ಬದುಕು ಬದಲಿಸಿದ ಮಹಿಳೆಯರು
ಮಾನವ ಹಕ್ಕುಗಳ ಬಗ್ಗೆ ಮಹಿಳೆಯರು ಹೋರಾಡಿದ ಕಥೆ ಗೊತ್ತೆ? ನಮ್ಮ ಮೇಧಾ ಪಾಟ್ಕರ್, ಸ್ನೇಹಕುಂಜದ ಕುಸುಮಕ್ಕ, ಇವರನ್ನು ನೆನಪಿಸುವಹಲವು ಮಹಿಳೆಯರು ಈ ಹೊತ್ತು ಜಗತ್ತಿನ ವಿವಿಧ ಮೂಲೆಗಳಲ್ಲಿ ಇಂಥ ಹೋರಾಟದಲ್ಲಿ ತೊಡಗಿದ್ದಾರೆ.
ಉದಾಹರಣೆಗೆ ಮುಸೂ ಹದಾದ್‌ಳನ್ನೇ ತೆಗೆದುಕೊಳ್ಳೋಣ. ಈಕೆ ಇರೋದು ಲೈಬೀರಿಯಾದಲ್ಲಿ. ಅವಳ ತಾಯಿಯಂತೂ ಕರುಣಾಮಯಿ. ತೆರಿಗೆ ಕೊಡಲಾಗದೆ ಸೆರೆಮನೆ ವಾಸಕ್ಕೆ ಗುರಿಯಾಗಿದ್ದವರಿಗೆ ತನ್ನಲ್ಲಿದ್ದ ಎಲ್ಲಾ ಹಣವನ್ನೂ ಕೊಟ್ಟ ತಾಯಿ.`ನನ್ನ ಮೊದಲ ಸೂರ್ತಿಯೇ ನನ್ನ ತಾಯಿ. ಅವಳೇ ನನ್ನ ಮಾನವ ಹಕ್ಕು ಹೋರಾಟದ ಹಿಂದಿನ ಸೆಲೆ' ಎಂದು ಮೂಸೂ ಹದಾದ್ ಹೆಮ್ಮೆಯಿಂದ ಹೇಳುತ್ತಾಳೆ. ಹಾಗ ನೋಡಿದರೆ ಅವಳ ತಾಯಿಯ ದೊಡ್ಡ ಕೊಡುಗೆ ಎಂದರೆ ಆಕೆಯ ಮಗಳೇ!
ಮೂಸೂ ಒಬ್ಬ ಪತ್ರಕರ್ತೆ. ಪತ್ರಿಕಾರಂಗದಲ್ಲಿ ಎಲ್ಲವೂ ಒಳಗೊಳ್ಳುತ್ತವೆ ಎನ್ನುವುದೇ ಆಕೆಯು ಈ ರಂಗದಲ್ಲಿ ಕೆಲಸ ಮಾಡುವುದಕ್ಕೆ ಪ್ರೇರಣೆ. ಇಲ್ಲಿ ಆಕೆ ತನ್ನ ದೇಶದಲ್ಲಿ ನಡೆಯುವ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ದಿಟ್ಟವಾಗಿ ಬರೆದಿದ್ದಾಳೆ. ಸರ್ಕಾರದ ಬೆದರಿಕೆ, ದಬಾವಣೆಗೆ ಆಕೆ ಬಗ್ಗಲೇ ಇಲ್ಲ. ಲೈಬೀರಿಯಾ ವಿಶ್ವಿದ್ಯಾಲಯ ಮುಚ್ಚಿದಾಗ ಆಕೆಯ ಶಿಕ್ಷಣಕ್ಕೂ ತಡೆ. ಆಮೇಲೆ ಮತ್ತೆ ಆರಂಭವಾದ ಹೊತ್ತಿಗೆ ಆಂತರಿಕ ಕಲಹಕ್ಕೆ ತಂದೆ ಬಲಿ. ದೇಶ ಎಂಟು ಭಾಗಗಳಾಗಿ ಒಡೆದಿತ್ತು. ಕೊನೆಗೆ ಮೂಸೂ ಘಾನಾಕ್ಕೆ ವಲಸೆ ಹೋದಳು. ಅಲ್ಲಿಯೇ ಪತ್ರಿಕೋದ್ಯಮದ ಡಿಪ್ಲೋಮಾ ಪಡೆದಳು. ಅತ್ಯುತ್ತಮ ಛಾಯಾಗ್ರಾಹಕಿ-ಪತ್ರಕರ್ತೆ ಎಂಬ ಪ್ರಶಸ್ತಿಯನ್ನೂ ಆಕೆ ಗಳಿಸಿದ್ದಳು.
