ಕಳೆದ ವರ್ಷ ಸರಿಸುಮಾರು ಇದೇ ಸಮಯದಲ್ಲಿ ದೇಶದಲ್ಲೆಲ್ಲ ಬಿಟಿ ಬದನೆಯದೇ ಸುದ್ದಿ. ಬೆಂಗಳೂರಿನಲ್ಲೂ ಕೇಂದ್ರ ಸಚಿವ ಜೈರಾಂ ರಮೇಶ್ ಒಂದು ಸಾರ್ವಜನಿಕ ಸಮಾಲೋಚನೆ ನಡೆಸಿದರು. ಆ ಸಭೆಯಲ್ಲಿ ಮೊನ್ಸಾಂಟೋ ಕಂಪೆನಿಯ ಮಾಜಿ ಉನ್ನತ ಅಧಿಕಾರಿಯಿಂದ ಹಿಡಿದು ಮಾಜಿ ಪ್ರಧಾನಿ ದೇವೇಗೌಡರವರೆಗೆ, ಆಹಾರ ತಜ್ಞ ಡಾ|| ರಘುರಿಂದ ಹಿಡಿದು ಜ್ಞಾನಪೀಠ ಪುರಸ್ಕೃತ ಡಾ|| ಯು ಆರ್ ಅನಂತಮೂರ್ತಿಯವರೆಗೆ ಎಲ್ಲರೂ ಬಿಟಿ ಬದನೆಗೆ ವಿರೋಧ ವ್ಯಕ್ತಪಡಿಸಿದರು. ನಮ್ಮ ಮುಖ್ಯಮಂತ್ರಿ ಯೆಡ್ಯೂರಪ್ಪನವರೂ ಸದ್ಯಕ್ಕಂತೂ ಬಿಟಿ ಬದನೆಗೆ ರಾಜ್ಯದಲ್ಲಿ ಪ್ರವೇಶವಿಲ್ಲ ಎಂದರು.
ಈ ಹೋರಾಟದಲ್ಲಿ ನಾನೂ ನನ್ನ ಮಟ್ಟಿನ ಮಿತಿಯಲ್ಲಿ ಭಾಗವಹಿಸಿದ್ದೆ. ಆಮೇಲೆ ಜೈರಾಂ ರಮೇಶರೂ ಬಿಟಿ ಬದನೆಗೆ ಸದ್ಯ ಪ್ರವೇಶವಿಲ್ಲ, ಇನ್ನೂ ಅಧ್ಯಯನ ನಡೆಸಬೇಕು ಎಂದು ಅಧಿಕೃತವಾಗಿ ಪ್ರಕಟಿಸಿ ಜೀವವೈವಿಧ್ಯ ಉಳಿಸುವ ಕೆಲಸಕ್ಕೆ ಬೆಂಬಲವಾಗಿ ನಿಂತಿದ್ದರು.
ಆದರೆ ಈ ಒಂದು ವರ್ಷದಲ್ಲಿ ಏನೇನಾಗಿದೆ ಗೊತ್ತೆ?
ಬೆಳವಣಿಗೆ ಒಂದು: ಕುಲಾಂತರಿ ಬದನೆ ಕುರಿತು ಕೃತಿಚೌರ್ಯ ಮಾಡಿದ ಪ್ಯಾರಾಗಳನ್ನೇ ಪ್ರಕಟಿಸಿದ್ದ ಅಂತರ್- ಅಕಾಡೆಮಿ ಸಂಸ್ಥೆಯ ನಕಲು ವರದಿಗಿಂತ ಕೆಟ್ಟ ಮತ್ತು ಹಾಸ್ಯಾಸ್ಪದ ವರದಿಯನ್ನು ಪ್ರಕಟಿಸಿ ಕೈ ತೊಳೆದುಕೊಂಡಿದೆ. ಈಗಲೂ ಅದು ಬೀಜ ಕಂಪೆನಿಗಳ ಪರವಾಗಿಯೇ ತನ್ನ ವಾದವನ್ನು ಮಂಡಿಸಿದೆ ಎಂದು ಎಂ ಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್‌ನ ಫೆಲೋ ಆಗಿರುವ ಪಿ ಸಿ ಕೇಶವನ್ ಹೇಳುತ್ತಾರೆ. ವಿವರಗಳಿಗೆ ನೀವು ಡೌನ್ ಟು ಅರ್ಥ್ ಪತ್ರಿಕೆಯ ಈ ಕೊಂಡಿಯನ್ನು ಓದಿ. ಇದಕ್ಕಿಂತ ಕುಚೋದ್ಯದ, ಹಾಸ್ಯಾಸ್ಪದ ವರದಿ ಇನ್ನೊಂದಿಲ್ಲ ಎಂದು ಸೆಂಟರ್ ಫಾರ್ ಸೆಲ್ಯುಲಾರ್ ಎಂಡ್ ಮಾಲಿಕ್ಯುಲಾರ್ ಬಯಾಲಜಿಯ ಹಿಂದಿನ ನಿರ್ದೇಶಕ ಡಾ|| ಪುಷ್ಪ ಎಂ ಭಾರ್ಗವ ಹೇಳಿದ್ದಾರೆ.
ಈ ವರದಿಯಲ್ಲಿ ಎಲ್ಲಕ್ಕಿಂತ ಅಪಾಯಕಾರಿಯಾದ ಪ್ಯಾರಾ ಹೀಗಿದೆ: ಅಂದರೆ ಬಿಟಿ ಬದನೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಸೀಮಿತ ಅನುಮತಿ ನೀಡಬೇಕು ಎಂದು ಈ ವರದಿ ಶಿಫಾರಸು ಮಾಡಿದೆ.
“The overwhelming view is that the available evidence has shown, adequately and beyond reasonable doubt, that Bt brinjal is safe for human consumption and that its environmental effects are negligible,”
ಬೆಳವಣಿಗೆ ಎರಡು: ಫಿಲಿಪೈನ್ಸ್‌ನಲ್ಲಿ ಬಿಟಿ ಬದನೆಗೆ ನಿಷೇಧ
ಬಿಟಿ ಬದನೆಯ ಕ್ಷೇತ್ರ ಪ್ರಯೋಗವನ್ನು ಫಿಲಿಪೈನ್ಸ್ ಸರ್ಕಾರವು ನಿಷೇಧಿಸಿದೆ. ಇದು ಇದೇ ಜನವರಿ ೧೨ರ ಬೆಳವಣಿಗೆ. ಇದರಿಂದಾಗಿ ಬಿಟಿ ಪರ ಕಂಪೆನಿಗಳು ಈ ಕುರಿತು ಇನ್ನೂ ಆರು ತಿಂಗಳು ಕಾಯಬೇಕಿದೆ. ಫಿಲಿಪೈನ್ಸ್‌ನ ನಿರ್ಧಾರಕ್ಕೆ ಭಾರತವೂ ಬಿಟಿ ಬದನೆಯನ್ನು ನಿರ್ಬಂಧಿಸಿದ್ದೇ ಕಾರಣ ಎಂಬುದು ಇಲ್ಲಿ ಗಮನಾರ್ಹ.
ಬೆಳವಣಿಗೆ ಮೂರು: ಕುಲಾಂತರಿ ತಳಿಗಳನ್ನು ವಿರೋಧಿಸುತ್ತಿರುವ ಯೂರೋಪ್ ಸಮುದಾಯದ ಮೇಲೆ ಪ್ರತೀಕಾರ ಮಾಡಲು ಅಮೆರಿಕಾವು ಹವಣಿಸಿದ ಸುದ್ದಿಯನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ. ರಾಜಕೀಯ ಸಂಬಂಧಗಳ ಬಗ್ಗೆಯಷ್ಟೇ ವಿಕಿಲೀಕ್ಸ್ ಸುದ್ದಿ ಮಾಡಿದೆ ಎಂಬ ಭ್ರಮೆಯಿಂದ ನಾವು ಹೊರಗೆ ಬಂದರೆ ಈ ಸುದ್ದಿ ಅತ್ಯಂತ ಮುಖ್ಯವಾಗಿ ಕಾಣಿಸುತ್ತದೆ.
ಫ್ರಾನ್ಸ್ ದೇಶದೊಳಕ್ಕೆ ಕುಲಾಂತರಿಗಳನ್ನು ನುಗ್ಗಿಸಲು ಯತ್ನಿಸುತ್ತಿದ್ದ ಅಮೆರಿಕಾದ ರಾಯಭಾರಿ ಕ್ರೇಗ್ ಸ್ಟೇಪಲ್‌ಟನ್ ತನ್ನ ಒಂದು ತಂತಿ ಸಂದೇಶದಲ್ಲಿ ಹೀಗೆ ಬರೆದಿದ್ದಾನೆ:
“Europe is moving backwards not forwards on this issue with France playing a leading role, along with Austria, Italy and even the [European] Commission… Moving to retaliation will make clear that the current path has real costs to EU interests and could help strengthen European pro-biotech voice.”
“Country team Paris recommends that we calibrate a target retaliation list that causes some pain across the EU since this is a collective responsibility, but that also focuses in part on the worst culprits. The list should be measured rather than vicious and must be sustainable over the long term, since we should not expect an early victory…”
ಅಂದರೆ ಯುದ್ಧ ಸಂದರ್ಭದಲ್ಲಿ ಬಳಸುವ ಪದಗಳನ್ನು ಕುಲಾಂತರಿ ತಳಿಗಳ ಪರವಾಗಿ ಬಳಸಿದ್ದಾನೆ! ಇಂಥ ಹೂಟವನ್ನು ಒಂದು ವದಂತಿ ಎಂದು ಹೇಳುತ್ತಿರುವವರು ಈಗಲಾದರೂ ಅಮೆರಿಕಾವು ಕುಲಾಂತರಿ ತಳಿಗಳ ಬಗ್ಗೆ ಹೊಂದಿರುವ ಪ್ರೀತಿ ಮತ್ತು ವ್ಯಾಮೋಹವನ್ನು ಅರಿಯಬೇಕು.
ಬೆಳವಣಿಗೆ ನಾಲ್ಕು: ಕರ್ನಾಟಕದಲ್ಲಿ ಮತ್ತಿಷ್ಟು ಕುಲಾಂತರಿ ತಳಿಗಳ ಪ್ರಯೋಗ ನಡೆದಿದೆ!
ಹೌದು. ಕಳೆದ ನವೆಂಬರಿನಲ್ಲಿ (೧೫.೧೧.೨೦೧೦) ಕುಲಾಂತರಿ ತಳಿಗಳ ಪ್ರಯೋಗಗಳಿಗೆ ಅನುಮತಿ ನೀಡುವ ಜಿ ಇ ಎ ಸಿ ಎಂಬ ಸಮಿತಿಯು ಬೇಯರ್ ಮತ್ತು ಮೊನ್ಸಾಂಟೋ ಕಂಪೆನಿಗಳಿಗೆ ರಾಜ್ಯದ ಹಲವೆಡೆ ಬಿಟಿ ಮುಸುಕಿನ ಜೋಳವನ್ನು ಮತ್ತು ಭತ್ತಯನ್ನು ಬೆಳೆಯಲು ಅನುಮತಿ ನೀಡಿದೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ, ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ತಲಾ ಒಂದೆಕರೆ ಕೃಷಿ ಭೂಮಿಯಲ್ಲಿ ಬಿಟಿ ಮುಸುಕಿನ ಜೋಳವನ್ನು ಬೀಜೋತ್ಪಾದನೆಗಾಗಿ ಬೆಳೆಯಲು ಜಿ ಇ ಎ ಸಿ ಯು ಮೊನ್ಸಾಂಟೋ ಕಂಪೆನಿಗೆ ಅನುಮತಿ ನೀಡಿದೆ. ಈ ಕುರಿತ ನಿರ್ಣಯದ ಭಾಗ ಹೀಗಿದೆ:
5.5 Permission to conduct BRL-II trials on two transgenic corn hybrids containing stacked cry2Ab2, cry1A.105 (Event MON 89034) & cp4epsps (Event NK603) genes at nine locations during Rabi 2010-2011 by M/s. Monsanto India Ltd., New Delhi.
5.5.1 The Committee considered the request of M/s. Monsanto India Ltd., New Delhi to conduct BRL-II trials with two transgenic corn hybrids namely 900M Gold and Hishell, containing stacked cry2Ab2, cry1A.105 (Event MON 89034) & cp4epsps (Event NK603) genes at nine locations namely BHU Varanasi, UP; Begusarai Bihar; Bhagalpur Bihra; TNAU Coimbatore; UAS Dharwad; ANGRAU Karimnagar; MPUAT Udaipur; AAU Vadodara and DWSR Jabalpur MP. The applicant has also sought approval for seed production in an area of 1.00 acre each at two locations in Karnataka viz. Kunigal (Taluk) Tumkur (Dist), Karnataka and Sindagi (Taluk), Bijapur (Dist), Karnataka during Rabi 2010-11.
ಹಾಗೆಯೇ ದಾವಣಗೆರೆಯಲ್ಲಿ ಕೂಡಾ ಮುಸುಕಿನ ಜೋಳವನ್ನು ಬೆಳೆಯಲು ಮೊನ್ಸಾಂಟೋಗೆ ಅನುಮತಿ ನೀಡಲಾಗಿದೆ.
