ ಸನ್ನೆ ಭಾಷೆ ರೂಪುಗೊಂಡಿಲ್ಲ. ಅಥವಾ ಕುರುಡರಿಗಾಗಿ ಕನ್ನಡ ಬ್ರೈಲ್ ಇಲ್ಲ. ಅಂಧರಿಗಾಗಿ ಪುಸ್ತಕಗಳನ್ನು ಪ್ರಕಟಿಸುವುದೂ ದುಸ್ತರವೇ. ಹಾಗಂತ ಕಣ್ಣಿದ್ದವರು ಕನ್ನಡ ಪುಸ್ತಕವನ್ನು ಕೊಳ್ಳುವುದು ಅಷ್ಟರಲ್ಲೇ ಇದೆ! ಅಮೆರಿಕದಲ್ಲಿ ದೈಹಿಕ ವಿಕಲಾಂಗರಿಗೆ ಅನುಕೂಲವಾಗುವ ಹಾಗೆಯೇ ಎಲ್ಲ ವಾಸ್ತುರಚನೆಗಳೂ ಇರುತ್ತವೆ ಎಂದು ಕೇಳಿದ್ದೇನೆ. ವಿಕಲಾಂಗರಿಗೂ ಮಾಹಿತಿ ತಂತ್ರeನದ ಪ್ರಯೋಜನ ಆಗುವಂತೆ ನಮ್ಮ ಗುರಿ ಇದ್ದರೆ ಮಾತ್ರ ಉಳಿದಂತೆ ಬೆಳವಣಿಗೆಗಳು ಸಾಧ್ಯ ಎಂಬುದು ನನ್ನ ಅನಿಸಿಕೆ.ಆದರೆ ನಾವು ಮಾಹಿತಿ ತಂತ್ರeನದ ಭವ್ಯ ದಿವ್ಯ ಮತ್ತಿನಲ್ಲಿ ಇದ್ದೇವೆ. ರ್‍ಯಾಂಪುಗಳು, ಗಾಲಿಖುರ್ಚಿಗಳು ಕೇವಲ ಆಸ್ಪತ್ರೆಗಳು, ರೈಲು ನಿಲ್ದಾಣ – ಬಸ್ ನಿಲ್ದಾಣಗಳಲ್ಲಿ ಇರಬೇಕಾದವು ಎಂದು ಭಾವಿಸಿದ್ದೇವೆ. ಸನ್ನೆಚಿತ್ರಗಳು ಕೇವಲ ಶೌಚಾಲಯದಲ್ಲಿ, ಅಥವಾ ರಸ್ತೆಗಳಲ್ಲಿ ಇದ್ದರೆ ಸಾಕು ಎಂದು ನಂಬಿದ್ದೇವೆ.
ಮಾಹಿತಿ ತಂತ್ರeನ ಎಂದರೇನು, ಕಂಪ್ಯೂಟರ್ ಕಲಿಯಿರಿ ಎಂಬ ಬಗ್ಗೆ ಬೆರಳೆಣಿಕೆಯ (ಹಲವು ಕೇವಲ ಲೇಖಕರಿಗೆ ಮಾತ್ರ ಅರ್ಥವಾಗುವ ಹಾಗೆ ಬರೆದವು) ಪುಸ್ತಕಗಳಿವೆ. ಆದರೆ ಮಾಹಿತಿ ತಂತ್ರeನದ ತಾಂತ್ರಿಕ ಸಂಗತಿಗಳ ಬಗ್ಗೆ, ಅಥವಾ ಒಂದು ತಂತ್ರಾಂಶ ರಚನೆಯ ಬಗ್ಗೆ, ಅಥವಾ ಒಂದು ಪ್ರೋಗ್ರಾಮಿಂಗ್ ಭಾಷೆಯ ಬಗ್ಗೆ ಕನ್ನಡದಲ್ಲಿ ಒಂದಾದರೂ ಪುಸ್ತಕ ಬಂದಿಲ್ಲ. ಯಾಕೆಂದರೆ ಅದನ್ನು ಬಳಸುವವರೂ, ಓದುವವರೂ ಇಲ್ಲ!
