ಕ್ಯಾಂಬೇ ಕೊಲ್ಲಿಯ ಅವಳಿ ನಗರ
ನಾಗರಿಕತೆಯ ಮೊದಲ ತೊಟ್ಟಿಲು
ಗುಜರಾತಿನ ಬಳಿ ಸಮುದ್ರದಡಿ ಮುಳುಗಿದ ವಿಶ್ವದ ಅತಿ ಪ್ರಾಚೀನ ನಗರಗಳು ಈಗ ಚಾಲ್ತಿಯಲ್ಲಿರುವ ಇತಿಹಾಸವನ್ನೇ ಮುಳುಗಿಸಲು ಹೊರಟಿವೆ!
ಎರಡು ವರ್ಷಗಳ ಹಿಂದಿನ ಮಾತು. ಸೂರತ್‌ನಿಂದ ಕೆಲವು ಕಿಲೋಮೀಟರುಗಳಾಚೆ ಕ್ಯಾಂಬೇ ಕೊಲ್ಲಿಯಲ್ಲಿ ಸಾಗರ್ ಪಶ್ಚಿಮೀ ನೌಕೆ ಲಂಗರು ಹಾಕಿದೆ. ಅದರಲ್ಲಿದ್ದ ರಾಷ್ಟ್ರೀಯ ಸಾಗರ ತಂತ್ರeನ ಸಂಸ್ಥೆಯ ವಿeನಿಗಳಿಗೆ ಹವಾಮಾನ ವೈಪರೀತ್ಯದ ತೊಡಕು. ಅವರು ಇನ್ನೇನು ಚೆನ್ನೈನ ತಮ್ಮ ಮುಖ್ಯ ಕಚೇರಿಗೆ ವಾಪಸಾಗುವ ದಿನಗಳು ಹತ್ತಿರ ಬಂದಿದ್ದವು. ಸರಿ, ಅಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಣೆ ಮಾಡುತ್ತ ಕೂತರು. ಹಾಗೆ ನೋಡುತ್ತ ಹೋದಾಗ ತಾವು ಸೋಸಿದ ಸಮುದ್ರದ ತಳದಲ್ಲಿ ವಿಚಿತ್ರ ಕಲ್ಲುಗಳು ಇದ್ದದ್ದು ಪತ್ತೆಯಾಯಿತು. ಸಂಸ್ಥೆಯ ಹಿರಿಯರಿಗೆ ತುರ್ತು ಕರೆ ಹೋಯಿತು. ಸಮುದ್ರದ ಒಳಗೆ ನದಿ ಹರಿದಿದೆಯೆ? ಏನೋ ವಿಚಿತ್ರವಾಗಿದೆಯಲ್ಲ ಎಂಬ ಭಾವ ಎಲ್ಲರನ್ನೂ ಆವರಿಸಿತು.ಸಂಸ್ಥೆಯ ನಿರ್ದೇಶಕ ಪೊ ರವೀಂದ್ರನ್ ಮತ್ತು ಸಲಹೆಗಾರ ಎಸ್. ಬದರಿನಾರಾಯಣ್ ಮತ್ತೆ ಎಲ್ಲಾ ದಾಖಲೆಗಳನ್ನೂ ಪರೀಕ್ಷಿಸಿದರು. ಬೆಟ್ಟದಷ್ಟಿದ್ದ ದತ್ತಾಂಶಗಳನ್ನು ಮತ್ತೆ ಮತ್ತೆ ವಿಶ್ಲೇಷಣೆಗೆ ಒಡ್ಡಿದರು. ಶಬ್ದತರಂಗಗಳಿಂದ ಸಂಗ್ರಹಿಸಿದ ದೃಶ್ಯಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ಅಂತಿಮ ಉತ್ತರ ಗೊತ್ತಾದಾಗ ಮಾತುಗಳೇ ಹೊರಡಲಿಲ್ಲ.
