ತದಡಿಯ ಶಾಂತ ಸಮುದ್ರತಟವನ್ನು ಕದಡುವ ಸಂಚುಗಳಿಗೆ ಮತ್ತೆ ಬಲ ಬಂದಿದೆ. ಮೊದಲು ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ಬರುವ ಭೀತಿಯಿತ್ತು. ದೊಡ್ಡ ಬಂದರು ನಿರ್ಮಾಣದ ಭೀತಿಯಿತ್ತು. ಈಗ ‘ಶುದ್ಧಾತಿಶುದ್ಧ ಯೋಜನೆ’ಯ ಹೆಸರಿನಲ್ಲಿ ನೈಸರ್ಗಿಕ ಅನಿಲ ಆಧಾರಿತ ೨೧೦೦ ಮೆಗಾವಾಟ್‌ಗಳ ವಿದ್ಯುತ್ ಸ್ಥಾವರ ಬರುವ ಭೀತಿ ನಿಜವಾಗತೊಡಗಿದೆ.
ಮುಖ್ಯಮಂತ್ರಿ ಯಡ್ಯೂರಪ್ಪನವರೇ ಅಧ್ಯಕ್ಷರಾಗಿರುವ ರಾಜ್ಯ ಉನ್ನತ ಮಟ್ಟದ ಸಮಿತಿಯ ಆಗಸ್ಟ್ ೩೧ರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ‘ತದಡಿಯಲ್ಲಿ ಶುದ್ಧ ಇಂಧನ ಯೋಜನೆ’ ಕೈಗೆತ್ತಿಕೊಳ್ಳಬೇಕೆಂಬ ಸದುದ್ದೇಶದಿಂದ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪಿಸಲು ಕೆ ಪಿ ಸಿ ಎಲ್ ನಿರ್ಧರಿಸಿತು’ ಎಂದು ಅದರ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್ ಎಂ ಜಮಾದಾರ್ ತಿಳಿಸಿದ್ದಾರೆ.
ಈ ಬದಲಿ ಸ್ಥಾವರಕ್ಕೆ ಬೇಕಾಗಿರೋದು ಕೇವಲ ೪೦೦ ಎಕರೆ ಜಾಗ. ೭೦೦ ಮೆಗಾವಾಟ್‌ಗಳ ಮೂರು ಸ್ಥಾವರಗಳನ್ನು ಸ್ಥಾಪಿಸಿ ೨೧೦೦ ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಬೇಕಾದ ಅನಿಲವನ್ನು ಪೂರೈಸಲು ಪೆಟ್ರೋನೆಟ್ ಮುಂತಾದ ಸಂಸ್ಥೆಗಳು ಮುಂದೆ ಬಂದಿವೆಯಂತೆ. ಎಲ್ ಎನ್ ಜಿ (ದ್ರವೀಕೃತ ನೈಸರ್ಗಿಕ ಅನಿಲ, ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್) ಪೂರೈಕೆಗೆ ಮತ್ತು ಅದನ್ನು ಅನಿಲವಾಗಿ ಪರಿವರ್ತಿಸುವ ಕೆಲಸ ಮಾಡುವ ಸಂಸ್ಥೆಗಳಿಗಾಗಿ ಎಕ್ಸ್‌ಪ್ರೆಶನ್ ಆಫ್ ಇಂಟರೆಸ್ಟ್ (ಆಸಕ್ತಿ ಅಭಿವ್ಯಕ್ತಿ) ಪ್ರಕಟಣೆಯನ್ನು ಇನ್ನೊಂದೇ ವಾರದಲ್ಲಿ ಹೊರಡಿಸಲಾಗುವುದಂತೆ.
ವಿಚಿತ್ರ! ಈ ಸ್ಥಾವರವು ಶಾಖೋತ್ಪನ್ನ ವಿದ್ಯುತ್‌ಸ್ಥಾವರದ ಬದಲಿ ಎಂಬಂತೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದೆ. ಆದರೆ ಗೊತ್ತಿರಲಿ, ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್‌ಸ್ಥಾವರಗಳೂ ಶಾಖೋತ್ಪನ್ನ ಸ್ಥಾವರಗಳ ಸಾಲಿಗೇ ಸೇರುತ್ತವೆ, ಕಲ್ಲಿದ್ದಲಿನಂತೆ. ಆದರೆ ಪತ್ರಿಕಾ ವರದಿಗಳನ್ನು ನೋಡಿದರೆ ‘ಆಹಾ. ಏನಿದು, ಎಂಥ ಕೂಲ್ ಪ್ರಾಜೆಕ್ಟ್’ ಅನ್ನೋ ಭ್ರಮೆ ಹುಟ್ಟಿದರೆ ಅಚ್ಚರಿಯಿಲ್ಲ. ನೈಸರ್ಗಿಕ ಅನಿಲ ಎಂದಕೂಡಲೇ ನಿಸರ್ಗಕ್ಕೆ ಹತ್ತಿರ ಎಂದು ತಿಳಿದುಕೊಳ್ಳುವ ಪ್ರಮೇಯವೂ ಇದೆ!