ನೀವು ಇಂಟರ್‌ನೆಟ್ ಪ್ರವೇಶಿಸಿ (ಅಂತರ್ಜಾಲ) ನೋಡಿ: ಎಷ್ಟು ಕನ್ನಡದ ವೆಬ್‌ಸೈಟುಗಳಿವೆ ಎಣಿಸಿ. ಮೂರು ಕೋಟಿ ವೆಬ್‌ಸೈಟುಗಳಲ್ಲಿ ಕನ್ನಡದ ಜಾಲತಾಣಗಳ ಸಂಖ್ಯೆ ಇಪ್ಪತ್ತೈದು ದಾಟಿದರೆ ಕನ್ನಡಿಗರ ಪುಣ್ಯ! ಇಂಟರ್‌ನೆಟ್‌ನಲ್ಲಿ ವೆಬ್‌ಸೈಟ್ ಎನ್ನುವುದು ಕೇವಲ ಮೊದಲ ಹಂತದ ಮಾಧ್ಯಮ. ಆಂತರ್ಜಾಲದಲ್ಲಿ ಈಗ ಸಾವಿರಾರು ಸಹಕಾರಿ ತಂತ್ರಾಂಶಗಳು ಬಳ&
;#32
21;ೆಯಲ್ಲಿವೆ.
ಬಿಲ್ ಗೇಟ್ಸ್ ಅವರು ಕರ್ನಾಟಕದಲ್ಲಿ ಏಯ್ಡ್ಸ್ ರೋಗ ನಿರ್ಮೂಲನೆಗೆ ಎಷ್ಟೋ ಕೋಟಿ ರೂ.ಗಳನ್ನು ಉದಾರವಾಗಿ ನೀಡಿದ್ದಾರೆ. ಹೇಗಿದೆ! ಮಾಹಿತಿ ತಂತ್ರeನದಿಂದ ಕನ್ನಡನಾಡು ಉದ್ಧಾರವಾಗುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? (ಏಯ್ಡ್ಸ್ ರೋಗ ನಿರ್ಮೂಲನೆಗೆ ರಾಜ್ಯಕ್ಕೆ ಹರಿದುಬಂದಿರುವ ಹಣದ ಮೊತ್ತವು ರಾಜ್ಯದಲ್ಲಿರುವ ಏಯ್ಡ್ಸ್ ರೋಗಾಣುಗಳ ಸಂಖ್ಯೆಗಿಂತ ಸಾವಿರ ಪಟ್ಟು ಹೆಚ್ಚು ಎಂಬ ಅಂಶವನ್ನು ನಾನು ಕಂಡುಕೊಂಡಿದ್ದೇನೆ).
ಸದ್ಯ, ಈ ಸಲ ಮೂಡುಬಿದಿರೆ ಸಾಹಿತ್ಯ ಸಮ್ಮೇಳನದಲ್ಲಿ ಮಾಹಿತಿ ತಂತ್ರeನದ ಬಗ್ಗೆ, ವೈದ್ಯಸಾಹಿತ್ಯದ ಬಗ್ಗೆ ಪ್ರತ್ಯೇಕ ಗೋಷ್ಠಿಗಳಿವೆ. ನಿಜಕ್ಕೂ ಇದು ಸ್ವಾಗತಾರ್ಹ ಬೆಳವಣಿಗೆ. ಇಲ್ಲಿ ಕೇವಲ ಸಾಹಿತ್ಯದ ಚರ್ಚೆಯಾಗದೆ ಕನ್ನಡದ ಒಟ್ಟಾರೆ ಬೆಳವಣಿಗೆಯ ಕುರಿತು ಚರ್ಚೆಯಾಗಬೇಕು ಎಂದು ಅಪೇಕ್ಷಿಸಬಹುದು. ಇಲ್ಲಿ ಕನ್ನಡದ ಕೆಲಸ ಮಾಡುವುದು ಪ್ರತಿಷ್ಠೆಯ ಸಂಗತಿಯಲ್ಲ. ಸಹಜ ಪ್ರವೃತ್ತಿ ಎಂಬ ಅಂಶವನ್ನು ಎಲ್ಲರೂ ಗ ಮನದಲ್ಲಿ ಇಡಬೇಕು. ಸರ್ಕಾರವು ಮಾಹಿತಿ ತಂತ್ರeನದ ಬಗ್ಗೆ , ಮಾನದಂಡ ತಂತ್ರಾಂಶದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಮಾತನಾಡಿದೆ ಎಂದು ನನಗೆ ವಿಧಾನಸೌಧದಲ್ಲಿ ಈಗಲೂ ಬಳಕೆಯಾಗುತ್ತಿರುವ ಚಿತ್ರವಿಚಿತ್ರ ಮತ್ತು ಅಂದವಿಲ್ಲದ ಕನ್ನಡ ತಂತ್ರಾಂಶಗಳನ್ನು ನೋಡಿದಾಗ ಖಚಿತವಾಗಿದೆ. ಮೊದಲು ಸರ್ಕಾರ ತನ್ನ ಗಣಕಗಳಲ್ಲಿ ಇರುವ ಮಾನದಂಡ ತಂತ್ರಾಂಶವಾದ `ನುಡಿ'ಯನ್ನು ಹೊರತುಪಡಿಸಿ ಉಳಿದೆಲ್ಲ ತಂತ್ರಾಂಶಗಳನ್ನು ಕಿತ್ತುಹಾಕಲಿ. ಆಗ `ನುಡಿ'ಗೂ ಬೆಲೆ ಬರುತ್ತದೆ. ಅದರ ಜವಾಬ್ದಾರಿಯೂ ಹೆಚ್ಚುತ್ತದೆ.
ಆದರೆ ಸರ್ಕಾರವು ಈಗ `ನುಡಿ'ಯ ಬೆಳವಣಿಗೆ ಬಗ್ಗೆ ಅಂಥ ತಲೆಕೆಡಿಸಿಕೊಂಡಿಲ್ಲ ಎಂಬ ಸುದ್ದಿಯೂ ಇದೆ. ಬಲ್ಲ ಮೂಲಗಳನ್ನು ಉಲ್ಲೇಖಿಸಿ ಹೇಳುವುದಾದರೆ ಕರ್ನಾಟಕ ಸರ್ಕಾರವು ಕನ್ನಡದ ಮಾಹಿತಿ ತಂತ್ರeನ ಸಂಬಂಧೀ ಕೆಲಸಗಳಿಗೆ ಮಂಜೂರಾಗಿದ್ದ ಭಾರೀ ಪ್ರಮಾಣದ ಹಣವನ್ನು ಕೆಲವು ಹಿರಿಯ ಅಧಿಕಾರಿಗಳು ಬೇರೆ ಕಡೆ ಹೊರಳಿಸಿದ್ದಾರೆ. ಬಂದ ಒಂದಷ
್ಟು ಮೊತ್ತವೂ ಹೀಗೆ ಚೆಲ್ಲಿಹೋದರೆ ಕನ್ನಡದ ಕೆಲಸ ಅಷ್ಟಕ್ಕಷ್ಟೆ.
ಕನ್ನಡ ತಂತ್ರಾಂಶದ ಅಭಿವೃದ್ಧಿ ಸರ್ಕಾರದ, ಸಂಘ ಸಂಸ್ಥೆಗಳ ಜವಾಬ್ದಾರಿಯೇ ಹೊರತು ಯಾರ ಗುತ್ತಿಗೆಯೂ ಅಲ್ಲ ಎಂಬುದನ್ನು ಎಲ್ಲರೂ ಅರಿಯುವುದು ಒಳ್ಳೆಯದು. ಅಮೆರಿಕಾದಲ್ಲಿ ಇರುವ ಶೇಷಾದ್ರಿ ವಾಸುರಂಥವರು ಅಚ್ಚುಕಟ್ಟಾದ, ಖಾಸಗಿ ಸಂಸ್ಥೆಗಳೂ ನಾಚುವಂಥ `ಬರಹ' ತಂತ್ರಾಂಶ'ವನ್ನು ರೂಪಿಸಲು ಸಾಧ್ಯವಾದರೆ, ಕನ್ನಡನಾಡಿನಲ್ಲಿ ವಾಸಿಸುವ ನಮಗೆ ಕನ್ನಡದ ಬೆಳವಣಿಗೆಗೆ ಅನುಕೂಲವಾಗುವ ಪೂರಕ ತಂತ್ರಾಂಶಗಳನ್ನು, ಮುದ್ದಾದ ಕನ್ನಡ ಅಕ್ಷರಗಳನ್ನು ರೂಪಿಸಲಾಗುತ್ತಿಲ್ಲ?