5.6 Permission to conduct Insect Resistance Management (IRM) trials for ascertaining refuge strategy for transgenic corn hybrids containing stacked cry2Ab2, cry1A.105 (Event MON 89034) & cp4epsps (Event NK603) genes at six locations by M/s. Monsanto India Ltd., New Delhi.
5.6.1 The Committee considered the request of M/s. Monsanto India Ltd., New Delhi to conduct Insect Resistance Management (IRM) trials for ascertaining refuge strategy for transgenic corn hybrids containing stacked cry2Ab2, cry1A.105 (Event MON 89034) & cp4epsps (Event NK603) genes at six locations namely: (i) Begusarai Bihar, (ii) Bhagalpur Bihar, (iii) Aurangabad Monsanto Farm, (iv) Coimbatore Tamilnadu (v) Davangere Karnataka and (vi) Warangal AP. 5.6.2 The Committee noted the objectives of the IRM trials is to: (i) establish baseline information on the occurrence of arthropod species in Bt maize field plots–MON89034 x NK603 vis-à-vis MON89034 x NK603 with 5%, 10%, 15% and 20% NK603 seed mix; (ii) quantify yield loss in Bt maize field plots–MON89034 x NK603 vis-à-vis MON89034 x NK603 with 5%, 10%, 15% and 20% NK603 seed mix.
ಇದಲ್ಲದೆ ದಾವಣಗೆರೆಯಲ್ಲೇ ಬೇಯರ್ ಬಯೋಸೈನ್ಸ್ ಸಂಸ್ಥೆಯು ಭತ್ತದ ಬೆಳೆಗಳನ್ನು ಬೆಳೆಸಲು ಅನುಮತಿ ನೀಡಿದೆ. ಈ ಕುರಿತ ನಿರ್ಣಯ ಇಲ್ಲಿದೆ:
5.1 Permission to conduct event selection trials on 34 transgenic rice events by M/s. Bayer Bio Science Pvt. Ltd., Gurgaon.
5.1.1 The Committee considered the request M/s. Bayer Bio Science Pvt. Ltd., Gurgaon to conduct event selection trials on transgenic rice events RICE 1502, RICE 1503, RICE 1504, RICE 1507, RICE 1515, RICE 1526, RICE 1551, RICE 1552, RICE 1557, RICE 1558, RICE 1576, RICE 2112, RICE 3130, RICE 3315, RICE 3316, RICE 3403, RICE 3405, RICE 3406, RICE 3407, RICE 3411, RICE 3413, RICE 3432, RICE 3435, RICE 3436, RICE 3437, RICE 3438, RICE 3439, RICE 3441, RICE 3442, RICE 3447, RICE 3449, RICE 3451, RICE 3457 and LLRICE62 containing cry1Ab, cry1Ca and bar genes. The trials will be conducted at two locations namely within the institution farm at Crop Development Centre, Patancheru in an area of 3000 sq. meter and Bayer Bioscience Pvt. Ltd., Davangere, Karanataka in an area of 1500 sq m, during Rabi 2010-11.
5.1.2 The Committee noted the purpose of the trials is to evaluate (i) The Bt events in comparison to non-transformed genotype for phenotypic assessment; (ii) Insect Bio-efficacy – Insect resistance against Pink Stem Borer (Sesamia inferens L.) under artificial infestation conditions ; (iii)Testing Bt rice events for flowering synchronization with the female rice line line; (iv) Herbicide tolerance of the plant against Glufosinate ammonium herbicide. Study the effect of Bt rice events on trait performance in hybrid background.
ದೇಸಿ ತಳಿಗಳ ನಡುವೆ, ಯಾರಿಗೂ ಗೊತ್ತಿಲ್ಲದೆ ಬಿಟಿ ತಳಿಗಳ ಬಗ್ಗೆ ಪ್ರಯೋಗ ನಡೆಯುವುದೇ ಅಪಾಯಕಾರಿ. ಆದ್ದರಿಂದ ಇವನ್ನೆಲ್ಲ ಹೀಗೇ ಒಪ್ಪಿಕೊಂಡರೆ ಅಪಾಯ ತಪ್ಪಿದ್ದಲ್ಲ. ನಮ್ಮ ಸರ್ಕಾರವು ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂಬುದಷ್ಟೇ ಈ ಹೊತ್ತಿನ ಮನವಿ.