(ಮನೋಹರ ‘ಮಸ್ಕಿ’ ಅಲ್ಲ, ಮನೋಹರ ಸ್ಕೀಮ ಎಂದು ವೈಯೆನ್ಕೆ ಹೇಳಿದ್ದನ್ನು ಉಲ್ಲೇಖಿಸಿ ಮತ್ತು ‘ಮನೋಹರ ಮಸ್ಕಿಯೂ, ಬಿತ್ತನೆ ಕೆಲಸವೂ’ ಎಂಬ ‘ವಿಜಯ ಕರ್ನಾಟಕ’ದ ಶೀರ್ಷಿಕೆಯಿಂದ ಪ್ರೇರೇಪಿತ ಶೀರ್ಷಿಕೆ)
ಈ ಅರ್ಥವಾಗದ ಪತ್ರೋತ್ತರದ ಹಿಂದಿನ ವಿವರಗಳು ಬೇಕಾ? : ಸ್ವಲ್ಪ ಕಾಯ್ರಿ ಮಾರಾಯ್ರೆ…. ಎಂಥ ಚಡಪಡಿಕೆ ನಿಮ್ದು….
ಪ್ರಿಯ ಸುದರ್ಶನ
ನನ್ನ ಮೂಲ ಪ್ರಶ್ನೆ ಸ್ನೇಹಕ್ಕೆ ಸಂಭಂದಿಸಿದ್ದು ನೀನು ಜಾಣತನದಿಂದ ಅದನ್ನು ವ್ಯವಹಾರಕ್ಕೆ ಇಳಿಸುತ್ತಿದ್ದಿಯಾ,ಇರಲಿ .
ಮೊದಲು ನೀವು ಸ್ನೇಹಿತರಲ್ಲಿ ನಿಮ್ಮ ಸಾರ್ವಜನಿಕ ಜೀವನದ ವ್ಯವಹಾರಗಳ ಬಗ್ಗೆ ಇರುವ ಸಂಶಯಗಳನ್ನು ನಿವಾರಿಸಿಕೊಳ್ಳಿ; ಅದಿಲ್ಲವಾದರೆ ನಿಮ್ಮ ಇನ್ನುಳಿದ ಸ್ನೇಹಿತರೂ ನಿಮ್ಮಿಂದ ದೂರವಾಗುವ ಸಾಧ್ಯತೆಗಳಿವೆ ಎಂದು ವಿನಮ್ರವಾಗಿ ಹೇಳಬಯಸುವೆ. ನಾನು ಸ್ನೇಹವನ್ನು ವ್ಯವಹಾರಕ್ಕೆ ಬಳಸುವಷ್ಟು ಜಾಣನಲ್ಲ. ವ್ಯವಹಾರವನ್ನು ಜಾಣತನದಿಂದ ಮಾಡಿ ನುಣುಚಿಕೊಳ್ಳುವವರ ಸ್ನೇಹಿತನೂ ಅಲ್ಲ.
SIFIN ನ ಆ ೮೦ ಲಕ್ಷ ವ್ಯವಹಾರದ ಬಗ್ಗೆ ನೀನು ಕೇಳಿದ ರೀತಿಯೇ ನಿನ್ನ ಮನಸ್ಥಿತಿಯನ್ನು ವಿವರಿಸುತ್ತದೆ , ನೀನು ಆಡಿಟರ್ ಅಲ್ಲ , ಇ ಸಂಸ್ಥೆಯ ಸದಸ್ಯನು ಅಲ್ಲ, ನಿನ್ನ ಮೊದಲ ಉತ್ತರದಲ್ಲಿ ಈಗ ಹೊಸ ಕೆಲಸದಲ್ಲಿರುದರಿಂದ ಯಾವಗ ಸಮಯ ಸಿಗುತ್ತದೋ ನೋಡೋಣ ಎಂದು , ಒಂದೇ ದಿನಕ್ಕೆ riminder ಬೇರೆ ಕಳಿಸಿದ್ದಿಯಾ, ಇದೆಲ್ಲ ಏನು ?
ಸಿಫಿನ್ ಬಗ್ಗೆ ನನ್ನ ಮನಸ್ಥಿತಿಯೇನು ಎಂದು ಪ್ರಶ್ನಿಸಿದ್ದೀರ. ಒಬ್ಬ ಶ್ರೀಸಾಮಾನ್ಯನಾಗಿ ಸಿಫಿನ್‌ನ ವ್ಯವಹಾರಗಳ ಬಗ್ಗೆ ಸಾರ್ವಜನಿಕ ಹಿತದ ಪ್ರಶ್ನೆಗಳನ್ನು ಕೇಳಬಹುದು ಎಂದು ಭಾವಿಸಿದ್ದೇನೆ. ಸದ್ಯಕ್ಕೆ ಇದೇ ನನ್ನ ಮನಸ್ಥಿತಿಯಾಗಿದೆ. ನೀವು ಅಂದುಕೊಂಡ ಮನಸ್ಥಿತಿ ಯಾವುದೆಂದು ತಿಳಿಯಲಿಲ್ಲ. ನೀವು ಮೊನ್ನೆ ಬರುವಿರೆಂದು (ನೀವೇ ತಿಳಿಸಿದಂತೆ) ಕಾದಿದ್ದೆ. ಬರಲಿಲ್ಲ. ನೆನಪಿಸಿದ್ದು ತಪ್ಪೆ? ಒಬ್ಬ ಸ್ನೇಹಿತನಾಗಿ ಎಂದು ಹಲವು ಬಾರಿ ಒತ್ತಿ ಹೇಳಿದ್ದೀರಿ, ಇಂಥ ಒಬ್ಬ ಸ್ನೇಹಿತನಿಗೆ ಮಾಹಿತಿ ಕೊಡುವುದಕ್ಕೆ ನೀವು ಹಿಂಜರಿಯುವುದು ಯಾಕೆ?
ಆದರು ಒಬ್ಬ ಸ್ನೇಹಿತನ ನೆಲೆಯಲ್ಲಿ ನಿನ್ನಗೆ ನನ್ನ ಉತ್ತರ ಹೀಗಿದೆ ……
ಇದು SIFINಗೆ ಉತ್ತಮ ವ್ಯವಹಾರವಾಗಿದೆ , ಬೋರ್ಡ್ ಒಪ್ಪಿಗೆ ನೀಡಿದೆ , ಆಡಿಟ್ ಆಗಿದೆ , ಸಾಮಾನ್ಯ ಸಭೆ (AGM) ಒಪ್ಪಿಗೆ ನೀಡಿದೆ, ೪೦ ಲಕ್ಹ್ಸ ವಾಪಸು ಬಂದಾಗಿದೆ , ಇದರಲ್ಲಿ ಏನಾದರು ಮೋಸ ಇದ್ದಲ್ಲಿ ಅದನ್ನು ಸಾಮಾನ್ಯ ಸಭೆ (ಂಉಒ) ಗೆ ತಿಳಿಸುವದು ಆಡಿಟರ್ ನ ಕೆಲಸ , ಆ ಆಡಿಟರ್ ಯಾರು ಎಂದು ನಿನಗೆ ಗೊತ್ತು …
ಇದೆಲ್ಲ ಇರಲಿ . SIFINಗೆ ನಿನಗೂ ಇಂತಹ ಪ್ರಶ್ನೆ ಕೇಳುವ ಸಂಭಂದ ಇಲ್ಲ.
ನಾನೂ ಕೇಳಬಹುದಾದರೆ: ೧) ಸಿಫಿನ್‌ನ ವ್ಯವಹಾರದಲ್ಲಿ ಈ ೮೦ ಲಕ್ಷದ ಸಾಲಕ್ಕೆ ಪ್ರಾವಿಜನ್ ಇದೆಯೆ? ಕಟ್ಟಡ ಲೀಸ್‌ಗೆ ಪಡೆದ ಹಣವನ್ನು ದಿಢೀರನೆ ಪಡೆದಿದ್ದೇಕೆ? ಕಟ್ಟಡದ ಬದಲು ಹಣ ಬಂದದ್ದೇಕೆ? ಎಜಿಎಂಗೆ ತಿಳಿಸಿದ ಹತ್ತು ದಿನಗಳ ಬಳಿಕ ಹಣ ಬಂದಿದ್ದೇಕೆ? ಬೋರ್ಡ್ ಎಂದರೆ ಯಾರು ಯಾರು? ಎಜಿಎಂ ಸಭೆ ನಡೆದದ್ದು ಸಾಲಕ್ಕೆ ಮುನ್ನವೋ, ಆಮೇಲೋ?
ನೀವು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಬರೆದಿಟ್ಟ ನಿಮ್ಮ ಆಡಿಟರ್‌ನ ಬಗ್ಗೆ ನನಗೆ ತೀವ್ರ ಕನಿಕರವಿದೆ. ಆದರೆ ಆತನ ಮೇಲೆ ನೀವು “ಮೋಸ ಇದ್ದಲ್ಲಿ ಆಡಿಟರ್ ಗಮನಕ್ಕೆ ತರಬೇಕಿತ್ತಲ್ಲ” ಎಂದು ಹೇಳಿ ಎಲ್ಲ ಆರೋಪಿತ ಭಾನಗಡಿಗಳನ್ನೂ ಆಡಿಟರ್ ತಲೆ ಮೇಲೆ ಸುರಿದಿರುವುದು ನೋಡಿ ಆ ಆಡಿಟರ್ ಮಹಾಶಯನ ಬಗ್ಗೆ ಕರುಣೆ ಬಂದಿದೆ. ಇಷ್ಟಕ್ಕೂ ನೀವು ಆಡಿಟರ್ ಬರೆದದ್ದೆಲ್ಲ ದೈವವಾಣಿ, ಅದನ್ನು ಪ್ರಶ್ನಿಸುವ ಹಾಗಿಲ್ಲ ಎಂಬಂತೆ ಚಿತ್ರಿಸಿದ್ದೀರ! ಇರಲಿ. ಈ ವಿಷಯದ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾತುಕತೆ ಮಾಡೋಣ.
ನನಗೂ ಸಿಫಿನ್‌ಗೂ ಸಂಬಂಧ ಇಲ್ಲ ಎನ್ನುತ್ತೀರಲ್ಲ, ನಿಮಗೂ, ನಾನು ಶ್ರೀ ಯಡ್ಯೂರಪ್ಪನವರ ಕಚೇರಿಯಲ್ಲಿ ಮಾಡುತ್ತಿದ್ದ ಕೆಲಸಕ್ಕೂ ಸ್ನೇಹದ ಸಂಬಂಧವೇನಾದರೂ ಇತ್ತೆ? ಯಡ್ಯೂರಪ್ಪನವರ ಸುತ್ತಮುತ್ತ ನಡೆಯುವ ರಾಜಕೀಯ ಚಟುವಟಿಕೆಗಳನ್ನು ತಿಳಿಸು ಎಂದು ನೀವು ಎರಡು ಸಲ ಫೋನ್ ಮಾಡಿ, ಒಮ್ಮೆ ವೈಯಕ್ತಿಕವಾಗಿ ತಿಳಿಸಿದಿರಲ್ಲ, ಇದಕ್ಕೂ ಪಕ್ಷದ ಕೆಲಸಗಳಿಗೂ ಯಾವ ಸಂಬಂಧವಿತ್ತು? ಯಾವ ಹಿನ್ನೆಲೆಯಿಂದ ಈ ಬೇಡಿಕೆಯನ್ನು ಮಂಡಿಸಿದ್ದಿರಿ?
ಸಿಫಿನ್‌ಗೂ, ಸಂಯುಕ್ತ ಸಹಕಾರಿಗೂ ಯಾವುದೇ ಸಂಬಂಧವಿಲ್ಲ ಎಂದು ನೀವೇ ಹಲವರಲ್ಲಿ ಹೇಳಿರುವಾಗ, ಸಿಫಿನ್‌ಗೂ ನನಗೂ ಸಂಬಂಧವಿಲ್ಲ ಎಂದು ನೀವು ಹೇಳುವುದರಲ್ಲಿ ಯಾವ ಲೋಪವೂ ಇಲ್ಲ ಬಿಡಿ!
ನನ್ನ ಬಗ್ಗೆ ಬೆನ್ನ ಹಿಂದೆ ನಡೆದ ಅಪಪ್ರಚಾರ ನಿನ್ನ ಗಮನಕ್ಕೆ ಬಂದಿದ್ದಾರೆ ಸ್ನೇಹಿತನಾಗಿ ನನ್ನನ್ನೇ ಕೇಳದೆ ……….. ಅವರನ್ನು ಕೇಳುವ ಅಗತ್ತ್ಯ ಏನಿತ್ತು ?
ನಿಮ್ಮ ಬಗ್ಗೆ ಬೆನ್ನ ಹಿಂದೆ ನಡೆದ ಅಪಪ್ರಚಾರ ನನಗೆ ಗೊತ್ತಿಲ್ಲ; ನಿಮ್ಮ ಬಗ್ಗೆ ನನ್ನಲ್ಲಿ ಇರುವ ದಾಖಲೆಗಳ ಆಧಾರದಲ್ಲಿ, ಇಲ್ಲದೇ ಇರುವ ಮಾಹಿತಿಗಳ ಆಧಾರದಲ್ಲಿ ನಾನು ………ನ್ನು ಮಾತನಾಡಿಸಿದೆ. ಅದರಲ್ಲೂ ಸಿಫಿನ್‌ಗೆ ಸಂಬಂಧಿಸಿದ ವಿಚಾರಗಳೇ ಇದ್ದವು. (ಅಲ್ಲೂ ನಾನು ನಿಮ್ಮ ಪ್ರಕಾರ ಸ್ನೇಹಿತನಾಗಿ ಕೇಳದೆ ಎಡವಿದ್ದೇನೆ.)
ಅಮೆರಿಕಾ ಮತ್ತು ಯೂರೋಪ್‌ಗೆ ತಮಗೆ ಯಾರು ಹಣ ಕೊಟ್ಟರು ಎಂದು ನನಗೇ ಅಂದು ಕ್ಯಾಪಿಟೊಲ್ ಹೋಟೆಲಿನಲ್ಲಿ ತಿಳಿಸಿದ್ದಿರಿ; ಈಗ ಸಂಯುಕ್ತ ಸಹಕಾರಿಯೂ ಅದೇ ಪ್ರವಾಸಕ್ಕೆ ಹಣ ಕೊಡಬೇಕೆಂದು ಪ್ರಸ್ತಾವನೆ ಇಟ್ಟಿದ್ದೀರಲ್ಲ, ಯಾಕೆ? ನಾನು ಶ್ರೀಸಾಮಾನ್ಯನಾಗಿ ನನ್ನ ಹಕ್ಕನ್ನು ದುರ್ಬಳಕೆ ಮಾಡಿಕೊಂಡು ಈ ಪ್ರಶ್ನೆ ಕೇಳುತ್ತಿರುವೆ. ಈ ಪ್ರಶ್ನೆಗೂ, ನಿಮ್ಮ ಬೆನ್ನ ಹಿಂದೆ ನಡೆದಿದೆ ಎನ್ನಲಾದ ಅಪಪ್ರಚಾರಕ್ಕೂ ನಿಕಟ ಸಂಬಂಧವಿದೆ ಎಂದು ಕೇಳುತ್ತಿರುವೆ. ನಿನಗೂ ಸಂಯುಕ್ತ ಸಹಕಾರಿಗೂ ಸಂಬಂಧವಿಲ್ಲ ಎಂಬ ನಿಮ್ಮ ಟಿಪಿಕಲ್ ಉತ್ತರವನ್ನು ಹೊರತುಪಡಿಸಿ ಬೇರೆ ಏನಾದರೂ ಸ್ಟಫ್ ಇದ್ದರೆ ತಿಳಿಸಿ.
ಮತ್ತು ಸಂಘದ ಹಿರಿಯರು ಇದನ್ನು ತಿಳಿಸಲು ಹೇಳಿದ್ದರೆಂದು ಸಂಘದ ಹೆಸರನ್ನು ಏಕೆ ಬಳಸುತ್ತಿದ್ದಿಯ ? ಸಂಘದ ಹಿರಿಯರು ಯಾರು ಹೇಳು, ನಾನೆ ಅವರಲ್ಲಿಗೆ ಹೋಗಿ ನೀನು ತಿಳಿಸಿದ ಧಾಖಲೆಗಳ ಜೊತೆ ಭೆಟ್ಟಿ ಮಾಡುವೆ ,,,,
ನಿಮಗೆ ಒಬ್ಬ ಸ್ನೇಹಿತನಾಗಿ ನನಗೇ ದಾಖಲೆಗಳನ್ನು ತೋರಿಸುವ ಒಲವಿಲ್ಲ; ಸಂಘದ ಅಧಿಕಾರಿಗಳಿಗೆ ಏನು ತೋರಿಸುತ್ತೀರಿ ಎಂಬ ಬಗ್ಗೆ ನನಗೆ ಕುತೂಹಲವಿದೆ. ಮೊದಲು ನಿಮ್ಮಲ್ಲಿ ನಾನು ಕೇಳಿದ ದಾಖಲೆಗಳು ಇವೆ ಎಂಬುದು ನನಗೆ ಖಚಿತವಾಗಬೇಕಲ್ಲವೆ? ಹಾಗೆ ನಿಮ್ಮಲ್ಲಿ ದಾಖಲೆಗಳಿದ್ದರೆ ನಾನೂ ನಿಮ್ಮ ಜೊತೆಗೇ ಸಂಬಂಧಿಸಿದ ಸಂಘದ ಅಧಿಕಾರಿಗಳ ಭೇಟಿಗೆ ಬರುವೆ. ತಮ್ಮ ಅಮೂಲ್ಯ ಸಮಯವನ್ನು ಮತ್ತು ಸಂಘದ ಅಧಿಕಾರಿಗಳ ಸಮಯವನ್ನು ಮತ್ತೆ ಮತ್ತೆ ಹಾಳುಮಾಡಲು ಈ ಶ್ರೀಸಾಮಾನ್ಯನಿಗೆ ಇಷ್ಟವಿಲ್ಲ.
ಇಷ್ಟು ವರ್ಷಗಳವರೆಗೆ ಸ್ನೇಹದ ಹಿನ್ನೆಲೆಯಲ್ಲಿ ನಿನ್ನನು ಸಂಪ್ರಕಿಸಿದ್ದೇನೆ ಆದ್ದರಿಂದ ನಮ್ಮ ಸ್ನೇಹಕ್ಕೆ ಬೆಲೆ ಕೊಟ್ಟು ಬೆನ್ನ ಹಿಂದಿನ ಅಪಪ್ರಚಾರವನ್ನು ತಿಳಿಗೊಳಿಸಲು ಒಬ್ಬ 3rd party ಆಗಿ ಸಲಹೆ ನೀಡು,,
ಮೊದಲು ನೀವು ಹೇಳಿಕೊಳ್ಳುವ ಸ್ನೇಹಕ್ಕೆ ಬೆಲೆ ಕೊಟ್ಟು ದಾಖಲೆಗಳನ್ನು ತೋರಿಸಿ ನಿಮ್ಮ ಮೇಲಿನ ಸಂಶಯಗಳಿಂದ ಹೊರಗೆ ಬನ್ನಿ; ಸ್ನೇಹಕ್ಕೆ ಬೆಲೆ ಕೊಟ್ಟು ಸಲಹೆ ನೀಡುವ ಬಗ್ಗೆ ಕೇಳುವ ತಮ್ಮ ಬೇಡಿಕೆ ಸದ್ಯಕ್ಕೆ ತಿರಸ್ಕೃತವಾಗಿದೆ. ನಿನಗೆ ಸಿಫಿನ್ ಬಗ್ಗೆ ಕೇಳುವುದಕ್ಕೆ ಯಾವುದೇ ಅರ್ಹತೆ ಇಲ್ಲ ಎನ್ನುತ್ತೀರಿ; ಆದರೆ ಸ್ನೇಹಿತನಾಗಿ ಅಪಪ್ರಚಾರ ತಿಳಿಗೊಳಿಸಲು ಸಲಹೆ ಕೇಳುತ್ತೀರಿ; ಅರೆ, ವಿಚಿತ್ರ! ನಿಮ್ಮಿಂದ ಯಾವ ಮಾಹಿತಿಯೂ ಇಲ್ಲದೆ ನಾನು ನಿಮ್ಮ ವಿರುದ್ಧದ ಪ್ರಚಾರ ತಿಳಿಗೊಳಿಸುವುದಾದರೂ ಹೇಗೆ? ಅಪಪ್ರಚಾರ ಆಗಿರುವುದೇ ನಾನು ಕೇಳಿರುವ ದಾಖಲೆಗಳನ್ನು ನೀವು ತೋರಿಸಿಲ್ಲ ಎಂಬ ಕಾರಣಕ್ಕಾಗಿ ಎಂದಾದರೂ ತಾವು ತಿಳಿದು ದೊಡ್ಡ ಮನಸ್ಸು ಮಾಡಿ ದಾಖಲೆಗಳನ್ನು ತೋರಿಸಬಾರದೆ?
ನಿನ್ನ ಜಾಣತನ ಪ್ರದರ್ಶಿಸಿದ್ದೀಯ, ನಿನಗೆ ಸಂಬಂಧವಿಲ್ಲ, ಸಲಹೆ ಕೊಡು, ಸಂಘದ ಹೆಸರು ಬಳಸಿದ್ದೀಯ, ಒಂದೇ ದಿನದಲ್ಲಿ ರಿಮೈಂಡರ್ ಕಳಿಸಿದ್ದೀಯ …. ಈ ಎಲ್ಲ ಮಾತುಗಳನ್ನು ಬದಿಗಿಡಿ; ಮೊದಲು ನಾನು ಕೇಳಿದ ವಿವರಗಳ ಹಿಂದಿನ ಸಂಶಯವನ್ನು ಅರಿತು ಅವುಗಳನ್ನು ತೋರಿಸಿ. ನೀವು ಹಾಗೆ ದಾಖಲೆಗಳನ್ನು ತೋರಿಸುವುದಾದರೆ, ಮತ್ತು ಅವುಗಳಿಂದಾಗಿ ನನ್ನ ಸಂಶಯಗಳು ನಿವಾರಣೆಯಾದರೆ, ಖಂಡಿತವಾಗಿಯೂ ನಿಮ್ಮ ವಿರುದ್ಧದ ಅಪಪ್ರಚಾರವನ್ನು ತಿಳಿಗೊಳಿಸಲು ಯತ್ನಿಸುವೆ. ಎರಡು ವರ್ಷಗಳ ಹಿಂದೆ ಸಿಫಿನ್ ಹೆಸರನ್ನು ಸೂಚಿಸಿದವನೇ ನಾನು, ಹೆಸರಿಗಾಗಿ ನೀಡಬೇಕಿದ್ದ ಬಹುಮಾನ ಬಂದಿಲ್ಲ ಎಂದು ಎಷ್ಟು ಸಲ ತಿಳಿಸಿದರೂ ತಾವು ಪಾವತಿ ಮಾಡಿಸಿಲ್ಲ ಎಂಬುದರ ಹೊರತಾಗಿಯೂ ಈ ಮಾತಿಗೆ ನಾನು ಬದ್ಧ.
ಎಲ್ಲಕ್ಕಿಂತ ಮುಖ್ಯ ಇನ್ನುಳಿದ ೪೦ ಲಕ್ಷ ರೂ. ಕೂಡಾ ವಾಪಸ್ಸು ಬರುತ್ತದೆಯೆ? ಅಥವಾ ಅದನ್ನು ಮುಂಗಡವಾಗಿ ಪಡೆದ ಸಂಸ್ಥೆಯು ಕಟ್ಟಡವನ್ನು ಕೊಡುತ್ತದೆಯೆ? ಇಷ್ಟಕ್ಕೂ ಕಟ್ಟದಿರುವ ಕಟ್ಟಡಕ್ಕೆ, ಈಗಷ್ಟೇ ಹುಟ್ಟಿದ ಸಂಸ್ಥೆಯಿಂದ ಮುಂಗಡ ನೀಡಿರುವ ನಿಮ್ಮ ದೂರದರ್ಶಿತ್ವಕ್ಕೆ ಏನೆನ್ನೋಣ? ಅದರಲ್ಲಿ ಅರ್ಧ ಹಣವನ್ನು ವಾಪಸ್ಸು ಪಡೆದದ್ದಕ್ಕೆ ಏನು ಕಾರಣವಿದೆ ಎಂದು ಊಹಿಸೋಣ? ೫೦ ಲಕ್ಷ ರೂ. ಜಾಮೀನಿನ ಮೇಲೆ ಬಿಡುಗಡೆಯಾದ, ಕ್ರಿಮಿನಲ್ ದಾವೆ ಎದುರಿಸುತ್ತಿರುವವರಿಗೆ ಸಾಲ ನೀಡುವ ನಿಮ್ಮ ನಿರ್ಧಾರವನ್ನು ದಶಕ ಮೀರಿದ ಬ್ಯಾಂಕಿಂಗ್ ಸಾಮಾನ್ಯಜ್ಞಾನದ ಮಹಾನ್ ತಿರುಳು ಎನ್ನೋಣವೆ?
ಈಗಲೂ ನಿಮಗೆ ನಿಮ್ಮ ವಿರುದ್ಧ ನಡೆಯುತ್ತಿದೆ ಎಂದು ತಿಳಿದಿರುವ ಅಪಪ್ರಚಾರವನ್ನು ತಿಳಿಗೊಳಿಸುವ ವಿಚಾರದಲ್ಲಿ ನನ್ನ ಪ್ರವೇಶ ಇದೆ ಎಂದು ಗಂಭೀರವಾಗಿ ಅನ್ನಿಸಿದ್ದರೆ, ಸ್ನೇಹ, ವ್ಯವಹಾರದ, ಜಾಣತನದ ಮಾತೆಲ್ಲ ಬಿಟ್ಟು ನಾನು ಕೇಳಿರುವ ದಾಖಲೆಗಳನ್ನು ತೋರಿಸಿ.