ಭಾಷೆಯ ಸಂವಹನ ಮಾಧ್ಯಮ ಬದಲಾದ ಕೂಡಲೇ ಅದರ ಲಿಪಿಯನ್ನು ತಂತ್ರeನಕ್ಕೆ ತಕ್ಕಂತೆ ಬದಲಿಸುವುದು ರೂಢಿಯಾಗಿದೆ. ಉದಾಹರಣೆಗೆ ಕನ್ನಡ ಸಿನಿಮಾ ಪೋಸ್ಟರ್‌ಗಳಲ್ಲಿರುವ ಶೀರ್ಷಿಕೆಗಳನ್ನೇ ನೋಡಿ. ಲಿಪಿಶಾಸ್ತ್ರಕ್ಕೆ ಅನುಗುಣವಾಗಿ ಸೃಜನಶೀಲತೆ ಮೆರೆಯಲಿ. ಆದರೆ ಅದನ್ನು ಶೈಲಿಯ ಹೆಸರಿನಲ್ಲಿ ಕುರೂಪಗೊಳಿಸುವುದು ಬೇಡ. ಈಗ ಬಳಕೆಯಲ್ಲಿರುವ ಹಲವು ತಂತ್ರಾಂಶಗಳಲ್ಲಿ ಕನ್ನಡದ ಲಿಪಿಯೇ ಬದಲಾಗಿದೆ. ಲಿಪಿಯು ಬದಲಾಗಬೇಕಾದ್ದು ಸಂಸ್ಕೃತಿಯಲ್ಲಿನ, ಸಮುದಾಯದಲ್ಲಿನ ಬದಲಾವಣೆಗಳಿಂದಲೇ ಹೊರತು ಸಾಧನದಿಂದಲ್ಲ. ಗಣಕಗಳಿಗಾಗಿ ಮಾಡುವ ಲಿಪಿಸಂಬಂಧಿ ಬದಲಾವಣೆಗಳ ಬಗ್ಗೆ ಗಂಭೀರ ಎಚ್ಚರಿಕೆ ಅಗತ್ಯ. ನಾವೇ ರೂಪಿಸಿದ ತಂತ್ರeನವನ್ನು ಮಣಿಸಲೂ ನಮಗಾಗುವುದಿಲ್ಲ ಎಂಬುದು ವಿತಂಡವಾದ.
ನಾವು ಮಾಡಬಹುದಾದ ಕನ್ನಡದ ಕೆಲಸವನ್ನು ಹೀಗೆ ಗುರುತಿಸಬಹುದು:
ಕನ್ನಡ ಲಿಪಿಯನ್ನು ಗಣಕಗಳಲ್ಲಿ ಮತ್ತು ಸಂಬಂಧಿತ ಸಾಧನ, ಸಲಕರಣೆಗಳಲ್ಲಿ, ತಂತ್ರಾಂಶಗಳಲ್ಲಿ ಅಳವಡಿಸುವ ಬಗೆಗೆ ಸ್ಪಷ್ಟ, ಸಮಗ್ರ ಕಾರ್ಯನೀತಿ. ಲಿಪಿಯ ಅಂದ, ವಿನ್ಯಾಸವು ಅಸಾಂಸ್ಕೃತಿಕ ಕಾರಣಕ್ಕಾಗಿ ಬದಲಾಗದಂತೆ ಎಚ್ಚರ.
ಈಗ ಬೆಳೆಯುತ್ತಿರುವ ಹೊಸ ಹೊಸ ವಿಷಯಗಳ ಬಗೆಗೆ ಕನ್ನಡದಲ್ಲಿ ಮಾಹಿತಿ ಹೊಂದಿರುವ ಪುಸ್ತಕಗಳ ಪ್ರಕಟಣೆ. ಈ ರಂಗಗಳಲ್ಲಿ ಕನ್ನಡದ ಪ್ರಚಾರಕ್ಕಾಗಿ ಪ್ರತ್ಯೇಕ ಕಾರ್ಯಯೋಜನೆ.
