ಹಾಗಾದ್ರೆ ನಾವಿನ್ನು ಲಾಂಗ್ ಟರ್ಮ್ ಪ್ಲಾನ್ ಮಾಡಬಹುದಲ್ವೆ ಎಂದು ನಾನು ಅವರನ್ನು ಕೇಳಿದೆ. ನಿಜ ಕಣಯ್ಯ, ಶಾರ್ಟ್ ಟರ್ಮ್ ಪ್ಲಾನ್ ಸಕ್ಸೆಸ್ ಆಗಿಲ್ವಲ್ಲ….. ಲಾಂಗ್‌ಟರ್ಮೇ ಮಾಡ್ಬೇಕು ಎಂದು ಗಹಗಹಿಸುತ್ತ ಸಿಗರೇಟು ಎಳೆದರು ರಂಗನಾಥ. ಹೊರಗೆ ಜುಮುರು ಮಳೆ ಹೊಯ್ಯುತ್ತಿತ್ತು. ಅವರ ಸಿಗರೇಟು ಸೇದುವ ತಾರಸಿಯಲ್ಲಿ ನಾವು ನಿಂತಿದ್ದೆವು.
ಅದ್ಯಾವುದು ಶಾರ್ಟ್ ಟರ್ಮ್ ಪ್ಲಾನ್ ಎಂದು ಕೇಳಿದೆ. ’ಅದೇ… ನಾನು ಸತ್ತೇಬಿಡಬೇಕು ಅಂತ ಶಾರ್ಟ್ ಟರ್ಮ್ ಪ್ಲಾನ್ ಹಾಕಿದ್ದೆ…. ನೀನು ಬಿಡಬೇಕಲ್ಲ… ಈಗ ಲಾಂಗ್ ಟರ್ಮ್ ಪ್ಲಾನ್ ಮಾಡದೇ ವಿಧಿಯಿಲ್ಲ ಕಣಯ್ಯ…..’ ಎಂದು ರಂಗನಾಥ ಮತ್ತೆ ನಕ್ಕರು. ಸರ್…… ಹಾಗೆ ಮಾತಾಡಬೇಡಿ ಎಂದು ಭುಜ ಹಿಡಿದು ಪ್ರೀತಿಯಿಂದ ಹೊಡೆದೆ. ನನ್ನ ಕಣ್ಣಂಚಿನಲ್ಲಿ ಕಟ್ಟಿದ ಹನಿಯನ್ನು ಗಟ್ಟಿಯಾಗಿ ತಡೆದೆ.
ಈ ಘಟನೆ ನಡೆಯೋ ಎಷ್ಟೋ ದಿನಗಳ ಮುನ್ನ ಒಂದು ದಿನ ನಾನು ಅಂಥದ್ದೇ ಒಂದು ಮಳೆಯ ದಿನ. ಅವರ ಕಚೇರಿಗೆ ಹೋಗಿದ್ದೆ. ಹೊರಗಿನ ಬಾಗಿಲಲ್ಲೇ ಕೀಲಿ ಅನಾಥವಾಗಿತ್ತು. ಒಳಗೆ ಒಳಗೆ ಹೋಗುತ್ತ ಅವರನ್ನು ಹುಡುಕಿದ್ದೆ. ಎಲ್ಲೋ ದೃಷ್ಟಿ ಕೀಲಿಸಿ ಕುಳಿತಿದ್ದರು. ನಾನು ಬಂದಿದ್ದನ್ನು ಗುರುತಿಸಿ ಕ್ಷೀಣವಾಗಿ ನಕ್ಕರು. ನನ್ನ ಬೈಕಿನಲ್ಲಿ ಅವರನ್ನು ಕರೆತರಲಾಗದು. ಅವರಿಗೆ ನಡೆಯಲಾಗದು. ಎಷ್ಟೋ ಮೆಟ್ಟಿಲುಗಳನ್ನು ಇಳಿದು ನೆಲ ತಲುಪಬೇಕಿದ್ದ ಅವರ ಕಚೇರಿಯಲ್ಲಿ ಬೇರೆ ಯಾರೂ ಇರಲಿಲ್ಲ. ಕೊನೆಗೆ ಅವರನ್ನು ಮೆತ್ತಗೆ ಇಳಿಸಿದೆ. ಇಲ್ಲೇ ಕಣೋ, ನಾನು ಕಳೆದ ತಿಂಗಳು ಬಿದ್ದುಬಿಟ್ಟಿದ್ದೆ……. ಉರುಳಿದ ಹೊಡೆತಕ್ಕೆ ಇಲ್ಲೆಲ್ಲ ಗಾಯ ಆಗಿದೆ ನೋಡು ಎಂದು ಜೋಕ್ ಮಾಡುತ್ತಲೇ ಮೆಟ್ಟಿಲು ಇಳಿದರು. ಆಟೋ ಹಿಡಿದು ಅವರನ್ನು ಮನೆಗೆ ಕರೆದೊಯ್ದೆ. ಮಗ ಇದ್ದ.