ಮತ್ತೆ ಲೈಬೀರಿಯಾಗೆ ಮರಳಿದಾಗ ಆಕೆ ಸೇರಿದ್ದು ನ್ಯೂಸ್ ಎಂಬ ಸ್ವತಂತ್ರ ಪತ್ರಿಕೆಗೆ. ಆಕೆಯ ಹರಿತ ಬರವಣಿಗೆಗೆ ಸರ್ಕಾರದ ಕಣ್ಣು ಕೆಂಪಾಯಿತು. ಮಾನವ ಹಕ್ಕುಗಳ ಬಗ್ಗೆ ಮೂಸೂ ಬರೆದದ್ದನ್ನೆಲ್ಲ ಅಂತಾರಾಷ್ಟ್ರೀಯ ಸಮುದಾಯ ಓದಿತು. ಕೊನೆಗೆ ಈ ಹಕ್ಕು ಉಲ್ಲಮಘನೆಯ ಪ್ರಕರಣಗಳು ಅಂತಾರಾಷ್ಟ್ರೀಯ ಮಾನವ ಹಕ್ಕು ಲೀಗ್‌ನ ಎದುರಿಗೂ ದಾಖಲಾದವು. ಆಮೇಲೆ ಮೂಸೂ ನ್&a
mp;#32
47;ೂಯಾರ್ಕಿನಲ್ಲಿ ಮಾನವ ಹಕ್ಕು ಪ್ರತಿಪಾದನಾ ತರಬೇತಿ ಪಡೆದು ವಾಪಸಾದಾಗ ನೋಡುತ್ತಾಳೆ: ಮತ್ತೆ ಮಾನವ ಹಕ್ಕುಗಳ ವರದಿಗೆ ತಡೆ ಉಂಟಾಗಿದೆ. ಮಾಹಿತಿ ಸಿಗುವುದೇ ಕಷ್ಟ ಎನ್ನುವ ಸ್ಥಿತಿ. ಸರಿ,ಮೂಸೂ ಹೋರಾಟಕ್ಕೆ ಮತ್ತೆ ಚಾಲನೆ. ಆಕೆ ಬರೆದದ್ದೆಲ್ಲ ವಿಶ್ವದ ಓದುಗರ ಗಮನ ಸೆಳೆಯಿತು. ಪತ್ರಕರ್ತ ರಕ್ಷಣಾ ಸಮಿತಿಯಂತೂ ಪತ್ರಿಕಾರಂಗದ ಹತ್ತು ಶತ್ರುಗಳಲ್ಲಿ ಲೈಬೀರಿಯಾದ ಅಧ್ಯಕ್ಷ ಚಾರ್ಲ್ಸ್ ಟೇಲರ್ ಒಬ್ಬ ಎಂದು ಘೋಷಿಸಿತು.
ಆದರೆ ಮೂಸೂಗೆ ತನ್ನದೇ ನೆಲದಲ್ಲಿ ಇರಲಾಗಲಿಲ್ಲ. ಅಮೆರಿಕಾದಲ್ಲಿ ಆಕೆ ನಿರಾಶ್ರಿತೆಯಾದಳು. ಈಗ ಆಕೆ ಆಲ್ ಆಫ್ರಿಕಾ ಗ್ಲೋಬಲ್ ಮೀಡಿಯಾದಲ್ಲಿ ತನ್ನ ಮತ್ತು ಇತರೆ ಆಫ್ರಿಕನ್ ದೇಶಗಳಲ್ಲಿನ ಮಾನವ ಹಕ್ಕುಗಳ ಬಗ್ಗೆ ಬರೆಯುತ್ತಿದ್ದಾಳೆ.ಆಕೆಯ ಪದಗಳಿಗೆ ಸರ್ವಮಾನ್ಯತೆ ಇದೆ.
ಇಷ್ಟಾಗಿಯೂ ಕಳೆದ ನವೆಂಬರಿನಲ್ಲಿ ಆಕೆಯ ತಾಯಿ ತೀರಿಕೊಂಡಾಗ ಆಕೆಗೆ ಅಲ್ಲಿಗೆ ಹೋಗಲಾಗಲಿಲ್ಲ. ತನ್ನ ಸೋದರಿಯ ಜೊತೆಗೆ ಇರುವ ಮೂರು ಮಕ್ಕಳನ್ನು ನೋಡಲೂ ಆಕೆಗೆ ಆಗುತ್ತಿಲ್ಲ. ಆಕೆಯ ಸೋದರ ಇನ್ನೂ ನಾಪತ್ತೆ. ಆತ ಗಿನೀ ನಿರಾಶ್ರಿತರ ಶಿಬಿರದಲ್ಲಿ ಇದ್ದಾನಾ? ಗೊತ್ತಿಲ್ಲ.
`ನಮಗೆ ಗಾಂಯ ಹಾಗೆ ಕರುಣೆ ಇರಬೇಕು. ಆದರೆ ವೃತ್ತಿಪರತೆಯ ಜೊತೆಗೆ ಈ ಕರುಣೆ ಮಿಶ್ರವಾಗದಂತೆ ಎಚ್ಚರ ವಹಿಸಬೇಕು ' ಎನ್ನುತ್ತಾಳೆ ಮೂಸೂ. ಕರುಣೆ ಇಲ್ಲದೆ ನಾವು ಇತರರನ್ನು ಅರಿಯುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾಳೆ ಕೂಡಾ. ನಿಜ ಅಲ್ಲವೆ?
ಥೇ ವಿ ಮಮ್
ಕಾಂಬೋಡಿಯಾ ಗೊತ್ತಲ್ಲ… ಆಂತರಿಕ ಕಲಹದಿಂದ ತತ್ತರಿಸಿದ ದೇಶ. ಖ್ಮೇರ್ ರೂ ಆಳ್ವಿಕೆಯಲ್ಲಿ ಸತ್ತವರೆಷ್ಟು ಎಂಬ ಲೆಕ್ಕವೇ ಸಿಗುತ್ತಿಲ್ಲ. ಅದಕ್ಕೆ ಬಲಿಯಾದ ಒಂದು ಕುಟುಂಬದಲ್ಲಿ ಉಳಿದ ಒಬ್ಬಳೇ ಹುಡುಗಿ ಥೇ ವಿ ಮಮ್. ನಾಲ್ಕರ ಹರೆಯಕ್ಕೆ ಬರುವ ಹೊತ್ತಿಗೆ ತಂದೆ, ನಾಲ್ವರು ಸೋದರರು….. ಯಾರೂ ಇಲ್ಲ. ತಾಯಿ ಒಬ್ಬಳೇ. ಮನೆಯಲ್ಲಿ ಮಾಡಿದ ತಿಂಡಿಯನ್ನು ಮಾರುಕಟ್ಟೆಯಲ್ಲಿ ಮಾರುವಾಕೆ. `ನೀನೂ ಅಪ್ಪನ ಥರ ಡಾಕ್ಟರಾಗಬೇಕು' ಎಂದು ಅಮ್ಮ ಹೇಳುತ್ತಿದ್ದಳಂತೆ. ಶಿಕ್ಷಣವಿಲ್ಲದೆ ನೀನು ಸ್ವತಂ&am
p;#3
236;್ರಳಾಗಿ ಇರೋದಕ್ಕೆ ಸಾಧ್ಯವಿಲ್ಲ ಮಗಳೇ ಎಂಬತಾಯಿಯ ಮಾತನ್ನು ಈಗಲೂ ಮಮ್ ನೆನಪಿಸಿಕೊಳ್ಳುತ್ತಾಳೆ.