ಇನ್ನು ಶುದ್ಧಾತಿಶುದ್ಧ ಯೋಜನೆ ಎಂಬ ಕಣ್ಕಟ್ಟಿಗೆ ಏನು ಹೇಳಬೇಕು? ಈ ಯೋಜನೆಯು ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಸ್ಥಾವರಕ್ಕಿಂತ ಕಡಿಮೆ ತ್ಯಾಜ್ಯವನ್ನು ಉಗುಳಬಹುದೇನೋ.. ಆದರೆ ಇದೂ ಪಶ್ಚಿಮಘಟ್ಟದ ಉಸಿರುಗಟ್ಟಿಸುವುದಕ್ಕೆ ಬೇಕಾದ ಎಲ್ಲ ಪದಾರ್ಥಗಳನ್ನೂ ಹೊಂದಿದೆ. ಆದ್ದರಿಂದ ಇದೊಂದು ಮಾರಕ, ಘಾತಕ ಯೋಜನೆಯೇ ಹೌದು. ಈ ಯೋಜನೆಯೂ ಹೇಗೆ ಪರಿಸರನಾಶಕ, ಘೋರ ಮತ್ತು ಜನಘಾತಕ ಎಂದು ತಿಳಿದುಕೊಳ್ಳಲು ತುಂಬಾ ಕಷ್ಟಪಡಬೇಕಿಲ್ಲ. ಶುದ್ಧಾತಿಶುದ್ಧ ಇಂಧನ ಎನ್ನುವುದೆಲ್ಲ ಶುದ್ಧಾತಿಶುದ್ಧ ಸುಳ್ಳು.
ವಾಸ್ತವ ೧: ನೈಸರ್ಗಿಕ ಅನಿಲವೂ ವಿಷದ ಹೊಗೆ ಉಗುಳುತ್ತದೆ.
ನೈಸರ್ಗಿಕ ಅನಿಲವನ್ನು ಉರಿಸಿ ವಿದ್ಯುತ್ ಉತ್ಪಾದಿಸಿದಾಗಲೂ ಇಂಗಾಲದ ಡೈಯಾಕ್ಸೈಡ್ ಹೊರಸೂಸುತ್ತದೆ; ಕಲ್ಲಿದ್ದಲು ರಾಚುವ ಪ್ರಮಾಣಕ್ಕಿಂತ ಶೇ. ೪೫ರಷ್ಟು ಕಡಿಮೆ, ಅಷ್ಟೆ. ಅಂದರೆ, ಬದಲಿ ಸ್ಥಾವರದಿಂದ ೧೫೦ ಲಕ್ಷ ಟನ್‌ಗಳಷ್ಟು ಇಂಗಾಲದ ಡೈಯಾಕ್ಸೈಡ್ ಉತ್ಪಾದನೆಯಾಗುತ್ತದೆ. ಇದೇನು ಕಡಿಮೆಯಲ್ಲ. ಇದನ್ನು ಸೀದಾ ಪಶ್ಚಿಮಘಟ್ಟದ ಬುಡಕ್ಕೇ ಹಾಯಿಸುವುದರಿಂದ ಪರಿಸರ ರಕ್ಷಣೆ ಎಲ್ಲಿ ಬಂತು?