‘ಇನ್ನು ಅವರು ಆಫೀಸಿಗೆ ಹೋಗೋದು ಬೇಡ, ದಯವಿಟ್ಟು ಅಮ್ಮಂಗೆ ಹೇಳು’ ಎಂದು ನಿಲ್ಲದೆ ಹೊರನಡೆದೆ.
ಆಮೇಲೆ ಮರುದಿನವೇ ಅವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಿದ ಸುದ್ದಿ ಬಂತು. ಸೀದಾ ಹೋದೆ. ಅವರ ಪತ್ನಿ, ಮಗಳು ಇದ್ದರು. ಎಷ್ಟೋ ದಿನಗಳ ನಂತರ ಅವರನ್ನು ದೂರದ ಊರಿನ ಒಂದು ವಿಶ್ರಾಂತಿಧಾಮಕ್ಕೆ ಕಳಿಸಿಕೊಡಲಾಯಿತು. ಅಲ್ಲಿಂದ ಅವರು ತಪ್ಪಿಸಿಕೊಂಡು ಬಂದು ಮತ್ತೆ ಆಫೀಸಿನ ಸಾಫ್ಟ್‌ವೇರ್ ಕೆಲಸವನ್ನು ಮುಂದುವರೆಸಿ ನನ್ನನ್ನು ಕರೆದು ಮಾತಾಡಿಸಿದಾಗಲೇ ಅವರ ಶಾರ್ಟ್ ಟರ್ಮ್ ಜೋಕ್ ಸ್ಫೋಟಿಸಿದ್ದು.
ಅದಕ್ಕಿಂತ ಕೆಲವೇ ದಿನಗಳ ಹಿಂದೆ ಅವರನ್ನು ಸಂಜೆ ಭೇಟಿ ಮಾಡಿದ್ದೆ. ಬಾರಯ್ಯಾ ನಾನೇನು ಹೆಚ್ಚು ಗುಂಡು ಹಾಕಲ್ಲ ಎಂದು ರಂಗನಾಥ ನನ್ನನ್ನು ಹೋಟೆಲಿಗೆ ಕರೆದುಕೊಂಡು ಹೋಗಿದ್ದರು. ತನಗಾದ ಅನ್ಯಾಯವನ್ನೆಲ್ಲ ಹೇಳಿಕೊಂಡಿದ್ದರು. ನಿಜಕ್ಕೂ ಅವರು ಅವತ್ತು ಮಾತನಾಡಿದ್ದೆಲ್ಲ ನೆನಪಿಸಿಕೊಂಡರೆ …. ಎಂಥ ವ್ಯಕ್ತಿ ಈತ… ಎಷ್ಟು ಸರಳ ಮತ್ತು ನೇರ ಎಂದೆನಿಸಿತ್ತು.