ಆದರೆ ವೈದ್ಯಕೀಯ ಓದುವಷ್ಟು ದುಡ್ಡಾದರೂ ಎಲ್ಲಿಂದ ಬರೆಬೇಕು? ಫ್ನೋಮ್ ಫೆನ್ ರಾಯಲ್ ವಿಶ್ವವಿದ್ಯಾಲಯದಲ್ಲಿ ಪದವಿ ಸಿಕ್ಕಿದ ಮೇಲೆ ಅವಳಿಗೆ ದಕ್ಕಿದ್ದು ಶಿಕ್ಷಕಿಯ ಕೆಲಸ. ಆದರೆ ಸಂಬಳ ತೀರಾ ಕಡಿಮೆ. ಆಕೆ ಒಪ್ಪಲಿಲ್ಲ. ಕೊನೆಗೆ ಕಾಂಬೋಡಿಯಾದ ಮುಕ್ತ, ನ್ಯಾಯಯುತ ಚುನಾವಣಾ ಸಮಿತಿಯಲ್ಲಿ ದುಭಾಷಿಯಾಗಲು ಅರ್ಜಿ ಹಾಕಿದಳು. ಅಲ್ಲೇ ಶಿಕ್ಷಣ ತರಬೇತಿ ನೀಡುವವಳೂ ಆದಳು. ಪ್ರಜಾತಂತ್ರದ ಬಗ್ಗೆ, ಮುಕ್ತ ಚುನಾವಣೆಯ ಬಗ್ಗೆ ಆಕೆ ಸಂಘಟನೆಯ ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ ಪಾಠ ಹೇಳುವ ಇಷ್ಟದ ಕೆಲಸ ಮಾಡಿದಳು. ಕೊನೆಗೆ ಥೈಲ್ಯಾಂಡಿನಲ್ಲಿ ಮಾನವ ಹಕ್ಕುಗಳ ಬಗ್ಗೆ ಸ್ನಾತಕೋತ್ತರ ಪದವಿಯನ್ನೂ ಗಳಿಸಿದಳು.
ಕಳೆದ ಒಂದು ವರ್ಷದಿಂದ ಮಮ್ ಕಾಂಬೋಡಿಯಾದ ಮಕ್ಕಳ ಹಕ್ಕುಗಳ ರಕ್ಷಣಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾಳೆ. ಮಕ್ಕಳ ಶೋಷಣೆ, ಲೈಂಗಿಕ ಕೃತ್ಯಗಳಿಗೆ ಬಳಕೆ, ಬಾಲ ಕಾರ್ಮಿಕತೆ- ಇವೆಲ್ಲವನ್ನೂ ವಿರೋಸಿ ಕೆಲಸ. ಊರೂರು ತಿರುಗಿ ಮಕ್ಕಳಿಗೆ, ಅವರ ಪಾಲಕರಿಗೆ, ಸ್ಥಳೀಯರಿಗೆ ಈ ಬಗ್ಗೆ ತಿಳಿಹೇಳುವುದೇ ಮುಖ್ಯ ಕೆಲಸ. ಹಾಗೇ ಬಾಲಕಾರ್ಮಿಕರಾಗಿದ್ದ ಮಕ್ಕಳ ಬಿಡುಗಡೆಗೆ ಯತ್ನ. ಅವರನ್ನು ಮತ್ತೆ ಅವರ ಕುಟುಂಬಕ್ಕೆ ಸೇರಿಸುವ ಕಾಯಕ.
ಯಾಕೆಂದರೆ ಅಲ್ಲಿ ಮಕ್ಕಳನ್ನು ಶಾಲೆಯಲ್ಲಿಯೇ ಸಂರ್ಕಿಸುವ ದುಷ್ಟ ಕೂಟದ ಕಾರ್ಯಾಚರಣೆ ಇದೆ. ನೆರೆಮನೆಯಾತ, ಕುಟುಂಬದ ಗೆಳೆಯ, ಯಾರಾದರೂ ಈ ಕೂಟದ ಸದಸ್ಯ ಆಗಿರಬಹುದು. ಕುಟುಂಬಕ್ಕೆ ಹಣದ ನೆರವು ಒದಗಿಸುವ ನೆಪದಲ್ಲಿ ಈ ಸಂಚಿನ ಆರಂಭ. ಹಲವು ಸಲ ಪಾಲಕರಿಗೆ ತಮ್ಮ ಮಕ್ಕಳನ್ನು ಖರೀದಿಸುವವರು ಯಾವಕೆಲಸಕ್ಕೆ ಅವರನ್ನು ಬಳಸಿಕೊಳ್ಳುತ್ತಾರೆ ಎಂಬ ಅರಿವೇ ಇರುವುದಿಲ್ಲ. ಲೈಂಗಿಕ ಶೋಷಣೆಯ ತರುವಾಯ ಏಡ್ಸ್ ರೋಗವು ಸೋಂಕುವುದಂತೂ ಸಾಮಾನ್ಯ.