ಯಾವುದರಿಂದ ಎಷ್ಟು ತ್ಯಾಜ್ಯ ಹೊರಬೀಳುತ್ತದೆ ಎಂಬುದಕ್ಕೆ ಈ ಕೋಷ್ಟಕ ನೋಡಿ:
Fossil Fuel Emission Levels– Pounds per Billion Btu of Energy Input |
|||
Pollutant | Natural Gas | Oil | Coal |
Carbon Dioxide | 117,000 | 164,000 | 208,000 |
Carbon Monoxide | 40 | 33 | 208 |
Nitrogen Oxides | 92 | 448 | 457 |
Sulfur Dioxide | 1 | 1,122 | 2,591 |
Particulates | 7 | 84 | 2,744 |
Mercury | 0.000 | 0.007 | 0.016 |
Source: EIA – Natural Gas Issues and Trends 1998 |
ನೈಸರ್ಗಿಕ ಅನಿಲದಲ್ಲಿ ಇರುವ ಮೀಥೇನ್ ಒಂದು ಕಟು ಗ್ರೀನ್‌ಹೌಸ್ ಗ್ಯಾಸ್ (ಶಾಖವನ್ನು ಹಿಡಿದಿಟ್ಟುಕೊಂಡು ಭೂಮಿಯ ತಾಪಮಾನವನ್ನು ಹೆಚ್ಚಿಸುವ ಅನಿಲ) ಎಂದೇ ಕುಪ್ರಸಿದ್ಧವಾಗಿದೆ. ಕಾರ್ಬನ್ ಡೈಯಾಕ್ಸೈಡ್‌ಗಿಂತ ಮೀಥೇನ್‌ಗೆ ಹೀಗೆ ಶಾಖವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ೨೧ ಪಟ್ಟು ಹೆಚ್ಚು. ಹೀಗೆಂದು ಅಧಿಕೃತ ವರದಿಗಳೇ ಹೇಳಿವೆ:
One issue that has arisen with respect to natural gas and the greenhouse effect is the fact that methane, the principle component of natural gas, is itself a very potent greenhouse gas. In fact, methane has an ability to trap heat almost 21 times more effectively than carbon dioxide. According to the Energy Information Administration, although methane emissions account for only 1.1 percent of total U.S. greenhouse gas emissions, they account for 8.5 percent of the greenhouse gas emissions based on global warming potential.
ಆಸಿಡ್ ಮಳೆಯಾಗಲೀ, ದಟ್ಟ ಹೊಗೆಯಾಗಲೀ, ಗಾಳಿಯ ಗುಣಮಟ್ಟವಾಗಲೀ – ಯಾವುದೂ ನೈಸರ್ಗಿಕ ಅನಿಲದ ಬಳಕೆಯಿಂದ ನಿಲ್ಲುವುದಿಲ್ಲ; ಪ್ರಮಾಣದಲ್ಲಿ ಇಳಿಕೆ ಇರಬಹುದಷ್ಟೆ. ಪ್ರಮಾಣ ಎಷ್ಟಿದ್ದರೇನು, ಆಮ್ಲ ಮಳೆಯಿಂದ ಉಂಟಾಗುವ ಅಪಾಯ ತಪ್ಪಿದ್ದಲ್ಲ.
ವಾಸ್ತವ ೨: ನೈಸರ್ಗಿಕ ಅನಿಲ ದುಬಾರಿ ಮತ್ತು ಆಮದು ಮಾಡಿಕೊಳ್ಳಬೇಕಾದ ಕಚ್ಚಾವಸ್ತು
ಹೌದು…. ಭಾರತವು ೨೦೦೩ರಿಂದ ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವ ದುರವಸ್ಥೆಗೆ ತಲುಪಿದೆ. ಈ ಬಗ್ಗೆ ಇಲ್ಲಿರುವ ಏರುಗತಿಯ ನಕಾಶೆಯನ್ನೇ ನೋಡಿ. ಈಗೇನೋ ನೈಸರ್ಗಿಕ ಇಂಧನದ ಬೆಲೆ ಇಳಿಯುತ್ತಿರಬಹುದು; ಅದೇನು ಖಾಯಮ್ಮಾಗಿ ಕಡಿಮೆಯಾಗುವುದಿಲ್ಲ. ಬಳಕೆ, ಅಗತ್ಯ ಹೆಚ್ಚುತ್ತಲೇ ಇರುತ್ತದೆ. ಆದ್ದರಿಂದ ನೈಸರ್ಗಿಕ ಅನಿಲವನ್ನು ಎಷ್ಟೆಂದು ಬಳಸುತ್ತಾರೆ, ಹೇಗೆ ಅಗ್ಗದ ವಿದ್ಯುತ್ ಉತ್ಪಾದಿಸುತ್ತಾರೆ, ಹೇಗೆ ಕಚ್ಚಾ ಮಾಲಿನ ನಿರಂತರ ಹರಿವನ್ನು ಕಾಪಾಡಿಕೊಳ್ಳುತ್ತಾರೆ – ಎಲ್ಲವೂ ಪ್ರಶ್ನೆಗಳೇ. ಮುಂದೊಂದು ದಿನ ಈ ಅನಿಲವೇ ಬರದೇ ಹೋದರೆ, ತದಡಿ ಒಂದು ರಣಗುಡುವ ಸ್ಮಶಾನದಂತೆ ಕಾಣಿಸುತ್ತದೆ. ಪಶ್ಚಿಮಘಟ್ಟದ ಮಡಿಲಲ್ಲಿ ಮಾಯಲಾರದ ವ್ರಣವಾಗುತ್ತದೆ.
