ಆಹಾರ ಮತ್ತು ವ್ಯಾಪಾರ ನೀತಿ ತಜ್ಞ ಶ್ರೀ ದೇವಿಂದರ್ ಶರ್ಮರವರ ಲೇಖನಗಳನ್ನು ಮಿತ್ರಮಾಧ್ಯಮವು ಇನ್ನುಮುಂದೆ ನಿಯಮಿತವಾಗಿ ಪ್ರಕಟಿಸಲಿದೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತದೆ.
ದಿಲ್ಲಿಯ ಫೋರಮ್ ಫಾರ್ ಬಯೋಟೆಕ್ನಾಲಜಿ ಎಂಡ್ ಫುಡ್ ಸೆಕ್ಯುರಿಟಿ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ದೇವಿಂದರ್ ಶರ್ಮ ಈ ಕುರಿತು ಮುಕ್ತ ಪ್ರಕಟಣೆಗೆ ಅನುಮತಿ ನೀಡಿದ್ದಾರೆ. ಈಗಾಗಲೇ ನಮ್ಮ ಹಿರಿಯ ಪತ್ರಕರ್ತ ಶ್ರೀ ನಾಗೇಶ ಹೆಗಡೆಯವರ ಲೇಖನಗಳನ್ನು ಓದುತ್ತಿರುವ ನೀವು ಶ್ರೀ ಶರ್ಮರವರ ಲೇಖನಗಳನ್ನೂ ಓದಿ, ಪ್ರತಿಕ್ರಿಯಿಸಿ ಎಂದು ವಿನಂತಿಸುತ್ತೇನೆ. ಲೇಖಕರ ಬ್ಲಾಗ್ ಇಲ್ಲಿದೆ: devinder-sharma.blogspot.com ಇಲ್ಲಿ ಅವರ ಇತರೆ ಲೇಖನಗಳನ್ನೂ ಓದಬಹುದು.
ಇಲ್ಲಿ ಅವರು ಬಿಟಿ ಬದನೆ ಬಗ್ಗೆ ಬರೆದ ಇತ್ತೀಚೆಗಿನ ಲೇಖನವನ್ನು ನೀಡಲಾಗಿದೆ. ಜನವರಿ ೨೩ರಂದು ಬೆಂಗಳೂರಿನಲ್ಲಿ ಬಿಟಿ ಬದನೆ ಕುರಿತ ಕೇಂದ್ರ ಸಚಿವ ಶ್ರೀ ಜಯರಾಂ ರಮೇಶ್‌ರವರ ಸಭೆಯ ಹಿನ್ನೆಲೆಯಲ್ಲಿ ಈ ಲೇಖನವು ಮಹತ್ವದ್ದಾಗಿದೆ.
– ಬೇಳೂರು ಸುದರ್ಶನ