ನಮ್ಮ ನಡುವಿನ ಪ್ರಮುಖ ಇಂಧನ ವಿಷಯತಜ್ಞ ಶ್ರೀ ಶಂಕರ ಶರ್ಮರವರು ಬರೆದಿರುವ `ಇಂಟೆಗ್ರೇಟೆಡ್ ಪವರ್ ಪಾಲಿಸಿ’ ಪುಸ್ತಕವನ್ನು ದಿನಾಂ ೧೦ ಅಕ್ಟೋಬರ್ ೨೦೧೨ರ ಬುಧವಾರ ಮಲ್ಲೇಶ್ವರಂ ೧೮ನೇ ಅಡ್ಡರಸ್ತೆಯಲ್ಲಿರುವ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಮಿತ್ರಮಾಧ್ಯಮದ ಎಲ್ಲ ಸಹೃದಯ ಬೆಂಬಲಿಗರಿಗೆ ಹೃತ್ಪೂರ್ವಕ ಸ್ವಾಗತ. ಕಾರ್ಯಕ್ರಮವು ಕಾಲೇಜಿನ ಎರಡನೇ ಮಹಡಿಯಲ್ಲಿರುವ ಡಾ. ಕೆ ವಿ ಎನ್ ಶಾಸ್ತ್ರಿ ಸ ಭಾಂಗಣದಲ್ಲಿ ಸಂಜೆ ೪.೩೦ರಿಂದ ನಡೆಯಲಿದೆ. ಮಿತ್ರಮಾಧ್ಯಮವು ಸಮಗ್ರ ವಿಕಾಸ ಸಂಘಟನೆಯೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಕರ್ನಾಟಕ ರಾಜ್ಲಿಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ. ವಾಮನ ಆಚಾರ್ಯರವರು ಪುಸ್ತಕವನ್ನು ಬಿಡುಗಡೆ ಮಾಡಲಿದ್ದು ಕರ್ನಾಟಕ ರಾಜ್ಯ ಜೈವಿಕ ಇಂಧನ ಮಂಡಳಿಯ ಕಾರ್ಯಕಾರಿ ಅಧ್ಯಕ್ಷ ಶ್ರೀ ವೈ ಬಿ ರಾಮಕೃಷ್ಣರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲೇಖಕ ಶ್ರೀ ಶಂಕರ ಶರ್ಮರವರೂ ಅಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದ ಆಹ್ವಾನಪತ್ರವನ್ನು ಇದರೊಂದಿಗೆ ನೀಡಲಾಗಿದೆ. ದಯಮಾಡಿ ಬನ್ನಿ. ಇಂಧನ ಚರ್ಚೆಯಲ್ಲಿ ಭಾಗವಹಿಸಿ.
ಮಿತ್ರಮಾಧ್ಯಮದಲ್ಲಿ ಶ್ರೀ ಶಂಕರ ಶರ್ಮರು ಬರೆದ ಹಲವು ಲೇಖನಗಳನ್ನು ನೀವು ಓದಿರುತ್ತೀರಿ ಎಂದು ನಾನು ನಂಬಿದ್ದೇನೆ.