ಅವರ ನೌಕೆ ಎರಡು ಪ್ರಾಚೀನ ನಗರಗಳ ಮೇಲೆಯೇ ತೇಲುತ್ತಿದೆ! ಹರಪ್ಪಾ ಕಾಲದ ನಗರ ಎಂಬ ಹೊಳಹು ಮೊದಲು ಮೂಡಿದ್ದೇನೋ ಹೌದು.
ಸರಿ, ಅಲ್ಲಿಂದ ಆರಂಭವಾದ ಸಾಗರತಳದ ಸಂಶೋಧನೆಯಲ್ಲಿ ದೊರಕಿದ ಮರದ ತುಂಡೊಂದನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಗೊತ್ತಾಗಿದ್ದು ಇಷ್ಟೆ: ಈ ನಗರ ಕನಿಷ್ಠ ೯೫೦೦ ವರ್ಷಗಳಷ್ಟು ಹಳೆಯದು! ಈಜಿಪ್ಟಿನ ಪಿರಮಿಡ್ಡುಗಳಿಗಿಂತ,ಮೆಸಪೊಟೇಮಿಯಾಗಿಂತ ನಾಲ್ಕೂವರೆ ಸಾವಿರ ವರ್ಷಗಳಷ್ಟು ಹಳೆಯದು. ಸದ್ಯಕ್ಕಂತೂ ವಿಶ್ವದ ಅತಿ ಪ್ರಾಚೀನ ನಗರಗಳು.
ಅಂದರೆ
;?
ಹರಪ್ಪಾ, ಮೊಹೆಂಜೊದಾರೋ ನಾಗರಿಕತೆಯು ಸರಸ್ವತೀ ನದಿಯು ಕ್ರಿಸ್ತಪೂರ್ವ ೧೯೦೦ ರ ಸುಮಾರಿಗೆ ಪೂರ್ತಿಯಾಗಿ ಒಣಗುವುದರೊಂದಿಗೆ ಅವನತಿ ಕಂಡವು ಎಂಬುದು ಸಾಮಾನ್ಯವಾಗಿ ಒಪ್ಪಿಕೊಂಡ ಮಾತು. ಹಾಗಾದರೆ ಈ ನಗರ ಯಾವುದು? ಇದು ಹರಪ್ಪಾ ನಾಗರಿಕತೆಯ ಪೂರ್ವದ್ದೇ ಇರಬೇಕು ತಾನೆ? ಸಿಂಧೂ ಕಣಿವೆಯ ನಾಗರಿಕತೆಯನ್ನೇ ನೂರಕ್ಕೆ ನೂರು ಪಾಲು ಹೋಲುವ ಈ ನಗರ ಮುಳುಗಿ ಹೋಗಿದ್ದಾದರೂ ಹೇಗೆ? ಬಹುಶಃ ಭೂಕಂಪವಾಗಿ, ನೆಲವೇ ಕುಸಿದಿರಬೇಕು ಎಂದು ಪುರಾತತ್ತ್ವಶಾಸ್ತ್ರಜ್ಞರು ಹೇಳುತ್ತಾರೆ.
ಈಗ ಈ ನಗರಗಳನ್ನು ಒಟ್ಟಾಗಿ ಕ್ಯಾಂಬಿಯನ್ ನಗರ ಎಂದೇ ಕರೆಯೋಣ. ಬನ್ನಿ ಇಲ್ಲಿ ಕಾಣುವ ಹತ್ತಾರು ಬಗೆಯ ರಚನೆಗಳನ್ನು ನೋಡಿ. ಈ ಶ್ರಾವ್ಯಾಧಾರಿತ ಚಿತ್ರಗಳನ್ನು ರೂಪಿಸಲು ಸೈಡ್ ಸ್ಕ್ಯಾನ್ ಸೋನಾರ್, ಸಬ್ ಬಾಟಮ್ ಪೊಫೈಲರ್ ಮತ್ತು ಬಹುಕಿರಣಗಳ ಎಕೋ ಸೌಂಡರ್‌ಗಳನ್ನು ಬಳಸಲಾಗಿದೆ ಎಂಬುದನ್ನು ಗಮನದಲ್ಲಿಡಿ. ಇವೆಲ್ಲವೂ ಮಾನವ ನಿರ್ಮಿತ ಜ್ಯಾಮಿತಿ ಆಧಾರಿತ ಕರಾರುವಾಕ್ಕಾದ ರಚನೆಗಳು ಎಂಬ ಬಗ್ಗೆ ವಿeನಿಗಳಿಗೆ ಯಾವುದೇ ಸಂಶಯವೂ ಇಲ್ಲ.
ಇಲ್ಲಿ ನೋಡಿ, ಮೊಹೆಂಜೊದಾರೋದ ಈಜುಕೊಳ ನೆನಪಿದೆ ತಾನೆ? ಅದನ್ನೇ ಹೋಲುವ ಅದೇ ಅಚ್ಚುಕಟ್ಟುತನದ ಕೊಳ ಇಲ್ಲಿದೆ. ಇನ್ನೊಂದು ಚಿತ್ರ ನೋಡಿ. ರುದ್ರಭೂಮಿ ಮೂಡಿಸಿದ ವಿನ್ಯಾಸ ಇದು. ಇನ್ನೊಂದು ಚಿತ್ರದಲ್ಲಿ ಇಡೀ ನಗರದ ಪಕ್ಷಿನೋಟವನ್ನು ಕಾಣಬಹುದು. ಈ ನಗರದ ಹಲವು ಕಡೆ ಮೆಟ್ಟಿಲುಗಳನ್ನು ನೋಡಬಹುದು. ಹಾಗೆಯೇ ಒಂದು ದೊಡ್ಡ ಕಟ್ಟಡ, ಅದರ ಸುತ್ತಮುತ್ತ ವಸತಿ ಪ್ರದೇಶಗಳನ್ನು ಕಾಣಬಹುದು. ಇದೇ ನಗರದಲ್ಲಿ ೪೪ ಮೀಟರುಳ ಉದ್ದದ ಒಂದು ರಚನೆ ಇದೆಯಂತೆ. ಅದು ದೇಗುಲ ಇರಬಹುದು ಎಂಬ ಮಾತಿದೆ. ಒಂದು ನಗರ ೮ ಕಿಲೋಮೀಟರ್ ಉದ್ದ ಇದ್ದರೆ ಇನ್ನೊಂದು ೯ ಕಿಲೋಮೀಟರ್ ಉದ್ದಕ್ಕೆ ಚಾಚಿಕೊಂಡಿದೆ. ನ್ಯೂಯಾರ್ಕಿನ ಮ್ಯಾನ್‌ಹಟನ್ ನಗರದಷ್ಟು!
ಈ ಎಲ್ಲ ಕಟ್ಟಡಗಳ ನಿರ್ಮಾಣ ಈಗಿನ ವಾಸ್ತುಶಿಲ್ಪಿಗಳೂ ಬೆರಗಾಗುವಂತಿದೆ. ಕಟ್ಟಡ ಉದ್ದವಿದ್ದಷ್ಟೂ ಅವುಗಳ ಅಡಿಪಾಯವೂ ಆಳವಾಗಿಯೇ ಇರುವುದು ಕಂಡುಬಂದಿದೆ. ಈ ನಗರದ ಪಕ್ಕದಲ್ಲ
ೇ ನದಿ ಹರಿಯುತ್ತಿತ್ತೆಂದು ಕಲಾವಿದನೊಬ್ಬ ವಿeನಿಗಳ ಪ್ರತಿಪಾದನೆಯ ಆಧಾರದಲ್ಲಿ ಚಿತ್ರಿಸಿದ್ದಾನೆ. ಈ ಕೊಲ್ಲಿಯ ಬಳಿಯೇ ಸರಸ್ವತೀ ನದಿಯು ಸಮುದ್ರ ಸೇರಿತು ಎಂದು ಈಗ ಶ್ರುತಪಟ್ಟಿದೆ. ಕನಿಷ್ಠ ಹತ್ತು ಸಾವಿರ ವರ್ಷಗಳ ಹಿಂದೆ ಭಾರತದ ಮುಖ್ಯ ನದಿಯಾಗಿದ್ದ ಸರಸ್ವತೀ ನದಿಯ ಪಾತ್ರವೇ ೨೨ ಕಿಲೋಮೀಟರುಗಳಷ್ಟಿತ್ತು ಎಂದು ಜೋಧಪುರದ ದೂರಸಂವೇದಿ ಕೇಂದ್ರದ ಡಾ ಎ.ಕೆ.ಗುಪ್ತಾ ಹೇಳುತ್ತಾರೆ.