ವಾಸ್ತವ ೩: ನೈಸರ್ಗಿಕ ಅನಿಲ ಸ್ಥಾವರವೂ ತದಡಿಯನ್ನು ಮಟ್ಟಸ ಮಾಡುತ್ತದೆ
ಈ ಸ್ಥಾವರದಿಂದಲೂ ತದಡಿಯ ಜನಜೀವನ ಉಧ್ವಸ್ತವಾಗುತ್ತದೆ. ಈ ಸ್ಥಾವರಕ್ಕೂ ಕಲ್ಲಿದ್ದಲು ಆಧಾರಿತ ಸ್ಥಾವರದ ಹಾಗೆಯೇ ಜಾಗ ಬೇಕು, ಸಿಬ್ಬಂದಿಗಳಿಗಾಗಿ ಟೌನ್‌ಶಿಪ್ ಕಟ್ಟಬೇಕು. ಕನ್ನಡನಾಡಿನವರಲ್ಲದ ತಜ್ಞರು, ಇಂಜಿನಿಯರುಗಳು ಬರಬೇಕು, ರಕ್ಕಸಗಾತ್ರದ ಪೈಪುಗಳನ್ನು ಉದ್ದುದ್ದ ಹಾಸಬೇಕು; ಒಟ್ಟಾರೆ ಈಗಿನ ತದಡಿಯನ್ನು ಮಟ್ಟಸ ಮಾಡಬೇಕು. ತದಡಿಯ ಜನರಿಗೆ ಈ ಸ್ಥಾವರದಲ್ಲಿ ಒಂದೂ ಕೆಲಸ ಸಿಗುವುದಿಲ್ಲ. ಮೀನುಗಾರರು ಗುಳೆ ಎದ್ದುಹೋಗಬೇಕು. ಚಿಪ್ಪು ಉದ್ಯಮದವರಿಗೆಲ್ಲ ಚಿಪ್ಪೇ ಗತಿ! ಇನ್ನು ಕಲ್ಲಿದ್ದಲಿನ ಸ್ಥಾವರದ ಹಾಗೆಯೇ ಕಾರ್ಬನ್ ಕ್ಯಾಪ್ಚರಿಂಗ್‌ನಿಂದ ಹಿಡಿದು ಉಳಿದೆಲ್ಲ ಸಮಸ್ಯೆಗಳೂ ಹಾಗೆಯೇ ಉಳಿದುಕೊಳ್ಳುತ್ತವೆ. (ವಿವರಗಳಿಗೆ ನಾನು ಈ ಹಿಂದೆ ಬರೆದ ತದಡಿ ಯು ಎಂ ಪಿ ಪಿ ಅಧ್ಯಯನ ವರದಿಯನ್ನು ಇಲ್ಲಿ ಓದಿ)
ವಾಸ್ತವ ೪ : ಈ ಯೋಜನೆಯಲ್ಲೂ ಸಾಕಷ್ಟು ನಿಗೂಢತೆ
ಈ ಯೋಜನೆಗೆ ಅನಿಲವನ್ನು ಪೂರೈಸುವವರು ಯಾರು? ಯೋಜನೆಗೆ ಸಂಪೂರ್ಣಹಣ ಹಾಕುವವರು ಯಾರು? ಈ ಯೋಜನೆಯ ಬಗ್ಗೆ ಪರಿಸರ ಪರಿಣಾಮ ವರದಿ ಸಿದ್ಧವಾಗಿದೆಯೆ? ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಅನುಮತಿಯನ್ನು ಪಡೆಯದೆಯೇ ಈ ಯೋಜನೆಯನ್ನು ತರಾತುರಿಯಲ್ಲಿ ತರುವುದಕ್ಕೆ ಹೊರಟ ಉದ್ದೇಶವೇನು? ಒಂದೇ ವಾರದಲ್ಲಿ ನೈಸರ್ಗಿಕ ಅನಿಲ ಪೂರೈಕೆದಾರರಿಗಾಗಿ ಪ್ರಕಟಣೆ ಹೊರಡಿಸುವ ಆತುರವೇಕೆ?