ಈಗ ಪರಿಸ್ಥಿತಿ ಸುಧಾರಿಸಿದೆ. ಮಮ್ ಗೆ ಕೆಲಸ ತುಂಬಾ ಹಿಡಿಸಿದೆ. ನೀವೂ ಈ ಕೆಲಸ ಮಾಡಬಹುದು ಎಂದು ಅವಳ ಸಂಘಟನೆ ಹೇಳುತ್ತದೆ.
ಒಕ್ಸಾನಾ ಡ್ರ&a
mp;#
3270;ಬೆಜೋವಾ
ರಶಿಯಾ ಒಡೆದ ಮೇಲೆ ಹುಟ್ಟಿದ ದೇಶ ಬೆಲಾರಸ್. ಮಿನ್ಸ್‌ಕ್ ಅದರ ರಾಜಧಾನಿ. ಅಲ್ಲಿ ನಡೆಯುವ ಮಾನವ ಹಕ್ಕುಗಳ ಬಗ್ಗೆ ನಿರಂತರವಾಗಿ ಜಾಗೃತಿ ಉಂಟು ಮಾಡ್ತಾ ಇರೋ ಮಹಿಳೆಯೇ ಒಕ್ಸಾನಾ ಡ್ರೆಬೆಜೋವಾ. ಬೆಲಾರಸ್‌ನ ವಿವಿಧ ಪ್ರಾಂತಗಳಿಂದ ಆಕೆಗೆ ಈ ಬಗ್ಗೆ ತರಬೇತಿ ನೀಡಲು ಕೋರಿಕೆ ಬರುತ್ತಿದೆ. ಅಲೆದಾಟವೇ ಅವಳ ಬದುಕು.
ಬೆಲಾರಸ್ ನ ಪ್ರಜೆಗಳಿಗೆ ಅವರ ಹಕ್ಕುಗಳ ಬಗ್ಗೆ ತಿಳಿಹೇಳುವುದೇ ಒಕ್ಸಾನಾಳ ಮುಖ್ಯ ಕೆಲಸ. ಈಗ ಆಕೆ ೧೩೦೦೦ ಜನರಿಗೆ ಈ ಬಗೆಯ ಶಿಕ್ಷಣ ನೀಡಿದ್ದಾಳೆ. ಯಾಕೆಂದರೆ ಈಗ ಅಲ್ಲಿ ಇರುವ ಸರ್ಕಾರವು ದರ್ಪದ ಆಡಳಿತ ನಡೆಸುತ್ತಿದೆ. ವಿರೋ ಪಕ್ಷಗಳು ಚಳವಳಿ ನಡೆಸಿದಾಗ ಯುವಕರು ಸಾಮಾನ್ಯವಾಗಿ ಭಾಗವಹಿಸುತ್ತಾರೆ. ಸೆರೆಮನೆಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಇರುವ ಹಕ್ಕುಗಳ ಬಗ್ಗೆ ತಿಳಿಹೇಳುವವರು ಯಾರು? ಅದಕ್ಕೇ ಡ್ರೆಬೆಜೋವಾ ಕೆಲಸ ಮಾಡುತ್ತಿದ್ದಾಳೆ. ಯುವಕರೇ ನಾಡಿನ ಆಸ್ತಿ, ಅದಕ್ಕೇ ನಾನು ಅವರಿಗೆ ಹೆಚ್ಚು ಪ್ರೀತಿಯಿಂದ ಕಲಿಸುತ್ತೇನೆ ಎನ್ನುತ್ತಾಳೆ ಆಕೆ. ಕೊನೆಗೆ ಅವರಿಗೇ ಈ ಜಗತ್ತನ್ನು ಬದಲಿಸೋ ಅಕ್ತಿ ಇರೋದು ಎನ್ನುವುದು ಅವರ ವಾದ.
ಶಾಜಿಯಾ ಮೆಹಮೂದ್
ಸಿವಿಲ್ ಸರ್ವಿಸ್ ಪರೀಕ್ಷೆ ತೆಗೆದುಕೊಂಡು ಪಾಕಿಸ್ತಾನಿ ಸರ್ಕಾರದಲ್ಲಿ ಕೆಲಸ ಮಾಡುವುದು ಶಾಜಿಯಾಳ ಮೊದಲ ಗುರಿಯಾಗಿತ್ತು. ಆದರೆ ಪೇಶಾವರದಲ್ಲಿ ಓದುತ್ತಿದ್ದಾಗ ಆಕೆಯ ನಿರ್ಧಾರ ಬದಲು.
ವಿದ್ಯಾರ್ಥಿನಿಯಾಗಿ ಆಕೆ ವಿದ್ಯಾರ್ಥಿಗಳು,ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳ ಜೊತೆ ಕೆಲಸ ಮಾಡದಳು. ದುರ್ಬಲ ವರ್ಗದವರು ಅನುಭವಿಸುತ್ತಿರುವ ಅದರಲ್ಲು ಮಹಿಳೆಯರು ಅನುಭವಿಸುತ್ತಿರುವ ದೌರ್ಜನ್ಯದ ಬಗ್ಗೆ ಅವಳಿಗೆ eನೋದಯವಾಗುತ್ತಾ ಹೋಯಿತು. ಸರ್ಕಾರಿ ಕೆಲಸ ಬೇಡ, ಮಾನವ ಹಕ್ಕುಗಳ ಕೆಲಸ ಮಾಡುವೆ ಎಂದು ಆಕೆ ನಿರ್ಧರಿಸಿದ್ದು ಹೀಗೆ.
ಮೊದಲು ಶಾಜಿಯಾ ಸೇರಿದ್ದು ಸುಂಗಿ ಎಂಬ ಸರ್ಕಾರೇತರ ಸಾಮಾಜಿಕ ಸಂಘಟನೆಗೆ. ಮೂಲತಃ ವಕಾಲತ್ತಿಗೇ ಈ ಸಂಘಟನೆ ಮೀಸಲಾಗಿತ್ತು. ಆಮೇಲೆ ಗ್ರಾಮೀಣ ಅಭಿವೃದ್ಧಿಯ ಕೆಲಸಗಳೂ ಸೇರಿಕೊಂಡವು. ನ
ಿಸರ್ಗದತ್ತ ಸಂಪನ್ಮೂಲ ರಕ್ಷಣೆ, ನಿರ್ವಹಣೆ, ಆರೋಗ್ಯ ಮತ್ತು ನೈರ್ಮಲ್ಯ, ಮೂಲ ಸಹಾಯ – ಇವು ಈ ಸಂಘಟನೆಯ ಮುಖ್ಯ ಕೆಲಸಗಳು. ವಿಶ್ವಸಂಸ್ಥೆಯೂ ಈ ಕೆಲಸವನ್ನು ಶ್ಲಾಘಿಸಿ ಪ್ರಶಸ್ತಿಯನ್ನೂ ನೀಡಿದೆ.
ಈಗ ಶಾಜಿಯಾ ಕೇವಲ ಸರ್ಕಾರೇತರ ಸಂಘಟನೆಗಳಿಗಷ್ಟೇ ಅಲ್ಲ, ಸರ್ಕಾರಿ ಅಕಾರಿಗಳಿಗೂ ಈ ಬಗ್ಗೆ ತರಬೇತಿ ನೀಡುತ್ತಾಳೆ. ಸ್ಥಳೀಯ ರಾಜಕಾರಣದಲ್ಲಿ ಮಹಿಳೆಗೆ ಅಂಥ ಗಮನಾರ್ಹ ಪಾತ್ರ ಇಲ್ಲ ಎಂಬುದು ಶಾಜಿಯಾಗೆ ಗೊತ್ತು. ಅದಕ್ಕೇ ಕಳೆದ ಒಂದೂವರೆ ವರ್ಷದಿಂದಶಾಜಿಯಾಳ ಸಂಘಟನೆ ಕೆಲಸ ಮಾಡಿತು. ಒರಿಣಾಮವಾಗಿ ಸ್ಥಳೀಯ ಆಡಳಿತದ ಚುನಾವಣೆಗಳಲ್ಲಿ ಆಯ್ಕೆಯಾದವರಲ್ಲಿ ಶೇ. ೪೦ ರಷ್ಟು ಮಹಿಳೆಯರೇ ಆಗಿದ್ದರು. ಮುಖ್ಯವಾಹಿನಿ ರಾಜಕಾರಣದಲ್ಲಿ ಮಹಿಳೆಯರು ಬರುವುದಕ್ಕೆ ಇತರರು ಇಷ್ಟಪಡುವುದಿಲ್ಲ ಎಂಬುದೂ ಶಾಜಿಯಾಗೆ ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಹಿಡಿದ ಕೆಲಸ ಬಿಡಲು ಆಕೆ ಸಿದ್ಧಳಿಲ್ಲ.
ಡಿಗ್ನಾ ಒಕೋವಾ
ಲೆಕ್ಕವಿಲ್ಲದಷ್ಟು ಸಲ ಪ್ರಾಣಹರಣದ ಬೆದರಿಕೆ. ನಡೆದ ಹಾದಿಯಲ್ಲೇ ಸಾಗಿದರೆ ಸಾವು ಖಚಿತ ಎಂಬುದು ಆಕೆಗೆ ಗೊತ್ತಿತ್ತು. ಹಾಗೇ ಆಯಿತು ಕೂಡಾ. ೨೦೦೧ರ ಅಕ್ಟೋಬರ್ ೧೯ ರಂದು ಒಕೋವಾ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದಳು. ಆಗ ಆಕೆಗೆ ೩೭ ವರ್ಷ. ಮೆಕ್ಸಿಕೋದಲ್ಲಿ ಆಕೆ ಈಗ ಒಂದು ನೆನಪು.
ತಂದೆ ಒಬ್ಬ ಕಾರ್ಮಿಕ ಹೋರಾಟಗಾರ. ಆತ ತನ್ನ ಕಾಮ್ರೇಡ್‌ಗಳೊಂದಿಗೆ ಚರ್ಚೆ ನಡೆಸುತ್ತಿದ್ದಾಗ ವಕೀಲರ ಅಗತ್ಯ ಇದೆ ಎಂಬುದನ್ನು ಕಂಡುಕೊಂಡಳು. ಕೊನೆಗೆ ತಂದೆಯೇ ಕಾರಣವಿಲ್ಲದೆ ಸೆರೆಮನೆಗೆ ಹೋಗಬೇಕಾಯಿತು. ಆಮೇಲೆ ಆತ ನಿಗೂಢವಾಗಿ ಕಣ್ಮರೆಯಾದ.
ಕಾನೂನು ಪದವಿ ಗಳಿಸಿದ ಕೂಡಲೇ ಒಕೋವಾ ಅಮಾಯಕರ ಪರವಾಗಿ ವಾದ ನಡೆಸುವ ವಕೀಲರನ್ನು ಸಂಘಟಿಸಿದಳು. ಮೊದಲ ಪ್ರಕರಣದಲ್ಲೇ ಅವಳಿಗೆ ಪ್ರಾಣಬೆದರಿಕೆ. ಕೊನೆಗೆ ಆಕೆಯ ಅಪಹರಣ. ಪೊಲೀಸರಿಂದಲೇ! ಒಂದು ತಿಂಗಳ ಕಾಲದ ಮಾನಸಿಕ, ದೈಹಿಕ ಹಿಂಸೆ. ಕೊನೆಗೂ ಆಕೆ ಅಲ್ಲಿಂದ ತಪ್ಪಿಸಿಕೊಂಡಳು. ಅಲ್ಲಿಂದ ಮೆಕ್ಸಿಕೋಗೆ. ಮಾನವ ಹಕ್ಕುಗಳ ಅಧ್ಯಯನ. ಮಿಲಿಟರಿ ಹಿಂಸೆಗೆ ಗುರಿಯಾಗಿದ್ದ ಝಪಾಟಿಸ್ಟಾ &
;#32
23;ೆರಿಲ್ಲಾಗಳ ಪರವಾಗಿ ವಕಾಲತ್ತು. ವಿಚಾರಣೆ ಶುರುವಾಗುತ್ತಲೇ ಪ್ರಾಣ ಬೆದರಿಕೆ. ಸ್ಥಳೀಯ ಧಾರ್ಮಿಕ ಗುಂಪಿನ ನೆರವಿನಿಂದರಕ್ಷಣೆ ದೊರಕಿತು.
ಆದರೆ ಒಮ್ಮೆ ದುಷ್ಕರ್ಮಿಗಳಿಗೆ ಸಿಕ್ಕಿದ ಅವಳನ್ನು ಕಣ್ಣುಕಟ್ಟಿ ಹಗ್ಗ ಕಟ್ಟಿ ಇಡಲಾಯಿತು. ಒಂಬತ್ತು ಗಂಟೆಗಳ ಕಾಲ ಹಿಂಸಾತ್ಮಕ ವಿಚಾರಣೆ. ಆಮೇಲೆ ಅಪಹರಣಕಾರರು ಅವಳ ಮನೆಯ ಅಡುಗೆ ಅನಿಲದ ಕೊಳವೆಯನ್ನು ಒಡೆದು ಪರಾರಿಯಾದರು. ಆದರೆ ಒಕೋವಾ ಬಚಾವಾದಳು.
ಇಬ್ಬರು ರೈತರನ್ನು ಕಾನೂನುಬಾಹಿರವಾಗಿ ಬಂಧನದಲ್ಲಿ ಇಟ್ಟ ಬಗ್ಗೆ ಒಕೋವಾ ಹೂಡಿದ ಹೋರಾಟ ತುಂಬಾ ಪ್ರಸಿದ್ಧ. ಅವರಿಬ್ಬರಿಗೂ ಅಸಾಧ್ಯ ಹಿಂಸೆ ನೀಡಿದ್ದನ್ನು ಅಕೃತ ತನಿಖೆಯೇ ಬಹಿರಂಗಪಡಿಸಿತು. ಆದರೆ ಬಿಡುಗಡೆ ಮಾತ್ರ ಆಗಲಿಲ್ಲ. ಒಕೋವಾ ಹೋರಾಟದ ಫಲವಾಗಿ ಮೆಕ್ಸಿಕೋ ಅಧ್ಯಕ್ಷ ವಿನ್ಸೆಂಟ್ ಫಾಕ್ಸ್ ಸ್ವತಃ ಅವರ ಬಿಡುಗಡೆಗೆ ಆದೇಶ ನೀಡಿದ. ಹಿಂಸೆ ನೀಡಿದವರ ಪತ್ತೆ ಆಗಿಲ್ಲ.
ಆದರೆ ಈಗ ಒಕೋವಾ ಇಲ್ಲ. ಬಹುಶಃ ಆಕೆ ಮಿಲಿಟರಿಗೇ ಬಲಿಯಾಗಿದ್ದಾಳೆ ಎನ್ನುತ್ತಾರೆ. ಹಿಂದಿನ ಅಪಹರಣದ ಬಗ್ಗೆ ಸೂಕ್ತ ತನಿಖೆ ನಡೆದಿದ್ದರೆ ಆಕೆ ಸಾಯುತ್ತಿರಲಿಲ್ಲ ಎನ್ನುವವರಿದ್ದಾರೆ.
ಆನಾ ಪೊಲಿಟೋವ್‌ಸ್ಕಾಯಾ
`ಜೀವಂತ ನರಕ'. ಚೆಚೆನ್ಯಾವನ್ನು ಆನಾ ಬಣ್ಣಿಸುವುದು ಹೀಗೆ. ಆಕೆ ತನಿಖಾ ಪತ್ರಕರ್ತೆ. ಇಲ್ಲಿ ಮಾನವ ಹಕ್ಕುಗಳೇ ಇಲ್ಲ. ಸಾವಿರಾರು ಜನರಹತ್ಯೆ ಸಾಗಿದೆ. ಸಮೂಹಸಮಾಗಳ ರಾಶಿಯೇ ಕಂಡು ಬರುತ್ತಿದೆ. ಆದರೆ ಆನಾ ಮಾತ್ರ ಈ ವರದಿಗಳನ್ನು ಬಹಿರಂಗ ಮಾಡಲು ಅವಿರತವಾಗಿ ಶ್ರಮಿಸಿದಳು.