`ಇದೆಲ್ಲ ಸಂಶೋಧನೆಗಳು ಲೋಥಲ್ ಮತ್ತು ಧೋಲಾವಿರಾದ ಉತ್ಖನನದ ಹಾದಿಯಲ್ಲೇ ಸಾಗಿದ ಇತಿಹಾಸ' ಎನ್ನುತ್ತಾರೆ, ಅಮೆರಿಕಾದಲ್ಲಿ ತನ್ನದೇ ಆದ ವೇದಾಧ್ಯಯನ ಸಂಸ್ಥೆಯನ್ನು ನಡೆಸುತ್ತಿರುವ ಡಾಡೇವಿಡ್ ಫ್ರಾಲೇ. ಈ ಸಂಶೋಧನೆಗಳಿಗಿಂತ ಮೊದಲೇ ಅವರು ಬರೆದ `ದಿ ಋಗ್ವೇದ ಎಂಡ್ ದಿ ಹಿಸ್ಟರಿ ಆಫ್ ಇಂಡಿಯಾ' ಪುಸ್ತಕದಲ್ಲಿ ವೇದ ಸಂಸ್ಕೃತಿಯು ಭಾರತದಾದ್ಯಂತ ಹರಡಿತ್ತು ಎಂಬುದನ್ನು ಪ್ರತಿಪಾದಿಸಿದ್ದರು. ಋಗ್ವೇದದಲ್ಲಿ ಹಿಮಯುಗದ ವರ್ಣನೆಯಿದೆ ಎಂದು ಉಲ್ಲೇಖಿಸುವ ಫ್ರಾಲೆಯವರೇ ಈಗ ಇತಿಹಾಸಜ್ಞರ ಸಹಮತ ಪಡೆಯುತ್ತಿರುವ ಸಿಂಧೂ ನಾಗರಿಕತೆಯ ಸಂಸ್ಕೃತಿ- ನಾಗರಿಕತೆ ವಿಪರ್ಯಾಸವನ್ನು ಮೊದಲು ಎತ್ತಿ ತೋರಿಸಿದ್ದು. ನಾಗರಿಕತೆ ಇದ್ದ ದ್ರಾವಿಡರಿಗೆ ಸಂಸ್ಕೃತಿಯೇ ಇಲ್ಲ, ಸಂಸ್ಕೃತಿಯಿದ್ದ ಆರ್ಯರಿಗೆ ನಾಗರಿಕತೆಯೇ ಇಲ್ಲ ! ಈ ಬಗೆಯ ಎರಡು ಗುಂಪುಗಳೇ ಇರಲಿಲ್ಲ ಎಂಬುದನ್ನು ಒಪ್ಪಿಕೊಂಡರೆ ಮಾತ್ರ ಈ ನಾಗರಿಕತೆ-ಸಂಸ್ಕೃತಿಯನ್ನು ಸರಿಯಾಗಿ ವಿವರಿಸಬಹುದು ಎಂಬುದು ಫ್ರಾಲೆ ಅಭಿಮತ.
ಕಡಲಾಳದ ಲಾಳಗಳು
ಈ ಬಗ್ಗೆ ಡಿಸ್ಕವರಿ ಚಾನೆಲ್‌ಗಾಗಿ ಸಂಶೋಧನೆ ಮಾಡುತ್ತಿದ್ದ ಗ್ರಹಾಮ್ ಹ್ಯಾಂಕಾಕ್ ದ್ವಾರಕಾ, ಧೋಲಾವಿರಾ, ಕ್ಯಾಂಬಿಯನ್ ನಗರ, ಇವೆಲ್ಲವನ್ನೂ ನೋಡಿದ ಮೇಲೆ ದಕ್ಷಿಣದ ಮಹಾಬಲಿಪುರಂಗೆ ಬಂದು ಅಲ್ಲಿನ ಸಮುದ್ರಕ್ಕೆ ಹಾರಿದರು. `ನಾವು ಮೀನುಗಾರಿಕೆಗೆ ಹೋಗುವಾಗ ಕೆಳಗೆ ಕಲ್ಲಿನ ರಚನೆಗಳು ಕಂಡಿದ್ದವು' ಎಂದು ಬೆಸ್ತರು ಹೇಳಿದ್ದೇ ಹ್ಯಾಂಕಾಕ್‌ಗೆ ವೇದವಾಕ್ಯವಾಯಿತು. ಅಲ್ಲಿನ ಕೆಲವು ತಜ್ಞರೊಂದಿಗೆ ಸಮುದ್ರ ಹಾರಿದಾ&a
mp;#
3223; ಹ್ಯಾಂಕಾಕ್‌ಗೆ ಸಿಕ್ಕಿದ್ದು ಲಾಳದ ಆಕಾರದ ಬೃಹತ್ ರಚನೆ. ಮಹಾಬಲಿಪುರಂಗೆ ಕೇವಲ ಮೂರು ಕಿಲೋಮೀಟರ್ ದೂರದಲ್ಲಿ,ಕೇವಲ ೭೦ ಅಡಿಗಳ ಕೆಳಗೆ ಈ ರಚನೆ ಇದೆ. ಇದೇ ಕರಾವಳಿಯಲ್ಲಿ ಇಂಥ ಮೂರ್‍ನಾಲ್ಕು ರಚನೆಗಳನ್ನು ಗುರುತಿಸಲಾಗಿದೆ. ಆಂದರೆ? ಭಾರತದ ಕರಾವಳಿಯಲ್ಲಿ ಇಂಥ ಹತ್ತಾರು ನಗರಗಳು ಇದ್ದವು.
ಮುಳುಗಿದ ಭಾರತ
ಭಾರತವು ೧೪೦೦೦ ವರ್ಷಗಳ ಹಿಂದೆ ಈಗ ಇದ್ದ ಹಾಗೆ ಇರಲಿಲ್ಲ. ಅದರ ಕಡಲಗಡಿಗಳು ಈಗಿದ್ದದ್ದಕ್ಕಿಂತ ವ್ಯಾಪಕವಾಗಿದ್ದವು. ಕ್ಯಾಂಬೇ ಕೊಲ್ಲಿಯೇ ಇರಲಿಲ್ಲ. ಶ್ರೀಲಂಕಾ ದ್ವೀಪ ಆಗ ಭಾರತದ ಭೂಭಾಗವಾಗಿತ್ತು. ಕಾಲ ಕಳೆದಂತೆ ಈ ಭೂಮಿ ಸಮುದ್ರದ ಪಾಲಾಯಿತು. ನಗರಗಳು ಮುಳುಗಿದವು. ಮದುರೆ ಮೀನಾಕ್ಷಿ ದೇಗುಲವನ್ನು ಕಟ್ಟಿದವರೇ ಮಹಾಪ್ರವಾಹದಲ್ಲಿ ಉಳಿದು ತಪ್ಪಿಸಿಕೊಂಡು ಬಂದವರಂತೆ. ಇವೆಲ್ಲ ಕೇಳಿದ ಮೇಲೆ ಒಂದಂತೂ ಸ್ಪಷ್ಟವಾಗುತ್ತದೆ. ನಾವು ಓದುತ್ತಿರುವ ಇತಿಹಾಸ ವಾಸ್ತವಕ್ಕೆ ತೀರಾ ತೀರಾ ದೂರ. ಈ ಹೊಸ ಶೋಧಗಳ ವೈeನಿಕ ವಿಶ್ಲೇಷಣೆಯಾಗಿ ಅವುಗಳು ಇತಿಹಾಸದ ಭಾಗವಾಗಲು ಎಷ್ಟು ದಿನ ಬೇಕು? ಗೊತ್ತಿಲ್ಲ.
೧೯೮೦ರಲ್ಲಿ ಕನ್ನಡಿಗ ಪುರಾತತ್ತ್ವಶಾಸ್ತ್ರಜ್ಞ ಡಾ ಎಸ್.ಆರ್.ರಾವ್ ನೇತೃತ್ವದ ತಂಡದಿಂದ ಕೃಷ್ಣನ ದ್ವಾರಕೆ ಪತ್ತೆಯಾಯಿತು. ಜಲ ತಂತ್ರeನದಲ್ಲಿ ತುಂಬಾ ಆಧುನಿಕವಾಗಿದ್ದ ಧೋಲಾವಿರಾ ಈ ನಾಗರಿಕತೆಯ ಮೇಲೆ ಹೊಸ ಬೆಳಕು ಚೆಲ್ಲಿತು. ಈಗ ಕ್ಯಾಂಬಿಯನ್ ನಗರಗಳು ಇತಿಹಾಸದ ಬುಡವನ್ನೇ ಅಲ್ಲಾಡಿಸಿವೆ. ಅಲ್ಲಿ ದೊರೆತ ಮುದ್ರಿಕೆಯಂತೂ ನಮ್ಮ ಅಕ್ಷರದ ಮೂಲ ರೇಖೆಗಳನ್ನೇ ಬಿಂಬಿಸುವಂತಿದೆ. ಇತ್ತ ಮಹಾಬಲಿಪುರಂ ಬಳಿಯ ಲಾಳಗಳು. ಒಟ್ಟಾರೆ ಭಾಷಾ ವಿeನ, ತರ್ಕ – ಇವುಗಳನ್ನೆಲ್ಲ ಬದಿಗಿಟ್ಟು ಈ ವಾಸ್ತವ ಕುರುಹುಗಳನ್ನೇ ಆಧರಿಸಿ ಇತಿಹಾಸ ಬರೆಯಬೇಕಾದ ಸನ್ನಿವೇಶ ಬಂದಿದೆ.
ಕ್ಯಾಂಬಿಯನ್ ನಗರಗಳ ಹೊಸ ದರ್ಶನವನ್ನು ಪಡೆಯಲು ಮುಳುಗುವವರಾರು?
ಸಿಂಧೂ ಕಣಿವೆಯ ಹೊಸ ಚಹರೆ
ಯೋಗಾಸನದ ಭಂಗಿಗಳು.ಹಿಂದುಗಳಿಗೆ ಅತಿ ಪವಿತ್ರವಾದ ಸ್ವಸ್ತಿಕದ ಚಿಹ್ನೆಗಳು. `ಓಂ' ಪ್ರಣವಾಕ್ಷರದ ಹೆಗ್ಗುರುತುಗಳು. ಕುದುರೆಯ ಬಳಕೆ
ಯ ಸಾಕ್ಷಿಗಳು….
ಸಿಂಧೂ ಕಣಿವೆಯು ನಾಗರಿಕತೆಯ ತೊಟ್ಟಿಲೇನೂ ಅಲ್ಲ ಎಂದವರಿಗೆ ಅಚ್ಚರಿ ಕಾದಿದೆ. ಹರಪ್ಪಾ, ಮೊಹೆಂಜದಾರೋ, ಅವಶೇಷಗಳು ಕೇವಲ ನಾಶಗೊಂಡ ಸಂಸ್ಕೃತಿಯ ಕುರುಹುಗಳಲ್ಲ, ಅತ್ಯಂತ ಕ್ರಿಯಾಶೀಲವಾಗಿದ್ದ ಅಪ್ಪಟ ಭಾರತೀಯ ಬದುಕಿನ ಸಾಕ್ಷಿಯಾಗಿದ್ದವು ಎಂಬುದಕ್ಕೆ ಈಗಲೂ ಪುರಾವೆಗಳು ಸಿಗುತ್ತಿವೆ.
೧೯೨೧ರಲ್ಲಿ ಹರಪ್ಪಾ, ಮೊಹೆಂಜದಾರೋ ನಗರಗಳು ಪತ್ತೆಯಾದ ದಿನದಿಂದ ಈವರೆಗೂ ಈ ನಾಗರಿಕತೆಯ ಬಗ್ಗೆ ಬೆಳಕು ಚೆಲ್ಲುವ ಮತ್ತು ಕತ್ತಲನ್ನೂ ಚೆಲ್ಲುವ ವಾದಗಳು ಮೂಡುತ್ತಲೇ ಇವೆ. ಒಂದು ಮುಖ್ಯವಾದ : ಇದು ದ್ರಾವಿಡರ ಭೂಮಿಯಾಗಿತ್ತು, ಆರ್ಯರು ಬಂದು ಅವರನ್ನು ಓಡಿಸಿದರು, ಅವರ ನಾಗರಿಕತೆಯನ್ನು ನಿರ್ನಾಮ ಮಾಡಿದರು, ಇತ್ಯಾದಿ. ಆದರೆ ಅಂಥ ಮಹಾನ್ ದ್ರಾವಿಡ ನಾಗರಿಕತೆಯ ಒಂದೂ ಸಾಂಸ್ಕೃತಿಕ ಕುರುಹುಗಳು ಈವರೆಗೆ ಪತ್ತೆಯಾಗದಿರುವುದು ಮತ್ತು ಆರ್ಯರು ಯಾವುದೇ ನಾಗರಿಕತೆಯ ಕುರುಹುಗಳನ್ನೂ ತೋರದೆ ಬೃಹತ್ ಗ್ರಂಥಗಳನ್ನು ರಚಿಸಿರುವುದು – ಎರಡೂ ತಾಳಮೇಳ ಇಲ್ಲದ ವಾದ ಎಂಬುದು ಮೇಲುನೋಟಕ್ಕೇ ಸರಿ ಎನಿಸುತ್ತದೆ. ಇಲ್ಲಿ ಅರಳಿದ್ದು ಒಂದೇ ಸಂಸ್ಕೃತಿ, ಅವರೇ ಈ ಎಲ್ಲಾ ಗ್ರಂಥಗಳನ್ನು ರೂಪಿಸಿದರು ಎಂಬ ವಾದಕ್ಕೆ ಈಗ ಬೆಲೆ ಬರುತ್ತಿದೆ. ಈವರೆಗೆ ಈ ಪ್ರದೇಶದಲ್ಲಿ ೨೦೦೦ಕ್ಕೂ ಎಹಚ್ಚು ನಗರಗಳು ಪತ್ತೆಯಾಗಿವೆ. ಇಲ್ಲಿ ಗುಪ್ತಗಾಮಿನಿಯಾದ ಸರಸ್ವತೀ ನದಿಯನ್ನು ವಿeನಿಗಳೇ ಗುರುತಿಸಿದ್ದಾರೆ. ಹೀಗಾಗಿ ಇದು ಸಿಂಧೂ-ಸರಸ್ವತೀ ನಾಗರಿಕತೆ ಎಂದೇ ಹೆಚ್ಚಾಗಿ ಕರೆಸಿಕೊಳ್ಳುತ್ತಿದೆ. ಈಗ ಇದೇ ನೆಲದಲ್ಲಿ ವೇದಕಾಲೀನ ಸಂಸ್ಕೃತಿಯ ನಿದರ್ಶನಗಳು ಸಾಕಷ್ಟು ದೊರೆತಿವೆ.