ಅವರ ಲಾಂಗ್‌ಟರ್ಮ್ ಪ್ಲಾನಿನಲ್ಲಿ ಏನೆಲ್ಲ ಇತ್ತು…. ಸಾಫ್ಟ್‌ವೇರನ್ನು ತುಂಬ ಬೆಳೆಸುವ ಹಂಬಲವಿತ್ತು; ರೂಪಾಯಿಯ ಮುಂದಿನ ನೂರು ವರ್ಷಗಳ ಭವಿಷ್ಯದ ಬಗ್ಗೆ ಬರೆಯುವ ಕನಸಿತ್ತು. ದಿನವೂ ಮತ್ತಷ್ಟು ಪುಸ್ತಕಗಳನ್ನು ಓದುವ ಛಲವಿತ್ತು. ಮತ್ತೆ ಹೊಸ ಬದುಕಿನ ಇನಿಂಗ್ಸ್ ಆರಂಭಿಸಿ ಚಿಗುರುವ ಬಯಕೆಯಿತ್ತು.
ಅವರು ಮನಸ್ಸು ಮಾಡಿದ್ದರೆ ಏನೇನಾಗಬಹುದಿತ್ತು ಎಂದು ನಾವು ಹಲವು ಸಲ ಚರ್ಚಿಸಿದ್ದೆವು. ಹಣಕಾಸು, ಬ್ಯಾಂಕಿಂಗ್, ಭೌತಶಾಸ್ತ್ರ, ಗಣಿತ, ಫಿಲಾಸಫಿ, ವೇದ, ಉಪನಿಷತ್ತು, ಸಾಹಿತ್ಯ – ಯಾವುದೇ ವಿಷಯದ ಬಗ್ಗೆಯೂ ಅವರು ಜೀನಿಯಸ್ ಥರಾನೇ ಕಂಡಿದ್ದರು. ವಾರಕ್ಕೆ ಆರೇಳು ಪುಸ್ತಕಗಳನ್ನು ಓದಿ ಗ್ರಾಫಿಕಲ್ ಮೆಮೊರಿಯಿಂದ ಪ್ರತೀ ಪುಟ, ಮುಖ್ಯಾಂಶಗಳನ್ನು ಉಲ್ಲೇಖಿಸುತ್ತಿದ್ದ ಅವರ ನೆನಪಿನ ಶಕ್ತಿಗೆ ನಾವೆಲ್ಲ ನಿಬ್ಬೆರಗಾಗುತ್ತಿದ್ದೆವು.
ಬಹುಶಃ ರಂಗನಾಥ ಯಾರು, ನನಗೆ ಯಾಕೆ ಅವರು ಇಷ್ಟು ಪ್ರೀತಿ ಹುಟ್ಟಿಸಿದ್ದಾರೆ ಎಂದು ನೀವು ಕೇಳಬಹುದು; ಈ ರಂಗನಾಥನಿಗೂ ಮಿತ್ರಮಾಧ್ಯಮಕ್ಕೂ ಯಾವ ಸಂಬಂಧ ಎಂದು ಪ್ರಶ್ನಿಸಲೂಬಹುದು. ಯಾಕೆಂದರೆ ರಂಗನಾಥ ಎಂದೂ ಪ್ರಸಿದ್ಧಿ ಬಯಸಲಿಲ್ಲ; ನಾನು ವಿಜಯ ಕರ್ನಾಟಕದಲ್ಲಿದ್ದಾಗ ಅವರಿಂದ ವಿತ್ತಲೇಖನಗಳನ್ನು ಬರೆಸಿದೆ; ಪುಸ್ತಕ ವಿಮರ್ಶೆಗಳನ್ನೂ ಬರೆಸಿದ್ದೆ. ಬಿ ಜಿ ಎಲ್ ಸ್ವಾಮಿಯವರ ಪುಸ್ತಕಗಳನ್ನು ಸೊಗಸಾಗಿ, ಅಚ್ಚುಕಟ್ಟಾಗಿ ವಿಮರ್ಶಿಸಿದ್ದರು.