ಈ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರ ಕೊಡಬೇಕಿದೆ.
ವಾಸ್ತವ ೫: ಇದು ಜನರ, ಪರಿಸರ ಹೋರಾಟಗಾರರ, ಧಾರ್ಮಿಕ ಮುಖಂಡರ ಹಾದಿ ತಪ್ಪಿಸುವ ಹೇಳಿಕೆ
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರವೂ ಶಾಖೋತ್ಪನ್ನ (ಥರ್ಮಲ್) ಸ್ಥಾವರವೇ ಆಗಿದ್ದರೂ ಅದನ್ನು ಥರ್ಮಲ್ ಅಲ್ಲ ಎಂದು ಬಿಂಬಿಸುವ ಒಂದು ದೊಡ್ಡ ಯತ್ನ ಇಲ್ಲಿ ನಡೆದಿದೆ. ಇದೇನು ಒಂದು ಪರಿಸರ ಸ್ನೇಹಿ ಯೋಜನೆ ಎಂದೆಲ್ಲ ಅಧಿಕಾರಿಗಳು ಹೇಳುತ್ತಿದ್ದಾರೆ. ಇದೆಲ್ಲವೂ ಪರಿಸರ ಹೋರಾಟವನ್ನು ಹಾದಿ ತಪ್ಪಿಸುವ ಯತ್ನ. ಈ ಯೋಜನೆಯು ಬಂದಿದ್ದೇ ಆದರೆ, ಕಲ್ಲಿದ್ದಲು ಆಧಾರಿತ ಯೋಜನೆಗಿಂತ ಕಡಿಮೆ ಅಪಾಯವೇನೂ ಆಗುವುದಿಲ್ಲ.
——————————————————————————————-
The following comments were made as the initial reaction from Shri Shankar Sharma, an expert on power projects, with 28 years of experience in the field:
-
The proposed generating capacity and the land area required is expected to be about half that of the earlier proposed coal based UMPP.
-
The gas based power station may be less polluting but in the context of ecological impact on the highly valuable estuary of Aghanashini river and Global Warming we can say that it is not inconsiderable.
-
The undersea piping system to carry the large amount of gas from the Tadadi port to the plant area (as proposed), the huge plant structures/buildings to store gas, to burn it and to generate power, the township to accommodate the staff, the transmission lines, the associated support base etc. will all have a combined deleterious impact on the local environment and also on the people.
-
It will require considerable quantity of fresh water for its plants.
-
The transmission lines will invariably have to cross the thick Western Ghats to reach the load centres at Bangalore, Mysore etc. This will lead to forest cutting for hundreds of kM.
-
The burning of large quantity of gas will increase the atmospheric temperature; will affet the birds and insects;The locals, especially the fishermen, will be prevented from accessing substantial parts of the estuary.
-
The whole project will certainly have some deleterious impact on marine creatures.
-
It is importnat to note that the project proponent, KPCL, has mentioned to the govt. that the employment opportunities from the proposed plant is zero, as reported in papers. So what are the benefits for the people of the district, which will have to bear so many burdens ?
-
The press release says that KPCL will spend Rs. 400 crores on the propject. Who will invest the remaining money; a private party? The project may need about Rs. 8,000 to 10,000 Crores in total excluding the gas contract.
-
Additional impact of such a large gas based power plant (probably the biggest in the country as of now) will be clearer through a study of such plants in other coastal plants of the country.
-
The important question is whether we need such a high impact power plant. The society needs to seek answers to many relevant questions:
-
Whether the existing electricity infrastructure is optimally used? Can we improve the efficiency of the existing system? Are there any other benign alternatives to meet our electricity demand? whether Uttara Kannada needs another such “developmental project”?
-
What is the guarantee that gas will be available for the life time (about 25 years) of the project? In view of the difficuties faced by the existing gas power stations of NTPC it is doubtful whether there will be satisfactory supply of gas. If importing reliable gas were to be so easy why other states or NTPC have not done so far?
-
-
It appears that the main factors which have been considered while making this proposal are: that the state govt. do not want to be seen as loosing face because of the strong opposition to the coal based project at Tadadi; due to bankruptsy of ideas the state cannot come up with any environmentally friendly proposal to make use of the 1,300 acres of KIADB acquired land near Tadadi; it appears that no objective study has been made on the proposal; KPCL is known to have made such proposals in a hurry in the past also without taking all things into account.
-
Whatever may be the reasons behind the scene it is clear that another important decision has to be taken by the people of Uttara Kannada district: whether they need such a plant with no employment opportunity or direct economic benefits to its people but with lot of burdens OR a clean green and rich environment.
-
The learned people of the district should meet early and take all things into account before making a decision whether to support the project or oppose the project. I also suggest that the actual environmental impact assessment of such a gas power station in another coastal location in the country (probably on Maharastra coast) is done uregntly to know more about these plants.
-
How can KPCL go from gas contract, without environmental clearence from MoEF ? What happens if the environmental clearence is not accorded? Has the state govt. been assured of environmental clearence even before a formal application is made? How can KPCL be confident about the environmental clearence and the project feasibility without a detailed project report (DPR). If DPR is already prepared ask for a copy of it. The minister, in a press conference the other day, has stated that the decision has been taken only after a detailed study. Where is that study?
——————————————————————————————-
ಪರಿಸರ ಹೋರಾಟಗಾರರು ಈ ಬದಲಿ ಯೋಜನೆಯನ್ನು ಒಪ್ಪಿಕೊಂಡೇ ಬಿಟ್ಟಿದ್ದಾರೆ ಎಂಬರ್ಥ ಬರುವ ಸುದ್ದಿಗಳು ಈಗ ಪತ್ರಿಕೆಗಳಲ್ಲಿ ಬರುತ್ತಿವೆ. ಆದರೆ ಯೋಜನೆಯ ಒಟ್ಟಾರೆ ಪರಿಣಾಮ ಕಲ್ಲಿದ್ದಲು ಯೋಜನೆಯಷ್ಟೇ ಘಾತಕವಾದದ್ದು ಎಂಬುದರಲ್ಲಿ ಅನುಮಾನವೇ ಇಲ್ಲವಲ್ಲ…. ಹಾಗಿದ್ದೂ ಯೋಜನೆಯನ್ನು ಪರಿಸರ ಸ್ನೇಹಿ ಯೋಜನೆ ಎಂದು ಬಣ್ಣಿಸುವುದು ಎಷ್ಟು ಸರಿ? ಹೀಗೆ ಬಿಂಬಿಸುವುದು ಒಂದು ಅಪರಾಧವೇ ಆಗುತ್ತದೆ.
ಉತ್ತರ ಕನ್ನಡ ಜಿಲ್ಲೆಗೆ ಇಂಥ ಯಾವ ಯೋಜನೆಯೂ ಬೇಕಿಲ್ಲ. ಜಿಲ್ಲೆಯ ಜನರು ತಮ್ಮ ಬದುಕು, ಪರಂಪರೆ, ಸಂಸ್ಕೃತಿ, ಪರಿಸರ, ಸ್ನೇಹ – ಸಂಬಂಧ ಎಲ್ಲವನ್ನೂ ಬಲಿ ಕೊಟ್ಟು ಗುಳೆ ಎದ್ದುಹೋಗುವಂತೆ ಮಾಡುವ ಈ ಯೋಜನೆಯನ್ನು ಬುಡಮಟ್ಟದಲ್ಲೇ ವಿರೋಧಿಸಬೇಕಾದ್ದು ಉತ್ತರಕನ್ನಡದ್ದಷ್ಟೇ ಅಲ್ಲ, ಕರ್ನಾಟಕದ ಎಲ್ಲ ಜನಪರ ನಾಗರಿಕರ ಆದ್ಯತೆಯಾಗಬೇಕು.
ಈವರೆಗೆ ಸ್ವಾಮೀಜಿಗಳು ಯು ಎಂ ಪಿ ಪಿ ಯೋಜನೆಯನ್ನು ಹೇಗಾದರೂ ಕೈಬಿಡಿಸೋಣ ಎಂದುಕೊಂಡಿದ್ದರು. ಈಗ ನೈಸರ್ಗಿಕ ಅನಿಲ ಆಧಾರಿತ ಥರ್ಮಲ್ ಸ್ಥಾವರ ಬರುತ್ತಿದೆ. ಇದನ್ನೂ ಸ್ವಾಮೀಜಿಗಳೆಲ್ಲರೂ ಸೇರಿ ವಿರೋಧಿಸಬೇಕು.