ಮುದ್ರಣ, ದ&am
p;#3
267;ಶ್ಯ ಹಾಗೂ ಶ್ರವ್ಯ ಮಾಧ್ಯಮಗಳಲ್ಲಿ (ಪತ್ರಿಕೆಗಳು, ದೂರದರ್ಶನ ಹಾಗೂ ಬಾನುಲಿ) ಕನ್ನಡದ ಶುದ್ಧ ಮತ್ತು ಸ್ಪಷ್ಟ ಕನ್ನಡ ಬಳಕೆಗೆ ಸರ್ಕಾರದಿಂದ ನಿಗಾ ಸಮಿತಿ ಮತ್ತು ಸಾರ್ವಜನಿಕರಿಂದ ಒತ್ತಡ.
ಕನ್ನಡ ಅಂಕಿಗಳ ಬಳಕೆಗಾಗಿ ಜನಜಾಗೃತಿ, ಪ್ರಯೋಗ. ಇಲ್ಲಿ ವಿಶೇಷವಾಗಿ ಕನ್ನಡ ದಿನಪತ್ರಿಕೆಗಳ ಮತ್ತು ಸರ್ಕಾರದ ನೆರವು ಕೋರಿಕೆ.
ಬ್ಯಾಂಕುಗಳಲ್ಲಿ, ಸಾರ್ವಜನಿಕ ಮಾಹಿತಿ ಸ್ಥಳಗಳಲ್ಲಿ ಸ್ಥಾಪಿಸುವ ಮಾಹಿತಿ ಸಾಧನಗಳಲ್ಲಿ ಕನ್ನಡ ಮಾಹಿತಿಯು ಕಾಣುವ, ಕೇಳುವ ದೃಶ್ಯಗಳು ಮುಂದಿನ ಐದಾರು ವರ್ಷಗಳಲ್ಲಾದರೂ ಆಗುತ್ತದೆ ಎಂದು ನಾನು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಕುವೆಂಪು ಹೇಳಿದ ವಿಶ್ವಮಾನವನಾಗುವುದು ತೀರಾ ಕಷ್ಟ ಎನಿಸಿದರೆ ಕೊನೇಪಕ್ಷ ನಾವು ವಿಶ್ವಕನ್ನಡಿಗರಾದರೂ ಆಗಬಹುದು. ಅಷ್ಟರಮಟ್ಟಿಗೆ ನಮ್ಮ ತಂತ್ರeನಿಗಳ ಕನ್ನಡ ಪ್ರೀತಿ ಹೆಚ್ಚಬೇಕು. ಮಾಹಿತಿ ಹರಿವಿನ ಚಹರೆ ಬದಲಾಗಬೇಕು.
ಕೆಲವರ್ಷಗಳ ಹಿಂದೆ ಭಾರತದಲ್ಲಿ ಸಾವಿರಕ್ಕೆ ಮೂವರಿಗೆ ಮಾತ್ರ ಗಣಕ ಸೌಲಭ್ಯ ಇದೆ ಎಂಬ ಲೆಕ್ಕ ಪ್ರಕಟವಾಗಿತ್ತು. ಈಗಲೂ ಈ ಲೆಕ್ಕ ಹಾಗೆಯೇ ಇದೆ. ಮಾಹಿತಿ ತಂತ್ರಜ್ಞಾನ ಎಂದಾಗ ಈ ಗಣಕಯುಕ್ತ ಜನಸಂಖ್ಯೆಯನ್ನು ಗಮನದಲ್ಲಿ ಇಡದಿದ್ದರೆ ಈ ರೀತಿ ಭಾರೀ ಚರ್ಚೆ ಮಾಡುವುದೇ ವ್ಯರ್ಥ! ಬಹುಶಃ ಇನ್ನು ಹತ್ತು ವರ್ಷಗಳ ನಂತರ ಈ ಚರ್ಚೆಗೆ ವಾಸ್ತವಿಕ ತಳಹದಿ ಸಿಗಬಹುದು.
ಅಲ್ಲಿವರೆಗೆ ಕನ್ನಡ ಕ್ಲಿಕ್ ಆಗೂದು ಕಷ್ಟ ಉಂಟು ಮಾರಾಯ್ರೆ!