ನನ್ನ ಗೆಳೆಯ ಕಲಾವಿದ ಬಿ. ದೇವರಾಜ್‌ನ ಮಗ ಸಿದ್ಧಾರ್ಥ. ಅವನೀಗ ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ. ಸದಾ ನಗುಮುಖದಲ್ಲೇ ನಮ್ಮನ್ನು ಮಾತಾಡಿಸುವ ಸಿದ್ಧಾರ್ಥನದು ಬುದ್ಧನಂಥ ಮುಗ್ಧ ಮನಸ್ಸು.
ಕಳೆದ ವಾರ ದೇವರಾಜನನ್ನು ಮಾತಾಡಿಸಲೆಂದು ಅವನ ಮನೆಗೆ ಹೋಗಿದ್ದೆ. ಮನೆಯಲ್ಲೆ ತೂಗು ಹಾಕಿದ್ದ ಕಲಾಕೃತಿಗಳು ಗಮನ ಸೆಳೆದವು. ಆಮೇಲೆ ಗೊತ್ತಾಗಿದ್ದು, ಅವೆಲ್ಲ ದೇವರಾಜನದಲ್ಲ, ಅವನ ಮಗ ಸಿದ್ಧಾರ್ಥನದು!
ದಿನಾಲೂ ಕಲಾಕೃತಿಗಳನ್ನು ರಚಿಸುವುದರಲ್ಲಿ ಆಸಕ್ತಿ ತೋರುವ, ದೇವರಾಜನೂ ಬಳಸದ ಬಣ್ಣ ಸಂಯೋಜನೆಯನ್ನು ಬಳಸುವ ಸಿದ್ಧಾರ್ಥನ ಕಲಾಕೃತಿಗಳನ್ನು ನಿಮಗಾಗಿ ಇಲ್ಲಿ ಪ್ರಕಟಿಸಿರುವೆ.