ಸ್ವರ್ಣವಲ್ಲೀ ಶ್ರೀಗಳಲ್ಲಿ ಒಂದು ವಿನಮ್ರ ಮನವಿ
ಜಿಲ್ಲೆಯ ರಾಜಕಾರಣಿಗಳು, ಅದರಲ್ಲೂ ವಿಶೇಷವಾಗಿ ಬಿಜೆಪಿ ನಾಯಕರು ಮತ್ತು ಜನಪ್ರತಿನಿಧಿಗಳು, ಪರಿಸರ ಹೋರಾಟ ಮಾಡಿಯೇ ಇಂದು ಸರ್ಕಾರದಲ್ಲಿ ಸ್ಥಾನಮಾನ ಪಡೆದಿರುವ ಹೋರಾಟಗಾರರು – ಎಲ್ಲರೂ ‘ಇದು ಪರಿಸರ ಸ್ನೇಹಿ ಯೋಜನೆ ಎಂದು ಬೇಕಂತಲೇ ಭ್ರಮಿಸಿ’ ಯೋಜನೆಯನ್ನು ಸ್ವಾಗತಿಸುವ ಎಲ್ಲ ಲಕ್ಷಣಗಳೂ ತೋರುತ್ತಿವೆ. ಪ್ರಾಜ್ಞರಾದ ಸ್ದರ್ಣವಲ್ಲೀ ಶ್ರೀಗಳು ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅರಿತು ಇಡೀ ಹೋರಾಟದ ಮುಂದುವರಿಕೆಯ ಬಗ್ಗೆ ಮರುಚಿಂತನೆ ನಡೆಸಬೇಕು. ತೊಂಬತ್ತರ ದಶಕದ ಆರಂಭದಲ್ಲಿ ಅವರು ನಡೆಸಿದ ಬೇಡ್ತಿ ಉಳಿಸಿ ಆಂದೋಳನದ ಮಾದರಿಯಲ್ಲೇ ಈಗಲೂ ಪ್ರಬಲ ಸಂಘಟನೆ ಕಟ್ಟಿ ಹೋರಾಟ ನಡೆಸಬೇಕು. ಇದನ್ನು ಮುಂದಿನ ಪೀಳಿಗೆಯು ಖಂಡಿತ ಸ್ಮರಿಸಿಕೊಳ್ಳುತ್ತದೆ. ಹೋರಾಟವೊಂದರ ಸೂಕ್ಷ್ಮಗಳೆಲ್ಲವನ್ನೂ ಚೆನ್ನಾಗಿ ಅರಿತಿರುವ ಸ್ವರ್ಣವಲ್ಲೀ ಶ್ರೀಗಳು ಈ ಸಾಮಾಜಿಕ ಹೋರಾಟದ ಬಗ್ಗೆ ವಸ್ತುನಿಷ್ಠವಾಗಿ ಚಿಂತಿಸಿ ಖಚಿತ ನಿಲುವು ತಾಳುತ್ತಾರೆ , ಜನಾಭಿಪ್ರಾಯ ರೂಪಿಸುತ್ತಾರೆ, ಸರ್ವಸಮ್ಮತ ನಿರ್ಣಯಕ್ಕೆ ಬರುತ್ತಾರೆ ಎಂಬ ವಿಶ್ವಾಸವೊಂದೇ ಈಗಿರುವ ಬೆಳಕಿಂಡಿ.
ಯಾಕೆಂದರೆ ಉತ್ತರಕನ್ನಡದ ಪರಿಸರ ರಕ್ಷಣೆಯ ಬಗ್ಗೆ ಶ್ರಮಿಸಿದ ಪರಿಸರ ಹೋರಾಟಗಾರರಲ್ಲಿ ಬಹುತೇಕ ಮಂದಿ ಸರ್ಕಾರದ ಹುದ್ದೆಗಳಲ್ಲಿದ್ದಾರೆ. ‘ಯೋಜನೆ ಬೇಡ’ ಎನ್ನುವುದಕ್ಕೆ ಅವರ ಗಂಟಲು ಕಟ್ಟುತ್ತದೆ. ಇನ್ನುಳಿದವರಿಗೆ ವಿದೇಶಿ ಫಂಡ್ ಮುಖ್ಯವಾಗಿದೆಯೇ ಹೊರತು, ಜನಪರ ಸಂಗತಿಗಳು ನಿಕೃಷ್ಟ. ಬಹುತೇಕ ಜನಪ್ರತಿನಿಧಿಗಳು ಬಿಜೆಪಿಯವರೇ. ಸರ್ಕಾರದ ವಿರುದ್ಧ ಅವರೆಲ್ಲ ಹೋರಾಡುತ್ತಾರೆ ಎಂದು ನಂಬುವುದು ಈ ಸಂದರ್ಭದಲ್ಲಿ ಕಷ್ಟ.
ಹವ್ಯಕ ಬ್ರಾಹ್ಮಣರ ಮಠ ಎಂಬ ಹಣೆಪಟ್ಟಿಯಿದ್ದರೂ ಸಹಸ್ರಾರು ಬ್ರಾಹ್ಮಣೇತರ ಸಮುದಾಯಗಳನ್ನೂ ಬೇಡ್ತಿ ಚಳವಳಿಯಲ್ಲಿ ತೊಡಗಿಸಿದ ಸ್ವರ್ಣವಲ್ಲೀ ಶ್ರೀಗಳೇ ಈಗ ಇರುವ ಆಶಾಕಿರಣ ಎಂದು ಹೇಳಲು ನನಗೆ ಸಂಕೋಚವೇನೂ ಇಲ್ಲ. ಬದಲಿಗೆ ಸ್ವಯಂಪ್ರಜ್ಞೆಯ ವ್ಯಕ್ತಿತ್ವವೊಂದು ಈ ಬಗ್ಗೆ ಚಿಂತನೆ ನಡೆಸುತ್ತಲೇ ಇದೆಯಲ್ಲ ಎಂಬ ಸಮಾಧಾನವಿದೆ. ನಾಡಿನ ಶಕ್ತಿಕೇಂದ್ರ ಥರ್ಮಲ್ ಸ್ಥಾವರವೂ ಅಲ್ಲ; ಕೈಗಾ ಅಣುಸ್ಥಾವರವೂ ಅಲ್ಲ.
ನಮ್ಮ ಪರಂಪರೆಯ ಕೊಂಡಿಗಳನ್ನು ಉಳಿಸಿಕೊಂಡು ಬರುತ್ತಲೇ ಸಮರಸತೆಯ ಆಧುನಿಕ ಬಾಳ್ವೆಯ ಬಗ್ಗೆ ಸೂತ್ರ ರೂಪಿಸುವ ಸ್ವರ್ಣವಲ್ಲೀ ಶ್ರೀಗಳಂಥ ವ್ಯಕ್ತಿತ್ವಗಳೇ ನಮ್ಮ ಶಕ್ತಿಕೇಂದ್ರಗಳಾಗಿದ್ದರೆ ಸಾಕು ಎನ್ನಿಸುತ್ತದೆ.
ಹೆಚ್ಚುವರಿ ಓದಿಗೆ:
- ನೈಸರ್ಗಿಕ ಅನಿಲ ಸ್ಥಾವರಗಳ ಅಪಾಯದ ಬಗ್ಗೆ ಅಮೆರಿಕದಿಂದ ಪ್ರಕಟವಾದ ಈ ಲೇಖನ ಓದಿ. ಆದರೆ ಇಲ್ಲಿ ಕಲ್ಲಿದ್ದಲು ಆಧಾರಿತ ಸ್ಥಾವರಗಳು ಬೇಕು ಎಂಬ ವಾದವೂ ಇದೆ. ನೆನಪಿಡಿ: ನಾವೀಗ ವಿರೋಧಿಸುತ್ತಿರುವುದು ಎಲ್ಲ ಬಗೆಯ ಸ್ಥಾವರಗಳನ್ನು.
- ಕಲ್ಲಿದ್ದಲು ಥರ್ಮಲ್ ಸ್ಥಾವರಗಳು ಹೇಗೆ ಅಪಾಯಕಾರಿ ಎಂಬ ಬಗ್ಗೆ ನಾನು ಸಂಗ್ರಹಿಸಿರುವ ಮಾಹಿತಿಗಳ ಕಡತ ಇಲ್ಲಿದೆ: http://www.mediafire.com/?nkdcwhxu2zu
- ತದಡಿಗೆ ಹೋಗಿ ಅಧ್ಯಯನ ಮಾಡಿ ಯು ಎಂ ಪಿ ಪಿ ಯೋಜನೆಯ ಅಪಾಯಗಳ ಬಗ್ಗೆ ನಾನು ಬರೆದ ಕಿರುಪುಸ್ತಿಕೆಯನ್ನು ಇಲ್ಲಿ ಓದಿ.
- ಭಾರತದ ನೈಸರ್ಗಿಕ ಅನಿಲ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲುವ ತಾಜಾ ಲೇಖನವೊಂದು ಇಲ್ಲಿದೆ. ಅಮೆರಿಕಾ ಸರ್ಕಾರ ಪ್ರಕಟಿಸಿದ್ದು.
- ನೈಸರ್ಗಿಕ ಅನಿಲ ಉತ್ಪಾದನೆಯ ವಿವರಗಳನ್ನು ಇಲ್ಲಿ ಓದಿ