ಹಣಕಾಸಿನ ಬಗ್ಗೆಯೂ ಅವರದು ಅಷ್ಟೇ ಪ್ರಭುತ್ವದ ತಿಳಿವಳಿಕೆ. ನನಗೆ ಅವರು ಕಳಿಸಿದ ಈ ಕಿರುಟಿಪ್ಪಣಿಯನ್ನೇ ನೋಡಿ:
Hello,
for some time I have planned this message, but one thing or other kept me putting it off. One fact that surprised me was RBI cut risk weight on real estate loans. Several industries are affected including real estate related. At the moment iron ore exports are badl affected. How come real estate has got so much attention? I saw the answer in Rangarajan’s article. he has expressed that getting the real estate prices moving up is important for the economic recovery. I may be biased but I do not think so. Both speculative market operations and leveraging are at the root of the problem.
Let us get back in time a little. Many reasonably well to do people got into the game of beco0ming names on Loyds. They were regularly getting income and the downside was rare. Then came changes in the legal process in USA and asbestos suits. A number of names lost their shirt.
In early eightees the stock market was booming. Many people got into the habit of writing put options. It was easy money. when market is going up nobody exercises pu options. Came 1987 crash these people, which included doctors and dentists lost a lot. Somethi9ng similar happened because of Japnese taking up real estate prices in eightees. Something worse happened in the LBO scams. While Drexel Burnhm Lambert is remmbered there were many others.
Come 90’s it was futures and options. When LTCM fell Greenspan should have woken up. The CLO’s came into the market in 1992-3. It was a small market. By 1998 the market had grown ten fold. In the next ten years it has grown again a hundred fold. Not all CLO’s are real et underlying collateral. Then there were NTD CLO’s (nth to default CLO’s). The other exotic thing was almost all special purpose vehicles were bankruptcy remote. Everyone was into the game and everyone should have known that it is a house of cards bound to collapse. When the hit came banks stopped trusting one another. The liquidity crunch is not because banks are not willing to lend to reasonable real activity. They are not willing to lend to one another or to corporates having big treasury operations. People have not forgotten Metalgesselschaft, Sumitomo and Enron.
In India most real estate operations are some kind of JV’s with land owner and builder. While leveraging the asset value is taken up and that too on the basis of the value it will fetch after development. Further if the project is approved for home loans there is some other kind of financing again based on the purchase price. Money flows into the developer in instalments. Do we need to rescue this kind of leveraging? I am not sure.
Upto 1997 Bank of England had held the view that CLO’s and credit default swaps should be taken to the banking books. Why BoE changed its stand is not clear. Probably the logic was American and German banks were aggressively pushing for these and as one Official of BoE had expressed to me way back, they can not regulate London out of the Financial market. Everyone is paying the price. Sad part is so is the senior citizen who got caught in the quicksand of reverse mortgage. Eventually big companies and gusys can take a bit of beating, but the average middle income single asset guy may not be able to. No one has even talked of abolishing 15% export tax on iron ore not that it makes much of a difference. We are trying to bring back the stock market to its height. Dr. Singh did not bother about this during 1992-96. Then he is not the FM now is he?
Let me know your reactions.
Ranga
ನನ್ನ ಮಂಗಳೂರಿನ ಗೆಳೆಯ ಶ್ರೀ ಶ್ರೀನಿವಾಸ ಮುಗೆರಾಯರ ಸಂಶೋಧನೆಯ ಕುರಿತಂತೆ ಅವರು ಬರೆದ ಓವರ್‌ನೈಟ್ ಕಾಮೆಂಟನ್ನು ನೋಡಿ.
Dear Sudarshana,
I went through the monograph on TrueIRR. Many of the objections raised about IRR are known and methods of by passing them have been discussed in various books.
I recall work by Little and Mirless covering these issues. Irr is only a project appraisal tool based on some assumptions. In fact there have been attempts to work out IRR with multiple cash flow assumptions with probability values assigned to each of them. Theoretically any algebraic equation of the form ax^n+….+b=0 will have n solution of which only a few will be in the real number domain.
Also change of sign issue arises because of investment of surplus. One approach is to assume entire surplus goes to debt servicing and a separate line of credit to meet the working capital needs is available and factor the cost of such borrowing into the cash flow.