೨೦೦೧ ರ ಫೆಬ್ರವರಿಯಲ್ಲಿ ಚೆಚೆನ್ಯಾ ಖೈದಿಗಳನ್ನು ನಡೆಸಿಕೊಂಡ ರೀತಿಯನ್ನು ವರದಿ ಮಾಡಿದ್ದಕ್ಕೆ ರಶಿಯಾದ ಸೈನಿಕರು ಆನಾಳನ್ನು ಬಂಸಿದರು. ` ನಿನ್ನ ಮಾನಭಂಗ ಮಾಡುತ್ತೇವೆ' ಎಂದು ಬೆದರಿಸಿದರು. ಚೆಚೆನ್ಯಾದಿಂದ ಹೊರಹೋಗುವಂತೆ ಸೂಚಿಸಿದರು. ಚೆಚೆನ್ಯಾಗೆ ಮತ್ತೆ ಮರಳಿದರೆ ಆಕೆ ಜೀವಂತ ಉಳಿಯುವುದಿಲ್ಲ ಎಂಬ ವಾರ್ತೆ ಮಾಸ್ಕೋದಲ್ಲಿ ಸಿಕ್ಕಿತು. ಆದರೆ ಆನಾ ಸುಮ್ಮನಿರಲಿಲ್ಲ. ಗಾಯಗೊಂಡ ಬಾಲಕನಿಗೆ ಹಣ ತಂದು ಕೊಡುವೆ ಎಂದು ಕೊಟ್ಟಿದ್ದ ಮ&a
mp;#
3262;ತನ್ನು ಉಳಿಸಿಕೊಳ್ಳಲು ಮತ್ತೆ ಚೆಚೆನ್ಯಾಗೆ ಬಂದಳು. ಅಲ್ಲಿದ್ದ ಒಬ್ಬ ಅಕಾರಿ ಸೇನೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಸಮಸ್ಯೆ ಇದೆ ಎಂದು ಮಾತಾಡಿದ. ಆದರೆ ಕೆಲ ಕ್ಷಣಗಳಲ್ಲೇ ಆತ ಇದ್ದ ಹೆಲಿಕಾಪ್ಟರ್ ಸೋಟಿಸಿ ಆತ ಸತ್ತ. ಚೆಚೆನ್ಯಾ ಬಂಡುಕೋರರ ದಾಳಿಗೆ ಹೆಲಿಕಾಪ್ಟರ್ ಬಲಿಯಾಯಿತು ಎಂಬ ವಿವರಣೆಯನ್ನು ಆಕೆ ಪ್ರಶ್ನಿಸಿದಳು. ಆಕೆಯ ವರದಿಯನ್ನು ಪ್ರಕಟಿಸುವ ಹಾಗಿಲ್ಲ ಎಂದು ಸಂಪಾದಕ ತಿಳಿಸಿದ. ಜೊತೆಜೊತೆಗೇ ಆಕೆಗೆ ಪ್ರಾಣ ಬೆದರಿಕೆಗಳೂ ಬರಲಾರಂಭಿಸಿದವು. ಮಾಸ್ಕೋದಲ್ಲಿ ಇರುವುದಕ್ಕೆ ಆಗುತ್ತಲೇ ಇರಲಿಲ್ಲ. ಇಬ್ಬರು ಮಕ್ಕಳನ್ನು ಮಾಸ್ಕೋದಲ್ಲೇ ಬಿಟ್ಟು ಆಕೆ ವಿಯೆನ್ನಾಗೆ ಹೋಗಬೆಕಾಯಿತು. ಈ ವರ್ಷದ ಆರಂಭದಲ್ಲಿ ಆಕೆ ರಶಿಯಾಗೆ ಮರಳಿದಳು. ಚೆಚೆನ್ಯಾಗೂ ಭೇಟಿ ನೀಡಿದಳು.
ಈಗಲೂ ಆನಾ ಛಲಗಾತಿ. ಇದ್ದದ್ದನ್ನು ಇದ್ದ ಹಾಗೆ ವರದಿ ಮಾಡಲು ಎಂದೂ ಆಕೆ ಹಿಂಜರಿಯುವುದಿಲ್ಲ.
ಸಿಹೆಮ್ ಬೆನ್ ಸೆಡ್ರಿನ್
ಟುನೀಸಿಯಾದ ಈ ಮಹಿಳೆ ಈಗ ವಿಚಾರಣೆಯನ್ನು ಎದುರಿಸುತ್ತಿದ್ದಾಳೆ. ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಕ್ಕೆ ಅವಳಿಗೆ ಮೂರು ವರ್ಷಗಳ ಕಾಲ ಶಿಕ್ಷೆ ಆಗಬೇಕು ಎನ್ನುವುದು ಸರ್ಕಾರದ ವಾದ.
ಆದರೆ ಕಳೆದ ಎರಡು ದಶಕಗಳಿಂದಲೂ ಸೆಡ್ರಿನ್ ಪ್ರಸಿದ್ಧೆ. ಪತ್ರಿಕಾ ಸ್ವಾತಂತ್ರದ ರಕ್ಷಣೆ ಕುರಿತಾದ ನಿಗಾ ಸಂಘಟನೆಗೆ ಆಕೆಯೇ ಪ್ರಧಾನ ಕಾರ್ಯದರ್ಶಿ. ಸರ್ಕಾರವು ಅನುಮತಿ ನೀಡದ ಪತ್ರಿಕೆಗಳಲ್ಲಿನ ಸುದ್ದಿಗಳನ್ನು ಪ್ರಕಟಿಸಲಿಕ್ಕೆಂದೇ ಆಕೆ ಆರಂಭಿಸಿದ್ದು ಕಲೀಮಾ ಎಂಬ ವೆಬ್ ಸೈಟನ್ನು. ಸರ್ಕಾರ ಹೇಳುವುದಕ್ಕೂ ಈ ಪತ್ರಿಕೆಗಳು ಬರೆಯುವುದಕ್ಕೂ ಅಜಗಜಾಂತರ ವ್ಯತ್ಯಾಸ.
ಒಮ್ಮೆ ಸೆರೆಮನೆಯಲ್ಲಿದ್ದ ಸಹ ಪತ್ರಕರ್ತ ಬೆನ್ ಬ್ರಿಕ್‌ನನ್ನು ಭೇಟಿ ಮಾಡಲು ಹೋದ ಸೆಡ್ರಿನ್‌ಳಿಗೆ ಸಿಕ್ಕಿದ್ದು ಥಳಿತ. ಸದಾ ಪೊಲೀಸರ ಕಣ್ಗಾವಲು. ಪೊಲೀಸರಿದ್ದಾಗಲೇ ಅವಳ ಕಾರನ್ನು ಯಾರೋ ಒಡೆದಿದ್ದರು. ಒಂದು ಚಾಕುವಿನ ಜೊತೆಗೆ ಬೆದರಿಕೆ ಪತ್ರ ಇಟ್ಟುಹೋಗಿದ್ದರು. ೨೦೦೧ ರ ಜೂನ್ ತಿಂಗಳಿನಲ್ಲಿ ಆಕೆಯನ್ನು ಸರ್ಕಾರ ಬಂಸಿತು. ಕ್ರ&
#326
4;ಡಾಮನೋಭಾವದಿಂದಲೇ ಅದನ್ನು ಸ್ವೀಕರಿಸಿದ ಸೆಡ್ರಿನ್ ಆಪ್ತರಿಗೆ ಪತ್ರ ಬರೆಯುತ್ತ ಕಾಲ ಕಳೆದಳು.
ಈಗ ಆಕೆ ಒಂದು ರೀತಿಯಲ್ಲಿ ಸ್ವತಂತ್ರಳು. ಆದರೆ ಹೊರಗಡೆ ಪ್ರವಾಸ ಮಾಡುವಂತಿಲ್ಲ. ಆದರೆ ಅವಳ ಹೋರಾಟ ಮಾತ್ರ ನಿಂತಿಲ್ಲ.
ಮಾಟಿಲ್ಡ್ ಲಿಯೋನಾರ್ ಗೊನ್‌ಸಾಲೆಜ್ ಇಜಾಜ್
ಇಜಾಜ್‌ಳ ಕಥೆಯೂ ಭಿನ್ನವಲ್ಲ. ಗ್ವಾಟೆಮಾಲಾದಮಿಲಿಟರಿ ಆಡಳಿತವು ಗ್ರಾಮಗಳಲ್ಲಿ ನಡೆಸಿದ ಅತ್ಯಾಚಾರದ ವರದಿಗಳನ್ನು ಬರೆದದ್ದಕ್ಕೆ ಆಕೆ ಈಗ ಅಪರಾಧಿ. ಆದರೆ ಸಿಕ್ಕಿಲ್ಲ. ರಹಸ್ಯತಾಣದಲ್ಲಿ ಇದ್ದಾಳೆ. ಆ ದೇಶದ ೪೦ ವರ್ಷಗಳ ಅಂತಃಕಲಹ ೧೯೯೬ರಲ್ಲಿ ಒಂದು ಹಂತಕ್ಕೆ ಬಂದಿದ್ದೇನೋ ಹೌದು. ಆದರೆ ಅಲ್ಲಲ್ಲಿ ಕೆಲವು ಗುಂಪುಗಳು ಈಗಲೂ ತಮ್ಮಲ್ಲೇ ಅಕಾರ ಇಟ್ಟುಕೊಂಡಿವೆ.
ಕಳೆದ ವರ್ಷ ಇಜಾಜ್‌ಳ ಮನೆಯ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಅವಳ ಕಂಪ್ಯೂಟರಿನಲ್ಲಿದ್ದ ದಾಖಲೆಗಳನ್ನು ನಾಶ ಮಾಡಿದರು. ಒಮ್ಮೆಯಂತೂ ಅವಳನ್ನು ಏಳು ಕಾರುಗಳು ಸುತ್ತುಗಟ್ಟಿದ್ದವು. ಆಮೇಲೆ ಅವಳು ಭೂಗತವಾಗದೆ ವಿ ಇರಲಿಲ್ಲ. ಈಗಲೂ ಅವಳ ಪ್ರಾಣಹರಣದ ಬೆದರಿಕೆಗಳು ಕೇಳಿಬರುತ್ತಿವೆ.
ಇವು ಇಂಥ ನೂರಾರು ಮಹಿಳೆಯರ ಕೆಲವು ಕಥೆಗಳು ಮಾತ್ರ. ಸಮಾಜದಲ್ಲಿ ಹಕ್ಕಿಗಾಗಿ, ಎಲ್ಲರೂ ಸರಿಸಮಾನವಾಗಿ ಬದುಕಬೇಕೆಂದು ಸಾರುವುದಕ್ಕಾಗಿ ಹೋರಾಡುತ್ತಿರುವ ಮಹಿಳೆಯರ ಈ ಗಾಥೆಗಳು ನಮ್ಮ ಮುಂದಿರುವ ಹಣತೆಗಳು. ತಾಮಸ ಶಕ್ತಿಗಳು ಸುತ್ತುವರೆದಾಗ ಮುತ್ತುವ ಗಾಢಾಂಧಕಾರದಲ್ಲಿ ಇವೇ ನಮ್ಮ ಬೆಳಕಿನ ಕುಡಿಗಳು.
ಮಾಹಿತಿ ಮೂಲ: ಡಿಜಿಟಲ್ ಫ್ರೀಡಮ್ ನೆಟ್‌ವರ್ಕ್