In more advance calculations more sophisticated methods have been used though not necessarily with a view of refining the IRR and related areas. The work done by Merton Miller, Robert merton, myron Scholes and Fischer Black in areas such as option Pricing are significant.
I vaguely recall application of neural network also to financial decision-making. At some point of time in 1969 or 1970 there were some papers in Mathematical Gazette regarding continuous cash flow where time can be broken up into infinite intervals. in these cases exponential accounting comes into picture.
This is what is used in measuring convexity and other parameters of bond portfolio in the context of interest changes. Similar work is also done in the case of evaluating Term Structure of Interest Rates. All the same future is unpredictable.
What would be more useful would be if the calculations enable considering hedging products such as interest Rate Swaps, Currency Swaps or options to improve profitability and reduce risks.
IRR is a tool used to compare multiple projects and choosing one with the best returns and least risks. Risk assessment is not built into IRR and that refinement may be more useful. In all projects there is a factor of changes in input and output prices.
The volatility of these, probable values will make a bigger difference to financial decision makers. I recall having prepared a matrix for decision making in Layer Poultry Farming in 1981, based on price of eggs and price of feed. If based on trends we can forecast project performance based on extrapolated values it will mean much more.
To my mind the more glaring defect in IRR NPV analysis is assumption of opportunity cost of capital. Where leveraging is possible the IRR is worked out separately for the project as a whole and IRR for promoters equity separately. I would like to hear more on the subject.
regards
Ranganatha
ಮೊನ್ನೆ ಬೆಳಗ್ಗೆ ರಂಗನಾಥ ಹಾಗೇ ಹೃದಯಾಘಾತದಿಂದ ತೀರಿಕೊಂಡ ಸುದ್ದಿ ಕೇಳಿದಾಗ ಬಿಡದಿಯ ರಸ್ತೆಯಲ್ಲಿ ನನ್ನ ಕೆಲಸಕ್ಕೆ ಹೋಗುತ್ತಿದ್ದೆ. ಯಾಕೋ ಮನಸ್ಸೆಲ್ಲ ಕುಸಿದುಹೋಯಿತು. ಕಾಲೇಜಿಗೆ ಹೋಗಿ ಪ್ರಿನ್ಸಿಪಾಲರ ಬಳಿ ವಿಷಯ ಹೇಳಿಕೊಳ್ಳುವಾಗ ಕಣ್ಣುಗಳು ಹನಿಗೂಡಿದ್ದವು. ಹೇಗೋ ತಡೆದುಕೊಂಡೆ. ರಂಗನಾಥರ ಜೊತೆಗಿನ ಕ್ಷಣಗಳೆಲ್ಲ ದಾಳಿ ಇಡತೊಡಗಿದವು.
ಅವರೊಂದಿಗೆ ಕಳೆದ ಕ್ಷಣಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುವೆ. ನಿಜಕ್ಕೂ ನನಗೆ ರಂಗನಾಥರ ಬಗ್ಗೆ ಬ್ಲಾಗ್ ಬರೆಯುವ ಮನಸ್ಸಾಗುತ್ತಿದೆ.
ಓದುಗರೆ, ಅವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ನಾನು ಬರೆದ ನಾಗವೇಣಿ ಕಥೆಯನ್ನು ಓದಿ. ಆಮೇಲೆ ಮತ್ತೆ ಅವರೊಡನೆ ಕಳೆದ ದಿನಗಳನ್ನು ನನಗಾಗಿ, ನಿಮಗಾಗಿ ದಾಖಲಿಸುವೆ. ನಾಗವೇಣಿ ಕಲ್ಪಿತ ಪಾತ್ರ; ಆದರೆ ರಂಗನಾಥ ಮಾತ್ರ ನಿಜ.
ಮಿತ್ರ ಅನೂಪ ದೇಶಪಾಂಡೆಯವರು ಬರೆದ ರಂಗನಾಥರ ಮೇಲಿನ ಇನ್ನೊಂದು ಕುತೂಹಲಕರ ಬ್ಲಾಗ್ ಇಲ್ಲಿದೆ: